ನವದೆಹಲಿ: ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರು ಸಲಿಂಗಕಾಮಿ ಪ್ರೇಮ ಕಥನವಿರುವ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.ದಾವೋಸ್ ಇತ್ತೀಚೆಗೆ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅವರು ಈ ವಿಚಾರವನ್ನು ತಿಳಿಸಿದರು.
ಬಾಲಿವುಡ್ ನಲ್ಲಿ ರೊಮ್ಯಾಂಟಿಕ್ ಚಿತ್ರಗಳಿಂದಲೇ ಜನಪ್ರೀಯರಾಗಿರುವ ಕರಣ್ ಜೋಹರ್ ಈಗ ಸಲಿಂಗಕಾಮದ ಪ್ರೇಮದ ಕಥೆಯ ಕುರಿತಾಗಿ ಚಲನಚಿತ್ರ ಮಾಡುವುದಾಗಿ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ಇಬ್ಬರು ಪ್ರಮುಖ ನಟರು ಅಭಿನಯಿಸಲಿದ್ದಾರೆ ಎಂದು ತಿಳಿಸಿರುವ ಅವರು ಆದರೆ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವ ವಿಚಾರವಾಗಿ ಇನ್ನು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಈ ಹಿಂದೆ ಭಾರತದಲ್ಲಿ ಸಲಿಂಗಕಾಮಿ ಪ್ರೇಮದ ಕುರಿತಾಗಿ ಬಂತಹ ಶಬ್ನಾ ಅಜ್ಮಿ ಹಾಗೂ ನಂದಿತಾ ದಾಸ್ ಅಭಿನಯಿಸಿದ ದೀಪಾ ಮೆಹ್ತಾ ರವರ ಸಿನಿಮಾ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು ಶಿವಸೇನಾ ಮತ್ತು ಬಜರಂಗದಳ ದಂತಹ ಬಲಪಂಥೀಯ ಸಂಘಟನೆಗಳು ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದವು.
ಇತ್ತೀಚಿಗೆ ಸುಪ್ರೀಂಕೋರ್ಟ್ ಸಲಿಂಗಕಾಮ ವಿಚಾರವಾಗಿ ತಡೆಯಾಗಿದ್ದ ಸೆಕ್ಷನ್ 377 ನ್ನು ಈಗ ಅದು ತೆರವುಗೊಳಿಸಿದೆ.