25 ವರ್ಷದ ಶಿಕ್ಷಕಿಗೆ 16 ವರ್ಷದ ಯುವಕನ ಮೇಲಾಗಿತ್ತು ಲವ್..‌! ವಿದ್ಯಾರ್ಥಿಯನ್ನೆ ಮದುವೆಯಾದಳು ಪಾಠ ಕಲಿಸುವ ಗುರು

25 year old teacher marries 16 year old boy: ದಿನೇ ದಿನೇ ನಮ್ಮ ಸುತ್ತ ಮುತ್ತಲು ನಡೆಯುವ ಅನೇಕ ಅಚ್ಚರಿಯ ವಿಷಯಗಳನ್ನು ನಾವು ನೋಡಿರುತ್ತೇವೆ, ಹೆಚ್ಚು ವಯಸ್ಸಿನ ಅಂತರವಿರುವ ವ್ಯಕ್ತಿಯನ್ನು ಮದುವೆಯಾಗುವ ಉದಾಹರನೆಗಳನ್ನು ಕೇಳಿರುತ್ತೇವೆ. ಆದರೆ, ಇಲ್ಲೊಂದು ಜಾಗದಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನೆ ಮದುವೆಯಾದ ಘಟನೆ ನಡೆದಿದೆ.  

Written by - Zee Kannada News Desk | Last Updated : Dec 4, 2024, 11:46 AM IST
  • ಗುರು ಎಂಬ ಹೆಸರಿಗೆ ಕಳಂಕವನ್ನು ತಂದು ಬಿಟ್ಟಿದ್ದಾಳೆ ಅಷ್ಟಕ್ಕೂ ಆ ಶಿಕ್ಷಕಿ ಮಾಡಿದ ಕೆಲಸವಾದರೂ ಏನು..?
  • ಇಲ್ಲೊಂದು ಜಾಗದಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನೆ ಮದುವೆಯಾದ ಘಟನೆ ನಡೆದಿದೆ.
  • ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹೀಲೆಯೊಬ್ಬಳು 16 ವರ್ಷದ ಯುವಕನ ಜೊತೆ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದಳು.
25 ವರ್ಷದ ಶಿಕ್ಷಕಿಗೆ 16 ವರ್ಷದ ಯುವಕನ ಮೇಲಾಗಿತ್ತು ಲವ್..‌! ವಿದ್ಯಾರ್ಥಿಯನ್ನೆ   ಮದುವೆಯಾದಳು ಪಾಠ ಕಲಿಸುವ ಗುರು title=

25 year old teacher marries 16 year old boy: ದಿನೇ ದಿನೇ ನಮ್ಮ ಸುತ್ತ ಮುತ್ತಲು ನಡೆಯುವ ಅನೇಕ ಅಚ್ಚರಿಯ ವಿಷಯಗಳನ್ನು ನಾವು ನೋಡಿರುತ್ತೇವೆ, ಹೆಚ್ಚು ವಯಸ್ಸಿನ ಅಂತರವಿರುವ ವ್ಯಕ್ತಿಯನ್ನು ಮದುವೆಯಾಗುವ ಉದಾಹರನೆಗಳನ್ನು ಕೇಳಿರುತ್ತೇವೆ. ಆದರೆ, ಇಲ್ಲೊಂದು ಜಾಗದಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನೆ ಮದುವೆಯಾದ ಘಟನೆ ನಡೆದಿದೆ.

ಹೌದು, ಗುರು ಭ್ರಮ.. ಗುರು ವಿಷ್ಣು.. ಗುರು ದೇವೋ, ಮಹೇಶ್ವರಃ ಎಂಬ ಶ್ಲೋಕವನ್ನು ನೀವು ಕೇಳಿರಬಹುದು. ಈ ಒಂದು ಶ್ಲೋಕ ಸಾಕು ನಮ್ಮ ಜೀವನದಲ್ಲಿ ಗುರು ಯಾವ ರೀತಿಯಾದ ಪಾತ್ರವನ್ನು ವಹಿಸುತ್ತಾರೆ ಎಂದು ತಿಳಿದುಕೊಳ್ಳಲು. ಶಿಕ್ಷಕರನ್ನು ದೇವರಂತೆ ಪೋಜಿಸುತ್ತೇವೆ, ಅವರನ್ನು ಜೀವನವನ್ನು ತಿದ್ದುವ ಭ್ರಹ್ಮನಿಗೆ ಹೋಲಿಸಲಾಗುತ್ತದೆ. ಆದರೆ, ಇಲ್ಲೊಬ್ಬ ಶಿಕ್ಷಕಿ ಮಾಡಬಾರದ ಕೆಲಸ ಒಂದನ್ನು ಮಾಡಿಬಿಟ್ಟಿದ್ದಾಳೆ, ಗುರು ಎಂಬ ಹೆಸರಿಗೆ ಕಳಂಕವನ್ನು ತಂದು ಬಿಟ್ಟಿದ್ದಾಳೆ ಅಷ್ಟಕ್ಕೂ ಆ ಶಿಕ್ಷಕಿ ಮಾಡಿದ ಕೆಲಸವಾದರೂ ಏನು..?

ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹೀಲೆಯೊಬ್ಬಳು 16 ವರ್ಷದ ಯುವಕನ ಜೊತೆ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದಳು. ಕೆಲವೇ ದಿನದಲ್ಲಿ ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ಆ 25 ವರ್ಷದ ಮಹಿಳೆ, ಹುಡುಗನ ಮನೆಯವರಿಗೆ ತಿಳಿಯದಂತೆ ಆತನನ್ನು ಮದುವೆಯಾಗಿದ್ದಾಳೆ, ಸದ್ಯ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟು ಹಾಕಿದೆ. 

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ 25 ವರ್ಷದ ಯುವತಿ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು, ಸಾಮಾಜಿಕ ಜಾಲತಾಣದ ಮೂಲಕ ಈಕೆಗೆ 16 ವರ್ಷದ ಯುವಕನಾದ ಮೀರತ್‌ನ ಪರಿಚಯವಾಗಿತ್ತು. ಈ ಜೋಡಿ ಪರಿಚಯ ಪ್ರೀತಿಗೆ ತಿರುಗಿತ್ತು, ಇಬ್ಬರು ಕೂಡ ಮೊಬೈಲ್‌ ಪೋನ್‌ ಮೂಲಕ ಮಾತನಾಡಿಕೊಳ್ಳಲು ಆರಂಭಿಸಿದ್ದರು. ಇತ್ತೀಚೆಗೆ ಮೀರತ್‌ ಅನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಶಿಕ್ಷಕಿ, ಹುಡುಗ ಮೇಜರ್‌ ಎಂದು ರೂಪಿಸಲು, ನಕಲಿ ದಾಖಲೆಗಳನ್ನು ಮಾಡಿಸಿಕೊಂಡು, ಕದ್ದು ಮುಚ್ಚಿ ಮದುವೆಯಾಗಿದ್ದರು.

ಇವರಿಬ್ಬರು ಕದ್ದು ಮುಚ್ಚಿ ಮದುವೆಯಾಗಿದ್ದ ವಿಚಾರ, ಹುಡುಗನ ಪೋಷಕರಿಗೆ ಗೊತ್ತಾಗುತ್ತಿದ್ದಂತೆ, ಪೋಷಕರು ಪೋಲಿಸ್‌ ಠಾಣೆಗೆ ದೂರು ನೀಡಿದ್ದಾರೆ. ಪೋಲಿಸರು ಈ ವಿಷಯದ ಕುರಿತು ಸದ್ಯ ವಿಚಾರಣೆ ಮಾಡುತ್ತಿದ್ದು, ಈ ವಿಚಾರ ಇಡೀ ಪ್ರದೇಶವನ್ನೆ ದಂಗಾಗುವಂತೆ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News