ಬೆಂಗಳೂರು: ದಿ ಕೇರಳ ಚಿತ್ರ ಬಿಡುಗಡೆಗೂ ಮುನ್ನವೇ ಬಾರಿ ಸುದ್ದಿಯಲ್ಲಿದೆ. ಆ ಸಿನಿಮಾ ಟ್ರೈಲರ್ ಪೋಸ್ಟರ್ ಗಳು ತ್ರೀವ್ರ ವಿರೋಧವನ್ನು ಹುಟ್ಟಿಸಿವೆ. ಈ ಸಿನಿಮಾ ಕುರಿತಂತೆ ಈಗಾಗಲೇ ಹಲವಾರು ರೀತಿಯ ಅಭಿಪ್ರಾಯಗಳು ಮೂಡಿವೆ.
ಬಾಲಿವುಡ್ ನಟಿ ಅದಾ ಶರ್ಮಾ ನಟಿಸಿರುವ ಪ್ರಮುಖ ಪಾತ್ರವು ಈ ಸಿನಿಮಾ ಟ್ರೈಲರ್ ವಿವಾದ ಸೃಷ್ಟಿಸಿದೆ. ಮುಸ್ಲಿಂ ಜನಾಂಗದವರನ್ನು ವಿಭಿನ್ನವಾಗಿ ತೋರಿಸಿ ಸಮಾಜದಲ್ಲಿ ಕೋಮು ಗಲಾಭೆ ಸೃಷ್ಠಿಸಲು ಕಾರಣವಾಗಿದೆ ಎಂದು ಸಿನಿಮಾದ ಮೇಲೆ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: Shivanna's Daughter New Film: ಚಿತ್ರ ನಿರ್ಮಾಣದಲ್ಲಿ ಶಿವಣ್ಣನ ಪುತ್ರಿ: ನಿವೇದಿತಾಳ ಹೊಸ ಸಿನಿಮಾ ಯಾವುದು ಗೊತ್ತಾ..?
ಇದೀಗ ಮಂಗಳವಾರ, ದೆಹಲಿಯ ಜೆಎನ್‌ಯುನಲ್ಲಿ ಕೇರಳ ಸ್ಟೋರಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಕುರಿತು ಮಾತಾನಾಡಿರುವ ನಿರ್ದೇಶಕ ಸುದೀಪ್ತೋ ಸೇನ್, ವಿಪುಲ್ ಅಮೃತಲಾಲ್ ಶಾ ಮತ್ತು ನಟ ಅದಾ ಶರ್ಮಾ ನಟಿಸಿರುವ ತಮ್ಮ ಚಿತ್ರವನ್ನು ಜನರು ಈ ಸಿನಿಮಾ ನೋಡಬೇಕುಇಷ್ಟಪಟ್ಟರೆ ಅದು ನನಗೆ ದೊಡ್ಡ ಬಹುಮಾನ ಎಂದಿದ್ದಾರೆ.
ದೆಹಲಿಯ ಜೆಎನ್‌ಯುನಲ್ಲಿ ಕೇರಳ ಸ್ಟೋರಿ ಪ್ರದರ್ಶನ ಬಳಿಕ ಚಿತ್ರ ತಂಡ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. "ಈ ಚಿತ್ರವನ್ನು ಜನರಿಗೆ ಹೇಗೆ ತೋರಿಸಬೇಕು ಮತ್ತು ಯಾವ ರೀತಿಯ ಚರ್ಚೆ ನಡೆಯಬೇಕು ಎಂಬುದು ದೊಡ್ಡ ಜವಾಬ್ದಾರಿಯಾಗಿದೆ ಎಂದರು.
ಈ ಸಿನಿಮಾಕ್ಕಾಗಿ ಏಳು ವರ್ಷ ಸತತ ಪ್ರಯತ್ನ ಪಟ್ಟೆವು ಎಂದಿದ್ದಾರೆ. ನಮ್ಮ ಸಿನಿಮಾದ ಮೂಲಕ ಮೂರು ಹುಡುಗಿಯರ ಕಥೆಯನ್ನು ಹೇಳುತ್ತಿದ್ದೇವೆ. ಮಾಧ್ಯಮ ವರ್ಗದ ಮಕ್ಕಳು ಸಾವನಪ್ಪಿದ್ದರೆ, ಅವರ ಪೋಷಕರು ನ್ಯಾಯಕ್ಕಾಗಿ ಪರಿತಪಿಸುವುದನ್ನು ಕಾಣಬಹುದು.
ಇದನ್ನೂ ಓದಿ: Bhairati Rangal : ಕಬ್ಜ ಯಶಸ್ಸಿನ ಬೆನ್ನಲ್ಲೇ ಭೈರತಿ ರಣಗಲ್ ಗೆ ಸಜ್ಜಾದ ಶಿವಣ್ಣ: ಮುಂದಿನ ಚಿತ್ರದ ಸುಳಿವು ನೀಡಿದ ಮುತ್ತಣ್ಣ!
ಈಗಾಗಲೇ ಸಿನಿಮಾಕ್ಕೆ ನ್ಯಾಯ ಸಲುವಾಗಿ "ನಮ್ಮ ನ್ಯಾಯಾಲಯಗಳ ಮೇಲೆ ನಮಗೆ ಶೇಕಡಾ 100 ರಷ್ಟು ನಂಬಿಕೆ ಇದೆ, ನ್ಯಾಯಾಲಯವು ಈಗಾಗಲೇ ಚಿತ್ರವನ್ನು ಗಮನಿಸಿ ಇದು ಕಲಾಕೃತಿಯಾಗಿದೆ. ಇದು ದ್ವೇಷ ಹಬ್ಬಿಸುವ ಸಿನಿಮಾವಲ್ಲ ಎಂದು ವರದಿಯನ್ನು ನೀಡಿದೆ. ಹಾಗಾಗಿ ನಮ್ಮ ಚಿತ್ರ ತಂಡಕ್ಕೆ ನ್ಯಾಯ ಸಿಗುತ್ತದೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Shivanna's Daughter New Film: ಚಿತ್ರ ನಿರ್ಮಾಣದಲ್ಲಿ ಶಿವಣ್ಣನ ಪುತ್ರಿ: ನಿವೇದಿತಾಳ ಹೊಸ ಸಿನಿಮಾ ಯಾವುದು ಗೊತ್ತಾ..?
ಸುದೀಪ್ತೋ ಸೇನ್ ಅವರ ನೇತೃತ್ವದಲ್ಲಿ ಮತ್ತು ವಿಪುಲ್ ಅಮೃತಲಾಲ್ ಷಾ ನಿರ್ಮಾಣದ ಈ ಚಲನಚಿತ್ರವು ಮೇ 5, 2023 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಕೇರಳ ಕಥೆಯಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.