"2 ಲಕ್ಷ ಹಣ ಕೊಡೋದು ಬೇಡ, ಆದ್ರೆ ರಾತ್ರಿ ಮನೆಗೆ ಬಾ"- ಮಂಚಕ್ಕೆ ಕರೆದ ನಟನ ಹೆಸರನ್ನು ಸಾರ್ವಜನಿಕವಾಗೇ ಬಹಿರಂಗಪಡಿಸಿದ ಖ್ಯಾತ ನಟಿ

Jubitha Andy: ಈ ವರದಿಯ ಬಹಿರಂಗವಾಗಿದ್ದೇ ತಡ, ಒಂದರ ಹಿಂದೆ ಒಂದರಂತೆ ಹಲವು ಹಿರಿಯ, ಕಿರಿಯ ನಟಿಯರು ತಮಗೆ ಇಂಡಸ್ಟ್ರಿಯಲ್ಲಾ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.  

Written by - Bhavishya Shetty | Last Updated : Aug 24, 2024, 07:48 PM IST
    • ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಲೈಂಗಿಕ ದೌರ್ಜನ್ಯ ನಡೆದಿತ್ತು
    • ಇನ್ನು ಈ ಪ್ರಕರಣದ ಕುರಿತಾದ ವಿಚಾರಣೆ ಇಂದಿಗೂ ನಡೆಯುತ್ತಿದೆ.
    • ಕಿರಿಯ ನಟಿಯರು ತಮಗೆ ಇಂಡಸ್ಟ್ರಿಯಲ್ಲಾ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
"2 ಲಕ್ಷ ಹಣ ಕೊಡೋದು ಬೇಡ, ಆದ್ರೆ ರಾತ್ರಿ ಮನೆಗೆ ಬಾ"- ಮಂಚಕ್ಕೆ ಕರೆದ ನಟನ ಹೆಸರನ್ನು ಸಾರ್ವಜನಿಕವಾಗೇ ಬಹಿರಂಗಪಡಿಸಿದ ಖ್ಯಾತ ನಟಿ title=
File Photo

Jubitha Andy: ಅದು 2017ರಲ್ಲಿ ನಡೆದ ಘಟನೆ. ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ದೇಶಾದ್ಯಂತ ಭಾರೀ ಗದ್ದಲ ಸೃಷ್ಟಿಯಾಗಿತ್ತು. ಇನ್ನು ಈ ಪ್ರಕರಣದ ಕುರಿತಾದ ವಿಚಾರಣೆ ಇಂದಿಗೂ ನಡೆಯುತ್ತಿದೆ.

ಅಂದಹಾಗೆ ಆ ಸಂದರ್ಭದಲ್ಲಿ ನಟಿಯ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವತ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ ತಿಂಗಳಿನಲ್ಲಿ ವರದಿ ಸಲ್ಲಿಸಿತ್ತು. ಇದೀಗ ನಾಲ್ಕೂವರೆ ವರ್ಷಗಳ ಬಳಿಕ ವರದಿ ಸಾರ್ವಜನಿಕವಾಗಿ ಬಹಿರಂಗಗೊಂಡಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣಗೊಂಡಂತಾಗಿದೆ.

ಇದನ್ನೂ ಓದಿ:  ಅಪ್ಪಿತಪ್ಪಿಯೂ ಪರ್ಸ್‌'ನಲ್ಲಿ ಈ ವಸ್ತುಗಳನ್ನು ಇಡಬೇಡಿ: ಎಷ್ಟೇ ದುಡಿದರೂ ಸಂಪಾದನೆ ಕೈಸೇರಲ್ಲ; ಅರ್ಧ ಆಯಸ್ಸನ್ನೇ ನುಂಗಿಬಿಡುತ್ತೆ!

ಅಷ್ಟೇ ಅಲ್ಲದೆ, ಈ ವರದಿಯ ಬಹಿರಂಗವಾಗಿದ್ದೇ ತಡ, ಒಂದರ ಹಿಂದೆ ಒಂದರಂತೆ ಹಲವು ಹಿರಿಯ, ಕಿರಿಯ ನಟಿಯರು ತಮಗೆ ಇಂಡಸ್ಟ್ರಿಯಲ್ಲಾ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

ಈ ಎಲ್ಲದರ ಮಧ್ಯೆ ಜೂನಿಯರ್​ ಆರ್ಟಿಸ್ಟ್​ ಆಕೆ ಕೆಲಸ ಮಾಡುತ್ತಿರುವ ಜುಬಿತಾ ಆ್ಯಂಡಿ ಎಂಬವರು ತನಗಾದ ಕಹಿ ಘಟನೆಯನ್ನುಬಹಿರಂಗಪಡಿಸಿದ್ದಲ್ಲದೆ, ಕಿರುಕುಳ ನೀಡಿದ ನಟನ ಹೆಸರನ್ನು ಕೂಡ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಅಸೋಸಿಯೇಷನ್ ಆಫ್​ ಮಲಯಾಳಂ ಮೂವಿ ಆರ್ಟಿಸ್ಟ್​ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನಟ ಎಡವೇಲ ಬಾಬು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದ ಎಂದು ಜುಬಿತಾ ಗಂಭೀರ ಆರೋಪ ಮಾಡಿದ್ದಾರೆ.

"ಸದಸ್ಯತ್ವ ಶುಲ್ಕ 2 ಲಕ್ಷಕ್ಕೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಳಿದ್ದರು. ಅಡ್ಜಸ್ಟ್ ಮಾಡಿಕೊಂಡರೆ ಹಣ ಕೊಡುವ ಅಗತ್ಯವಿಲ್ಲ, ಸಿನಿಮಾ ಆಫರ್‌ʼಗಳೂ ಬರುತ್ತವೆ ಎಂದಿದ್ದರು. ಹರಿಕುಮಾರ್ ಮತ್ತು ಸುಧೀಶ್ ಅವರಿಂದಲೂ ಕೆಟ್ಟ ಅನುಭವವಾಗಿದೆ. ಹರಿಕುಮಾರ್ ಅವರು ಸಿನಿಮಾ ಮುಗಿಸಿದ ನಂತರ ಮರುದಿನ ಬರುವಂತೆ ಹೇಳಿದರು. ಆದರೆ, ನಾನು ಹೋಗಲು ನಿರಾಕರಿಸಿದೆ. ಸುಧೀಶ್ ತನ್ನ ಜೊತೆ ಟ್ರಿಪ್‌ ಬರುವಂತೆ ಹೇಳಿದ್ದ. ನಾವು ಯಾವುದೇ ಸ್ಥಳಕ್ಕೆ ಹೋದರೂ, ಹೊಂದಾಣಿಕೆ ಮಾಡಲು ನಮ್ಮಲ್ಲಿ ಕೇಳುತ್ತಾರೆ. ಆದರೆ ಅಡ್ಜಸ್ಟ್ ಮಾಡಿಕೊಂಡು ಅವಕಾಶಗಳು ಬೇಡ" ಎಂದು ಜುಬಿತಾ ಹೇಳಿದ್ದಾರೆ.

ಇವರಲ್ಲದೆ, ಮತ್ತೋರ್ವ ಜೂನಿಯರ್ ಆರ್ಟಿಸ್ಟ್ ಅಸ್ನಿಯಾ ಕೂಡ ಮಲಯಾಳಂ ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. "ಅತ್ಯಂತ ಶೋಷಣೆಗೆ ಒಳಗಾದ ವರ್ಗ ನಮ್ಮದು. ಯಾವುದೇ ಕಾಂಪ್ರಮೈಸ್‌ ಆಗದೆ ಚಲನಚಿತ್ರಕ್ಕೆ ಪ್ರವೇಶಿಸಿದರೆ, ಸರಿಯಾದ ಕೂಲಿ ಸಿಗುವುದಿಲ್ಲ. ಅವಕಾಶ ಪಡೆಯುವಾಗ 5000 ರೂಪಾಯಿ ಪೇಮೆಂಟ್‌ ಎನ್ನುತ್ತಾರೆ. ಆದರೆ ನಮ್ಮ ಕೈ ಸೇರೋದು ಕೇವಲ ರೂ 1500. ಅದೂ ಕೂಡ 30 ದಿನ ಕೆಲಸ ಮಾಡಿದ ನಂತರ ಇಷ್ಟು ಸಿಕ್ಕಿತು. ಇದರ ವಿರುದ್ಧವಾಗಿ ಮಾತನಾಡಿದ್ದಕ್ಕೆ ನನ್ನನ್ನು ಹೊರಗಿಡಲಾಯಿತು" ಎಂದಿದ್ದಾರೆ.

ಇದನ್ನೂ ಓದಿ: ಲೋಟದೊಳಗೆ ತಲೆಹಾಕಿ ಗಟಗಟನೆ ನೀರು ಕುಡಿಯುವ ದೈತ್ಯ ಹಾವು! ಅಪರೂಪದ ವಿಡಿಯೋ ವೈರಲ್‌

ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ನಾಯಕ ನಟಿಯರು ಮುಂದಾಗಿದ್ದಾರೆ. ರಂಜಿತ್ ನಿರ್ದೇಶನದ 'ಪಲೇರಿ ಮಾಣಿಕ್ಯಂ' ಸಿನಿಮಾದಲ್ಲಿ ನಟಿಸಲು ಬಂದಾಗ ನಿರ್ದೇಶಕರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಇತ್ತೀಚೆಗೆ ಬಹಿರಂಗಪಡಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

Trending News