ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ KGF2.. 7 ದಿನಕ್ಕೆ 723.15 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್‌!

KGF 2 Collection: ಯಶ್ ಅಭಿನಯದ ಡೈರೆಕ್ಟರ್‌ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್‌ 2 ಸದ್ಯ ಬಾಕ್ಸ್ ಆಫೀಸ್‌ನಲ್ಲಿ ತೂಫಾನ್‌ ಎಬ್ಬಿಸಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳಲ್ಲಿ 723.15 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ. 

Written by - Chetana Devarmani | Last Updated : Apr 21, 2022, 10:43 AM IST
  • ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ KGF2
  • 7 ದಿನಕ್ಕೆ 723.15 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್‌!
  • ಬಾಕ್ಸ್ ಆಫೀಸ್‌ನಲ್ಲಿ ತೂಫಾನ್‌ ಎಬ್ಬಿಸಿದ ಕೆಜಿಎಫ್‌ 2
ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ KGF2.. 7 ದಿನಕ್ಕೆ 723.15 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್‌! title=
ಕೆಜಿಎಫ್‌ 2

ಯಶ್ ಅಭಿನಯದ ಡೈರೆಕ್ಟರ್‌ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್‌ 2 ಸದ್ಯ ಬಾಕ್ಸ್ ಆಫೀಸ್‌ನಲ್ಲಿ ತೂಫಾನ್‌ ಎಬ್ಬಿಸಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳಲ್ಲಿ 723.15 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ. ರಿಲೀಸ್‌ ಆದ ಮೊದಲ ವಾರವೇ ಕೆಜಿಎಫ್ 2 ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವ ಮೂಲಕ ಎಲ್ಲ ದಾಖಲೆಗಳನ್ನು ಉಡೀಸ್‌ ಮಾಡಿದೆ. 

ದಿನ 1 ವರ್ಲ್ಡ್ ವೈಡ್ 164.20 ಕೋಟಿ ರೂ.
ದಿನ 2 ವರ್ಲ್ಡ್ ವೈಡ್ 128.90 ಕೋಟಿ ರೂ.
ದಿನ 3 ವರ್ಲ್ಡ್ ವೈಡ್ 137.10 ಕೋಟಿ ರೂ.
ದಿನ 4 ವರ್ಲ್ಡ್ ವೈಡ್ 127.25 ಕೋಟಿ ರೂ.
ದಿನ 5 ವರ್ಲ್ಡ್ ವೈಡ್  66.35 ಕೋಟಿ ರೂ.
ದಿನ 6 ವರ್ಲ್ಡ್ ವೈಡ್ 52.35 ಕೋಟಿ ರೂ.
ದಿನ 7 ವರ್ಲ್ಡ್ ವೈಡ್ 48 ಕೋಟಿ ರೂ.
ಒಟ್ಟು 7 ದಿನಗಳ ವರ್ಲ್ಡ್ ವೈಡ್ ಕಲೆಕ್ಷನ್ 723.15 ಕೋಟಿ

ಕೆಜಿಎಫ್ ಚಾಪ್ಟರ್‌ 2 ಸಿನಿಮಾ ಬಿಡುಗಡೆಗೂ ಮುನ್ನವೇ ಎಲ್ಲರ ಕುತೂಹಲ ಕೆರಳಿಸಿತ್ತು. ನರಾಚಿ ಲೋಕದಲ್ಲಿ ಗರುಡನ ಕೊಲಡ ಬಳಿಕ ಏನಾಯ್ತು? ರಾಕಿಭಾಯ್‌ ಏನಾದ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಬಂದಿದ್ದೆ ಕೆಜಿಎಫ್‌ 2 ಸಿನಿಮಾ. ಕೇವಲ 5 ದಿನಗಳಲ್ಲಿ ಹಿಂದಿ ಬೆಲ್ಟ್‌ನಲ್ಲಿ ರೂ 200 ಕೋಟಿ ನಿವ್ವಳ ಮಾರ್ಕ್ ಅನ್ನು ತಲುಪುವ ಮೂಲಕ ಕನ್ನಡ ಚಿತ್ರರಂಗದತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿತು. ಬಾಹುಬಲಿ 2 ರ ದಾಖಲೆಯನ್ನು ಉಡೀಸ್‌ ಮಾಡಿತು.

ಇದನ್ನೂ ಓದಿ:ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾವಿಸಿದ ಶಿವಣ್ಣ.. ಅಭಿಮಾನಿಗಳಲ್ಲಿ ಆತಂಕ!

ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಉತ್ತರ ಭಾರತದಂತಹ ಪ್ರಮುಖ ಬಾಕ್ಸ್ ಆಫೀಸ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತು. ಒಂದೇ ಒಂದು ವಾರದಲ್ಲಿ ಜನರ ಮನಗೆದ್ದಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸ್‌ನ್ನು ಸಹ ಕೊಳ್ಳೆ ಹೊಡೆಯಿತು. 

'ಕೆಜಿಎಫ್-2' ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದ್ದು, ಗಳಿಕೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದುಹಾಕಿದೆ. ರಾಕಿಂಗ್ ಸ್ಟಾರ್ ಯಶ್ ಇದೀಗ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯುತ್ತಿದ್ದಾರೆ. ಏ.14ರಂದು ಸುಮಾರು 10 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ರಿಲೀಸ್ ಆದ 'ಕೆಜಿಎಫ್-2' ಸಿನಿಮಾ ಗಳಿಕೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ದೇಶ-ವಿದೇಶಗಳಲ್ಲಿ 'ಕೆಜಿಎಫ್-2' ಸಿನಿಮಾಗೆ ದೊಡ್ಡ ಯಶಸ್ಸು ಸಿಕ್ಕಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ‘ಸಲಾಂ ರಾಕಿಭಾಯ್’ ಎಂದಿದ್ದಾರೆ.

 

 

ಯಶ್ ವೃತ್ತಿಜೀವನಕ್ಕೆ ಬಹುದೊಡ್ಡ ಯಶಸ್ಸು ತಂದುಕೊಟ್ಟ 'ಕೆಜಿಎಫ್-2' ಮೇಕಿಂಗ್ ಕಂಡು ಪ್ರತಿಯೊಬ್ಬ ಪ್ರೇಕ್ಷಕರು ವಾವ್ಹ್ ಎಂದಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾಗೆ ತಲೆಬಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಮತ್ತೊಮ್ಮೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ನಟಿ ಕಾಜಲ್‌ ಅಗರ್‌ವಾಲ್‌ ಮಗುವಿನ ಹೆಸರು ಬಹಿರಂಗ!

ಬಿಡುಗಡೆಯಾದ ಎಲ್ಲಾ ಕಡೆಯೂ ಭರ್ಜರಿ ಓಪನಿಂಗ್ ಪಡೆದುಕೊಂಡ 'ಕೆಜಿಎಫ್-2' ಗಲ್ಲಾಪೆಟ್ಟಿಯಲ್ಲಿ ಅನೇಕ ದಾಖಲೆ ನಿರ್ಮಿಸಿದೆ. ಇದೇ ರೀತಿ ಎರಡನೇ ವಾರಾಂತ್ಯದವರೆಗೂ ಉತ್ತಮ ಮೊತ್ತ ಕಲೆ ಹಾಕಿದರೆ 2022 ರ ಅತಿ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಕೆಜಿಎಫ್‌ ಚಾಪ್ಟರ್‌ 2 ಸಹ ಒಂದಾಗಿ ಹೊರಹೊಮ್ಮುವುದು ಖಚಿತ ಎನ್ನಲಾಗ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News