Highest Paid OTT Actor: ಸಲ್ಮಾನ್‌, ಸೈಫ್ ಅಲ್ಲ.. 125 ಕೋಟಿ ಚಾರ್ಜ್ ಮಾಡಿದ OTT ರಾಜ ಯಾರು ಗೊತ್ತಾ?

Highest Paid Indian Actor on OTT:  ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ OTT ನಟ ಯಾರು ಗೊತ್ತಾ. ವೆಬ್ ಸೀರಿಸ್‌ಗಾಗಿ ಒಬ್ಬ ನಟ 125 ಕೋಟಿ ಸಂಭಾವನೆ ಪಡೆದಿದ್ದಾರೆ.   

Written by - Chetana Devarmani | Last Updated : Jul 19, 2023, 01:32 PM IST
  • ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ OTT ನಟ
  • 125 ಕೋಟಿ ಚಾರ್ಜ್ ಮಾಡಿದ OTT ರಾಜ ಯಾರು?
  • ಸೈಫ್‌ ಅಲಿ ಖಾಣ್‌, ಸಲ್ಮಾನ್‌ರನ್ನು ಹಿಂದಿಕ್ಕಿದ ನಟ
Highest Paid OTT Actor: ಸಲ್ಮಾನ್‌, ಸೈಫ್ ಅಲ್ಲ.. 125 ಕೋಟಿ ಚಾರ್ಜ್ ಮಾಡಿದ OTT ರಾಜ ಯಾರು ಗೊತ್ತಾ?  title=
Ajay Devagan

Highest Paid OTT Actor: ಈಗ ನಾಯಕ ನಟರು ಹಿರಿತೆರೆಗೆ ಮಾತ್ರ ಸೀಮಿತವಾಗಿಲ್ಲ. ಒಟಿಟಿಯಲ್ಲಿಯೂ ನಟರು ಕಮಾಲ್‌ ಮಾಡುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ OTT ನಟ ಯಾರು ಗೊತ್ತಾ. ನಿಮ್ಮ ನಾಲಿಗೆಯಲ್ಲಿ ಸಲ್ಮಾನ್ ಖಾನ್ ಅಥವಾ ಶಾಹಿದ್ ಕಪೂರ್ ಹೆಸರು ಬರುತ್ತಿದ್ದರೆ, ಅದು ತಪ್ಪು. ಅವರಿಬ್ಬರೂ OTT ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲ. ಹಾಗಾದರೆ ವೆಬ್ ಸೀರಿಸ್‌ಗಾಗಿ ಯಾವ ನಟ 125 ಕೋಟಿ ಸಂಭಾವನೆ ಪಡೆದಿದ್ದಾರೆ ಇಲ್ಲಿ ತಿಳಿಯಿರಿ. 

OTT ಪ್ಲಾಟ್‌ಫಾರ್ಮ್‌ಗಳ ಯಶಸ್ಸು ಮನರಂಜನಾ ಉದ್ಯಮದ ಸಂಪೂರ್ಣ ಚಿತ್ರಣವನ್ನು ಬದಲಾಯಿಸಿದೆ. ಅನೇಕ OTT ಶೋಗಳು ಮತ್ತು ಚಲನಚಿತ್ರಗಳ ಬಜೆಟ್ ಇದ್ದಕ್ಕಿದ್ದಂತೆ ಹೆಚ್ಚುತ್ತಿದೆ. ನಂತರ ದೊಡ್ಡ ತಾರೆಯರು OTT ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.

ಇದನ್ನೂ ಓದಿ: ಸುದೀಪ್‌ vs ಕುಮಾರ್:‌ "ರಾಜ್​ ಕುಟುಂಬವೇ ಹೆಡ್​ ಆಫೀಸ್" ಎಂದ ರವಿಚಂದ್ರನ್​

ಸೈಫ್ ಅಲಿ ಖಾನ್ ಬಾಲಿವುಡ್‌ನ ಸ್ಟಾರ್‌ ನಟರಲ್ಲಿ ಒಬ್ಬರು. ಅವರು OTT ಯ ಆರಂಭಿಕ ಹಂತದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಸೈಫ್ ಅಲಿ ಖಾನ್ ಸೇಕ್ರೆಡ್ ಗೇಮ್ಸ್‌ನಲ್ಲಿ (Sacred Games) ನವಾಜುದ್ದೀನ್ ಸಿದ್ದಿಕಿ, ಪಂಕಜ್ ತ್ರಿಪಾಠಿ ಮತ್ತು ರಾಧಿಕಾ ಆಪ್ಟೆ ಅವರೊಂದಿಗೆ ಕಾಣಿಸಿಕೊಂಡರು. ವರದಿ ಪ್ರಕಾರ, ನೆಟ್‌ಫ್ಲಿಕ್ಸ್‌ನ ಈ ವೆಬ್‌ ಸಿರೀಸ್‌ ಮೊದಲ 8 ಕಂತುಗಳಿಗೆ ಸೈಫ್ ಅಲಿ ಖಾನ್ 15 ಕೋಟಿ ರೂ. ಸಂಭಾವನೆ ಪಡೆದರು.

ಬಿಗ್ ಬಾಸ್ OTT ಎರಡನೇ ಸೀಸನ್ ನಲ್ಲಿ ಕರಣ್ ಜೋಹರ್ ಬದಲಿಗೆ ಸಲ್ಮಾನ್ ಖಾನ್ ವೆಬ್ ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಒಂದು ಸಂಚಿಕೆಗೆ 12.5 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತಿದ್ದಾರೆ.

ವರದಿಗಳ ಪ್ರಕಾರ, ವೆಬ್ ಸೀರೀಸ್‌ಗಾಗಿ 125 ಕೋಟಿ ರೂಪಾಯಿಗಳನ್ನು ಪಡೆದ ಮೊದಲ ಭಾರತೀಯ ನಟ ಅಜಯ್ ದೇವಗನ್. ಹೌದು...ಅಜಯ್ ದೇವಗನ್ ಅವರು ರುದ್ರ (Rudra: The Edge of Darkness) ವೆಬ್ ಸಿರೀಸ್ ಮೂಲಕ OTT ಗೆ ಪಾದಾರ್ಪಣೆ ಮಾಡಿದರು. ವರದಿಗಳ ಪ್ರಕಾರ, 7 ಸಂಚಿಕೆಗಳ ಸರಣಿಯಲ್ಲಿ ಅಜಯ್ ದೇವಗನ್ ಪ್ರತಿ ಸಂಚಿಕೆಗೆ ಶುಲ್ಕವಾಗಿ 18 ಕೋಟಿ ರೂ. ಪಡೆದಿದ್ದರೆ. ಏಳು ಕಂತುಗಳಿಗೆ ಒಟ್ಟು 125 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. 

ಇದನ್ನೂ ಓದಿ: PHOTOS: ಎಲ್ಲೆ ಮೀರಿ.. ಬರೀ ಮೈಯಲ್ಲೇ ಬೋಲ್ಡ್‌ ಸೀನ್‌ಗಳಲ್ಲಿ ನಟಿಸಿದ ನಟಿಯರಿವರು.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News