ದಿ ರೆಕಾರ್ಡಿಂಗ್ ಅಕಾಡೆಮಿ ಮತದಾನ ಸದಸ್ಯರಾಗಿ ಇಂಡೋ-ಆಸ್ಟ್ರೇಲಿಯನ್ ಗಾಯಕ ಶ್ರೀರಾಮ್ ಅಯ್ಯರ್ ಆಯ್ಕೆ .

The Recording academy : ಪ್ರತಿಷ್ಠಿತ ರೆಕಾರ್ಡಿಂಗ್ ಅಕಾಡೆಮಿ (ಗ್ರ್ಯಾಮಿ ಪ್ರಶಸ್ತಿಗಳ ಮನೆ) ಅವರು ಪ್ರತಿವರ್ಷದಂತೆ ಈ ವರ್ಷವೂ ಆಯ್ದ ಸಂಗೀತಗಾರರನ್ನು "ದಿ ರೆಕಾರ್ಡಿಂಗ್ ಅಕಾಡೆಮಿ"ಗೆ ಮತದಾನದ ಸದಸ್ಯರಾಗಲು ಆಹ್ವಾನಿಸಿದ್ದರು.   

Written by - YASHODHA POOJARI | Edited by - Savita M B | Last Updated : Jul 21, 2023, 12:21 PM IST
  • "ದಿ ರೆಕಾರ್ಡಿಂಗ್ ಅಕಾಡೆಮಿ"ಗೆ ಮತದಾನದ ಸದಸ್ಯರಾಗಲು ಆಹ್ವಾನಿಸಲಾಗಿತ್ತು
  • ಶ್ರೀರಾಮ್ ಅಯ್ಯರ್ ಮತದಾನದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
  • ಕಿವಿ - ಇಂಡಿಯನ್ ಸಂಸ್ಥೆ ಮೂಲಕ ನನ್ನ ಮೊದಲ ಆಲ್ಬಂ ಭಾರತದಲ್ಲಿ ಬಿಡುಗಡೆಯಾಯಿತು
ದಿ ರೆಕಾರ್ಡಿಂಗ್ ಅಕಾಡೆಮಿ ಮತದಾನ ಸದಸ್ಯರಾಗಿ ಇಂಡೋ-ಆಸ್ಟ್ರೇಲಿಯನ್ ಗಾಯಕ ಶ್ರೀರಾಮ್ ಅಯ್ಯರ್ ಆಯ್ಕೆ . title=

ಈ ಬಾರಿ  ಆಸ್ಟ್ರೇಲಿಯಾದ ಮೆಲ್ಬೊರ್ನ್‌ ನಿವಾಸಿ, ಭಾರತೀಯ ಗಾಯಕ ಶ್ರೀರಾಮ್ ಅಯ್ಯರ್ ಮತದಾನದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕಳೆದ 23ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮ್ ಅಯ್ಯರ್, ರೆಕಾರ್ಡಿಂಗ್ ಅಕಾಡೆಮಿ ಗೆ ಮತದಾನದ ಸದಸ್ಯನಾಗಿ ಆಯ್ಕೆಯಾಗಿರುವುದಕ್ಕೆ ಸಂತಸಪಟ್ಟಿದ್ದಾರೆ. 

ಇದನ್ನೂ ಓದಿ-Ram Charan: ಮಗಳ ಮುದ್ದಾದ ವಿಡಿಯೋ ಹಂಚಿಕೊಂಡ ರಾಮ್‌ಚರಣ್‌, ಸೋ ಕ್ಯೂಟ್‌ ಎಂದ ಫ್ಯಾನ್ಸ್‌!

2007 ರಲ್ಲಿ ಕಿವಿ - ಇಂಡಿಯನ್ ಸಂಸ್ಥೆ ಮೂಲಕ ನನ್ನ ಮೊದಲ ಆಲ್ಬಂ ಭಾರತದಲ್ಲಿ ಬಿಡುಗಡೆಯಾಯಿತು. ಖ್ಯಾತ ಗಾಯಕರಾದ ಶಂಕರ್ ಮಹಾದೇವನ್, ಸಾಧಾನ ಸರಗಮ್, ಉದಿತ್ ನಾರಾಯಣ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

ಅಲ್ಲಿಂದ ನನ್ನ ಸಂಗೀತದ ಜರ್ನಿ ಆರಂಭವಾಯಿತು. ಈವರೆಗೂ ಆಸ್ಟ್ರೇಲಿಯಾ, ಭಾರತ ಮುಂತಾದ ಕಡೆ ಸುಮಾರು 500ಕ್ಕೂ ಹೆಚ್ಚು ಲೈವ್ ಶೋಗಳನ್ನು ನೀಡಿದ್ದೇನೆ. ಗೀತರಚನೆಕಾರನಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಸಂಗೀತ ಕ್ಷೇತ್ರದಲ್ಲೇ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉದ್ದೇಶ ಹೊಂದಿರುವುದಾಗಿ ಶ್ರೀರಾಮ್ ಅಯ್ಯರ್ ತಿಳಿಸಿದ್ದಾರೆ.

ಇದನ್ನೂ ಓದಿ-ನ್ಯಾಯ ಅಂದ್ರೆ ನ್ಯಾಯ...ಹಾಸ್ಟೆಲ್‌ ಹುಡುಗರನ್ನು ಕೆಣಕಿದ ಮೋಹಕತಾರೆಗೆ ಟಾಂಗ್‌ ಕೊಟ್ಟ ರಿಷಬ್‌ ಶೆಟ್ಟಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News