'ಜಗವ ಹಡೆದ ಮಗಳಿವಳು,ಕರುಳ ಕರೆಗೆ ಮರಗುವಳು' ಹಾಡಿಗೆ ಜನರ ಕಣ್ಗಳು ಒದ್ದೆ..!

Juliet 2: ಚಿತ್ರದ ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಹಾಡು ಎಲ್ಲಾರ ಮನಮನೆಗಳಲ್ಲಿ  ಶಾಶ್ವತವಾಗಿರೋ ರೀತಿ ಸದ್ದು ಮಾಡಿದೆ. ತಂದೆ ಮಗಳ ಪ್ರೀತಿ ಎಂಥದ್ದು ಅನ್ನೋದನ್ನ ಈ ಹಾಡಿನ ಮೂಲಕ ಮತ್ತೇ ಜಗತ್ತಿಗೆ ಸಾರೋ ಕೆಲಸ ಜೂಲಿಯಟ್2 ಚಿತ್ರತಂಡ ಮಾಡಿದೆ.

Written by - YASHODHA POOJARI | Last Updated : Feb 12, 2023, 02:13 PM IST
  • ಜೂಲಿಯಟ್2 ಸಿನಿಮಾದ ಮತ್ತೊಂದು ಹಾಡು ರಿಲೀಸ್
  • 'ಜಗವ ಹಡೆದ ಮಗಳಿವಳು,ಕರುಳ ಕರೆಗೆ ಮರಗುವಳು' ಹಾಡು
  • ಪಿಐ ಪ್ರೊಡಕ್ಷನ್​ ಮತ್ತು ವಿರಾಟ್​ ಮೋಷನ್ ಪಿಕ್ಚರ್
'ಜಗವ ಹಡೆದ ಮಗಳಿವಳು,ಕರುಳ ಕರೆಗೆ ಮರಗುವಳು' ಹಾಡಿಗೆ ಜನರ ಕಣ್ಗಳು ಒದ್ದೆ..!  title=

Juliet 2: ಚಿತ್ರದ ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಹಾಡು ಎಲ್ಲಾರ ಮನಮನೆಗಳಲ್ಲಿ  ಶಾಶ್ವತವಾಗಿರೋ ರೀತಿ ಸದ್ದು ಮಾಡಿದೆ. ತಂದೆ ಮಗಳ ಪ್ರೀತಿ ಎಂಥದ್ದು ಅನ್ನೋದನ್ನ ಈ ಹಾಡಿನ ಮೂಲಕ ಮತ್ತೇ ಜಗತ್ತಿಗೆ ಸಾರೋ ಕೆಲಸ ಜೂಲಿಯಟ್2 ಚಿತ್ರತಂಡ ಮಾಡಿದೆ.ಇದೀಗ ಜೂಲಿಯಟ್2 ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದ್ದು,ಈ ಹಾಡು ತಾಯಿ ಪ್ರೀತಿ ಮತ್ತು ತ್ಯಾಗದ ಸಂಕೇತವಾಗಿ ಸೃಷ್ಟಿಯಾಗಿರೋದು ಹಾಡು.

ಈ ಹಾಡಿನ ದೃಶ್ಯಗಳನ್ನ ನೋಡ್ತಾ ಇದ್ರೆ ಕಣ್ಣಾಲಿಗಳು ಒದ್ದೆಯಾಗೋದು ಪಕ್ಕಾ.ಜಗವ ಹಡೆದ ಮಗಳಿವಳು ,ಕರುಳ ಕರೆಗೆ ಮರಗುವಳು' ಅನ್ನೋ ಜೂಲಿಯಟ್ 2 ಸಿನಿಮಾದ ಈ ಹೊಸ ಹಾಡು ನಿಜಕ್ಕೂ ಹೆಣ್ಣು ಈ ಭೂಮಿ ಮೇಲೆ ಎಷ್ಟು ಪ್ರಮುಖ ಪಾತ್ರ ನಿಭಾಯಿಸುತ್ತಾಳೆ ಅನ್ನೋದನ್ನ ಈ ಹಾಡಿನ ಪ್ರತಿಯೊಂದು ಸಾಲುಗಳನ್ನಕೇಳೋ ಮೂಲಕ ಅರ್ಥೈಸಿಕೊಳ್ಳಬಹುದು.

ಇದನ್ನೂ ಓದಿ: Juliet 2: ಲಕ್ಷಾಂತರ ಜನರ ಮನಮುಟ್ಟಿದ ‘ಜ್ಯೂಲಿಯೆಟ್ 2’ ಬಾಂಧವ್ಯದ ಹಾಡು

ಜೂಲಿಯಟ್ 2 ಚಿತ್ರತಂಡ ಈ ಹಾಡನ್ನ ಜಗದ ಹೆಣ್ಣುಮಕ್ಕಳಿಗಾಗಿ ಡೆಡಿಕೇಟ್ ಮಾಡಿದೆ. ಈ ಸಿನಿಮಾದ ಟೀಸರ್ ಮತ್ತು ಹಾಡುಗಳನ್ನ ನೋಡ್ತಾ ಇದ್ರೆ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿ ಜನ ಮೆಚ್ಚುಗೆ ಗಳಿಸೋದ್ರಲ್ಲಿ ನೋ ದೌಟ್ ಅಂತ ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.

ಪಿಐ ಪ್ರೊಡಕ್ಷನ್​ ಮತ್ತು ವಿರಾಟ್​ ಮೋಷನ್ ಪಿಕ್ಚರ್ ಲಾಂಛನದಲ್ಲಿ ಲಿಖಿತ್ ಆರ್.ಕೋಟ್ಯಾನ್ ನಿರ್ಮಾಣ ಮಾಡಿರುವ "ಜ್ಯೂಲಿಯೆಟ್ 2" ಚಿತ್ರವನ್ನು ವಿರಾಟ್ ಬಿ.ಗೌಡ ನಿರ್ದೇಶಿಸಿದ್ದಾರೆ. ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ ಶ್ಯಾಂಟೋ ವಿ ಆ್ಯಂಟೋ ಅವರ ಛಾಯಾಗ್ರಹಣವಿದೆ.ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರವನ್ನು ರಿಲಯನ್ಸ್ ಎಂಟರ್​ಟೈನ್​ಮೆಂಟ್ ಮೂಲಕ ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಹಾಡು ಮತ್ತು ಟೀಸರ್​ನಿಂದಲೇ ಟಾಕ್ ಆಗುತ್ತಿರುವ ಜೂಲಿಯೆಟ್‌ 2 ಸಿನಿಮಾ ಬೃಂದಾ ಆಚಾರ್ಯ ಅವರ ಕೆರಿಯರ್​ಗೆ ಬ್ರೇಕ್ ನೀಡುತ್ತಾ ಅನ್ನೋದು ಈ ತಿಂಗಳ 24ರಂದು ಗೊತ್ತಾಗಲಿದೆ.

ಇದನ್ನೂ ಓದಿ: Rishab Shetty: "ನನಗೆ ಈಗಾಗಲೇ 3 ಪಕ್ಷಗಳಿಂದಲೂ.." ರಾಜಕೀಯ ಎಂಟ್ರಿ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News