ಜವಾನ್ ಕಲೆಕ್ಷನ್ : ಗಲ್ಲಾಪೆಟ್ಟಿಗೆಯಲ್ಲಿ 10ನೇ ದಿನಕ್ಕೆ 700 ಕೋಟಿ ದಾಟಿದ ಶಾರುಖ್‌ ಸಿನಿಮಾ

Jawan Box Office Collection : ಜವಾನ್ ಚಿತ್ರ 10ನೇ ದಿನಕ್ಕೆ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದೆ. ಈ ಚಿತ್ರದ ಕಲೆಕ್ಷನ್ 450 ಕೋಟಿ ರೂಪಾಯಿ ಮುಟ್ಟಲಿದೆ. ಈ ಚಿತ್ರ 10ನೇ ದಿನಕ್ಕೆ ಬಾಕ್ಸ್ ಆಫೀಸ್‌ನ್ನು ಕೊಳ್ಳೆ ಹೊಡೆದಿದೆ. 

Written by - Chetana Devarmani | Last Updated : Sep 17, 2023, 12:34 PM IST
  • ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ಜವಾನ್‌
  • ಜವಾನ್ ಚಿತ್ರ 10ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
  • ಬಾಕ್ಸ್ ಆಫೀಸ್‌ನ್ನು ಕೊಳ್ಳೆ ಹೊಡೆದ ಕಿಂಗ್‌ ಖಾನ್‌
ಜವಾನ್ ಕಲೆಕ್ಷನ್ : ಗಲ್ಲಾಪೆಟ್ಟಿಗೆಯಲ್ಲಿ 10ನೇ ದಿನಕ್ಕೆ 700 ಕೋಟಿ ದಾಟಿದ ಶಾರುಖ್‌ ಸಿನಿಮಾ  title=
Jawan Box Office Collection

Jawan Collection Day 10 : ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್‌ನ ದಾಖಲೆಯ ಓಟ ಮುಂದುವರೆದಿದೆ. ಈ ಚಿತ್ರ ಬಿಡುಗಡೆಯಾಗಿ 11 ದಿನಗಳು ಕಳೆದಿದ್ದು, ಕಳೆದ 10 ದಿನಗಳಲ್ಲಿ ಈ ಚಿತ್ರದ ಕಲೆಕ್ಷನ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕೊಳ್ಳೆ ಹೊಡೆದಿದೆ. ಈ ಚಿತ್ರದ ವಿಶ್ವಾದ್ಯಂತ ಕಲೆಕ್ಷನ್ ಉತ್ತಮವಾಗಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲೂ ಚಿತ್ರವು 450 ಕೋಟಿ ರೂಪಾಯಿಗಳನ್ನು ಮುಟ್ಟುವ ಸಮೀಪದಲ್ಲಿದೆ.

ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ 'ಜವಾನ್' ಚಿತ್ರವು ಬಿಡುಗಡೆಯಾದ 10 ನೇ ದಿನಕ್ಕೆ ಅಂದರೆ ಎರಡನೇ ಶನಿವಾರದಂದು ಸುಮಾರು 31 ಕೋಟಿ ರೂ. ಕಲೆ ಹಾಕಿದೆ. ವಿಶೇಷವೆಂದರೆ ಈ ಚಿತ್ರದ ಕಲೆಕ್ಷನ್ ಗುರುವಾರದಿಂದ ಏರಿಕೆ ಕಾಣುತ್ತಿದೆ. 10 ನೇ ದಿನದ ಕಲೆಕ್ಷನ್ ಸೇರಿದಂತೆ ಈ ಚಿತ್ರ ಇದುವರೆಗೆ 439 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ : ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಶ್ರೀಲೀಲಾ ಕ್ಯೂಟ್‌ ಪೋಟೋಗಳು

ಈ ಚಿತ್ರದ ವಿಶ್ವಾದ್ಯಂತ ಕಲೆಕ್ಷನ್ 700 ಕೋಟಿ ದಾಟಿದೆ. ಈ ಚಿತ್ರ ‘ಪಠಾಣ್’ ಕಲೆಕ್ಷನ್ ಅನ್ನು ಹಿಂದಿಕ್ಕುವ ನಿರೀಕ್ಷೆ ಇದೆ. 'ಪಠಾಣ್' ವಿಶ್ವದಾದ್ಯಂತ 1055 ಕೋಟಿ ರೂ. ಗಳ ಕಲೆಕ್ಷನ್ ಮಾಡಿದೆ. ಈ ಚಿತ್ರದ ವೇಗವನ್ನು ನೋಡಿದರೆ ಈ ಚಿತ್ರ 1500 ಕೋಟಿ ಕಲೆಕ್ಷನ್ ದಾಟಬಹುದು ಎಂಬ ನಿರೀಕ್ಷೆ ಇದೆ. 

ಇತ್ತೀಚೆಗಷ್ಟೇ 'ಜವಾನ್' ಚಿತ್ರದ ದೊಡ್ಡ ಹಿಟ್ ನಂತರ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅಟ್ಲಿ ಕುಮಾರ್ ಚಿತ್ರದ ಅಸಲಿ ಬಜೆಟ್ ಅನ್ನು ಹೇಳಿದ್ದಾರೆ. ಮೊದಲು ಈ ಚಿತ್ರದ ಬಜೆಟ್ 30-40 ಕೋಟಿ ಆಗಿತ್ತು. ಆದರೆ ಅಂತಹ ಬಜೆಟ್‌ಗೆ ಯಾರೂ ಹಸಿರು ನಿಶಾನೆ ತೋರಲಿಲ್ಲ. ಆದರೆ ಶಾರುಖ್ ಖಾನ್ 300 ಕೋಟಿ ಬಜೆಟ್‌ಗೆ ಹಸಿರು ನಿಶಾನೆ ತೋರಿಸಿದರು ಮತ್ತು ಈ ಚಿತ್ರ 300 ಕೋಟಿ ದಾಟಿತು ಬಜೆಟ್‌ ದಾಟಿತು. ಅಲ್ಲದೇ ಜವಾನ್‌ ಬ್ಲಾಕ್‌ಬಸ್ಟರ್ ಹಿಟ್‌ ಆಯಿತು.  

ಇದನ್ನೂ ಓದಿ : ಧನುಷ್, ವಿಶಾಲ್ ಸೇರಿ ಈ ನಟರು ಸಿನಿರಂಗದಿಂದ ಬ್ಯಾನ್‌.! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News