ಹೊಸ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲ್ಮ್ಸ್‌.. ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ?

ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್‌ ಚಿತ್ರರಂಗದಲ್ಲಿ ಹೊಸ ಅಧ್ಯಾ ಬರೆಯಿತು. ಈ ಚಿತ್ರ ಸ್ಯಾಂಡಲ್‌ವುಡ್‌ನ್ನು ಮತ್ತೊಂದು ಲೆವಲ್‌ಗೆ ಕೊಂಡೊಯ್ಯಿತು. ಇದೀಗ ನೂತನ ಅಧ್ಯಾಯಕ್ಕೆ ಹೊಂಬಾಳೆ ಫಿಲ್ಮ್ಸ್‌ ರೆಡಿಯಾಗುತ್ತಿರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. 

Edited by - Chetana Devarmani | Last Updated : Apr 21, 2022, 01:22 PM IST
  • ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಹೊಸ ಸಿನಿಮಾ ಪ್ರಕಟಿಸಿದೆ
  • ನಿರ್ದೇಶಕಿ ಸುಧಾ ಕೊಂಗಾರ ಅವರ ಜೊತೆ ಚಿತ್ರ ಮಾಡಲು ಮುಂದಾದ ಹೊಂಬಾಳೆ
  • ತಮಿಳು ನಟ ಸೂರ್ಯ ಅಭಿನಯದ 'ಸೂರರೈ ಪೊಟ್ರು' ಗೆ ಆಕ್ಷನ್ ಕಟ್ ಹೇಳಿದ್ದ ಡೈರೆಕ್ಟರ್‌
ಹೊಸ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲ್ಮ್ಸ್‌.. ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ? title=
ಹೊಂಬಾಳೆ

ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್‌ ಚಿತ್ರರಂಗದಲ್ಲಿ ಹೊಸ ಅಧ್ಯಾ ಬರೆಯಿತು. ಈ ಚಿತ್ರ ಸ್ಯಾಂಡಲ್‌ವುಡ್‌ನ್ನು ಮತ್ತೊಂದು ಲೆವಲ್‌ಗೆ ಕೊಂಡೊಯ್ಯಿತು. ಇದೀಗ ನೂತನ ಅಧ್ಯಾಯಕ್ಕೆ ಹೊಂಬಾಳೆ ಫಿಲ್ಮ್ಸ್‌ ರೆಡಿಯಾಗುತ್ತಿರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಯಶ್ ಅಭಿನಯದ ಡೈರೆಕ್ಟರ್‌ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್‌ 2 ಸದ್ಯ ಬಾಕ್ಸ್ ಆಫೀಸ್‌ನಲ್ಲಿ ತೂಫಾನ್‌ ಎಬ್ಬಿಸಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳಲ್ಲಿ 723.15 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ. ಈ ಸಿನಿಮಾ ಬಳಿಕ ಇದೀಗ ಹೊಂಬಾಳೆ ಫಿಲ್ಮ್ಸ್‌ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದೆ. 

ಇದನ್ನೂ ಓದಿ: KGF​ಗೂ ಮೊದಲೇ ಪುನೀತ್‌ಗೆ ಕತೆ ಹೇಳಿದ್ದ ಪ್ರಶಾಂತ್​ ನೀಲ್​! ಇದೇ ಟೈಟಲ್‌..

ಇದೀಗ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಹೊಸ ಸಿನಿಮಾ ಪ್ರಕಟಿಸಿದೆ. ಈ ಹಿಂದೆ ತಮಿಳು ನಟ ಸೂರ್ಯ, ಅಪರ್ಣಾ ಬಾಲಮುರಳಿ ಅಭಿನಯದ 'ಸೂರರೈ ಪೊಟ್ರು' ಗೆ ಆಕ್ಷನ್ ಕಟ್ ಹೇಳಿದ್ದ ಸುಧಾ ಕೊಂಗಾರ ಅವರ ಜೊತೆ ತಮ್ಮ ಮುಂದಿನ ಸಿನಿಮಾ ಮಾಡುವ ಕುರಿತು ಹೊಂಬಾಳೆ ಫಿಲ್ಮ್ಸ್‌ ತಿಳಿಸಿದೆ. 

 

 

ನಿರ್ದೇಶಕಿ ಮತ್ತು ಚಿತ್ರಕಥೆಗಾರರಾಗಿರುವ ಸುಧಾ ಕೊಂಗಾರ ಪ್ರಸಾದ್ ಪ್ರಧಾನವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2008 ರಲ್ಲಿ ತೆಲುಗು ಚಿತ್ರ ಆಂಧ್ರ ಅಂದಗಾಡು ಮೂಲಕ ನಿರ್ದೇಶನಕ್ಕೆ ಪ್ರವೇಶ ಮಾಡಿದರು ಮತ್ತು ನಂತರ ತಮಿಳು ಚಿತ್ರ ದ್ರೋಹಿ ನಿರ್ದೇಶಿಸಿದರು. 

ಇದನ್ನೂ ಓದಿ: ಬಾಕ್ಸ್ಆಫೀಸ್‌ನಲ್ಲಿ ಕೆಜಿಎಫ್-2 ತೂಫಾನ್: ಕೇವಲ 6 ದಿನಕ್ಕೆ 676 ಕೋಟಿ ರೂ. ಗಳಿಕೆ!

ಇತ್ತೀಚೆಗೆ 'ಸೂರರೈ ಪೊಟ್ರು' ಗೆ ಆಕ್ಷನ್ ಕಟ್ ಹೇಳಿದ್ದು, ಇದು ಭಾರೀ ಜನ ಮೆಚ್ಚುಗೆ ಪಡೆಯಿತು. ಇದೀಗ ಸುಧಾ ಕೊಂಗಾರ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿ ಮತ್ತೊಂದು ಸಿನಿಮಾಗೆ ಆಕ್ಷನ್‌ ಕಟ್‌ ಹೇಲಲು ರೆಡಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News