Kabza: ‘ಕಬ್ಜ’ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸಿದ ‘ಛಲದಂಕ ಮಲ್ಲ’ ಚಂದ್ರು..!

Kabza Making: 1945-1987ನಲ್ಲಿ ನಡೆಯೋ ಕಥೆ.. ಪಿನ್ ಟು ಪಿನ್ ಆ ಕಾಲಘಟ್ಟಕ್ಕೆ ಕರ್ಕೊಂಡು ಹೋಗಿದ್ದಾರೆ.. ಟ್ರೈಲರ್ ನೋಡ್ತಿದ್ರೆ ಹುಡುಕಿದ್ರೂ ಒಂದ್ ತಪ್ಪು ಕಣ್ಸೋದಿಲ್ಲ.. ಈ ಲೆವೆಲ್ ಮೇಕಿಂಗ್ ಹೆಂಗ್ ಸಾಧ್ಯವಾಯ್ತು.. ಒನ್ ಮ್ಯಾನ್ ಆರ್ಮಿ ತರ ಹೇಗೆ ಇದೆಲ್ಲಾ ಸಾಧಿಸಿದ್ರು‌ ಅನ್ನೋ ಅಚ್ಚರಿಯಾಗುತ್ತೆ.

Written by - YASHODHA POOJARI | Edited by - Puttaraj K Alur | Last Updated : Mar 19, 2023, 09:28 PM IST
  • ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಯಶಸ್ವಿಯಾದ ಹಳ್ಳಿ ಹುಡುಗನ ಸಾಧನೆ
  • ಬಾಕ್ಸ್ ಆಫೀಸ್‍ನಲ್ಲಿ 3ನೇ ದಿನಕ್ಕೆ 100 ಕೋಟಿ ‘ಕಬ್ಜ’ ಮಾಡಿದ ಸಿನಿಮಾ
  • ಭಾರತೀಯ ಚಿತ್ರರಂಗಕ್ಕೆ ಅದ್ಭುತ ಚಿತ್ರ ನೀಡಿದ ಕನ್ನಡದ ಸ್ಟಾರ್ ನಿರ್ದೇಶಕ ಆರ್.ಚಂದ್ರು
Kabza: ‘ಕಬ್ಜ’ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸಿದ ‘ಛಲದಂಕ ಮಲ್ಲ’ ಚಂದ್ರು..! title=
‘ಛಲದಂಕ ಮಲ್ಲ’ ಆರ್.ಚಂದ್ರು!

ಬೆಂಗಳೂರು: ಸೂರ್ಯನೊಬ್ಬ ಚಂದ್ರನೊಬ್ಬ ಅನ್ನೋ ಹಾಡಿನ ಸಾಲಿನಲ್ಲಿರೋ ಚಂದ್ರನೊಬ್ಬ ಅಂದ್ರೆ? ಅದು ಆರ್.ಚಂದ್ರು ಅಂತೇಳಿದ್ರೆ ತಪ್ಪಾಗಲ್ಲ. ಇದೇನ್ ಬಿಲ್ಡಪ್ ಅಲ್ಲ, ಎಕ್ಸಟ್ರಾ ಹೊಗಳಿಕೆ ಅಂತೂ ಅಲ್ವೇ ಅಲ್ಲ.. ಏಕೆಂದರೆ ಕನಸು ಕಾಣೋದ್ ಎಲ್ರೂ ಕಾಣ್ತಾರೆ.. ಆದರೆ ಆ ಕನಸು ನನಸು ಆಗ್ಲೇಬೇಕು ಅಂತಾ ಪಣ ತೊಟ್ಟು.. ಹಠಕ್ಕೆ ಬಿದ್ದು ನಿದ್ರೆ, ಊಟ ಬಿಟ್ಟು ಕೆಲಸ ಮಾಡೋರ್ ಕಮ್ಮಿ.. ಆದ್ರೆ ಚಂದ್ರು ಮಾತ್ರ ಡಿಫರೆಂಟು.. ಹೀ ಈಸ್ ಡ್ರೀಮರ್ ಮಾತ್ರವಲ್ಲ.. ಅಚೀವರ್.. ಒಮ್ಮೆ ಅಂದ್ಕೊಂಡ್ರೆ ಆಕಾಶಕ್ಕೆ ಏಣಿ ಬೇಕಾದ್ರೂ ಹಾಕ್ತೀನಿ.. ಸಾಗರಕ್ಕೆ ಸೇತುವೆ ಬೇಕಾದ್ರೂ ಕಟ್ತೀನಿ ಅನ್ನೋ ಹಠ.. ಅದನ್ನ ಸಾಧಿಸಿಯೇ ಸಾಧಿಸೋ ಘಟ..

‘ಕಬ್ಜ’ ಅನ್ನೋ ಸಿನಿಮಾನೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.. 100 ಕೋಟಿ ರೂ. ಸಿನಿಮಾ ಮಾಡ್ತೀನಿ ಅಂತಾ ಎಲ್ರೂ ಅನ್ಕೊಬಹುದು.. ಆದ್ರೆ 100 ಕೋಟಿ ರೂ. ಹಾಕಿ ಸಿನಿಮಾ ಮಾಡೋದ್ ಇದಿಯಲ್ಲ ಅದಕ್ಕೆ ಎಂಟೆದೆಬೇಕು.. ಸಿನಿಮಾ ಡೈರೆಕ್ಟರ್ ನ ಕ್ಯಾಪ್ಟನ್ ಆಫ್ ದಿ ಶಿಪ್ ಅಂತಾರೆ.. ‘ಕಬ್ಜ’ ವಿಷ್ಯದಲ್ಲಿ ಆರ್.ಚಂದ್ರುನೇ ಕ್ಯಾಪ್ಟನ್ನು.. ಆರ್.ಚಂದ್ರುನೇ ಶಿಪ್ಪು.. ಹೀ ಈಸ್ ಒನ್ ಮ್ಯಾನ್ ಆರ್ಮಿ.. ಯಾಕೆಂದರೆ ‘ಕಬ್ಜ’ ಹಿಂದಿರೋ ಮಾಸ್ಟರ್ ಮೈಂಡ್ ಮಾತ್ರವಲ್ಲ.. ಆ ಮಾಸ್ಟರ್ ಮೈಂಡ್‍ಗೆ ಮನಿ ಲ್ಯಾಂಡ್ ಕೂಡ ಚಂದ್ರುನೇ..

ಎಲ್ಲಿಯ ಕೇಶಾವರ ಚಂದ್ರು.. ಎಲ್ಲಿಯ ಪ್ಯಾನ್ ವರ್ಲ್ಡ್ ಸಿನಿಮಾ.. ಸಣ್ಣ ಗ್ರಾಮದಿಂದ ಬಂದ್ರೂ ಸಹ ಕನಸು ಸಣ್ಣದಲ್ಲ.. ಮಹತ್ವಾಕಾಂಕ್ಷೆ ಸಣ್ಣದಲ್ಲ.. ಮೊದಲ ಸಿನಿಮಾದಲ್ಲಿಯೇ ‘ತಾಜ್ ಮಹಲ್’ ತೋರಿಸಿದ, ಒಂದು ಮನೆ ನಿಲ್ಬೇಕಂದ್ರೆ 4 ಪಿಲ್ಲರ್ ಬೇಕು ಹಾಗೆ.. ಸಿನಿಮಾ ಅನ್ನೋ ಜರ್ನಿಯಲ್ಲಿ ‘ಚಾರ್ ಮಿನಾರ್’ನೇ ಎದ್ದು ನಿಲ್ಲಿಸಿದ ‘ಮೈಲಾರಿ’ಯ ಸಾರಥಿ.. ಕನ್ನಡದ ಚಿತ್ರರಸಿಕ ಮಾತ್ರವಲ್ಲ.. ಇಡೀ ದೇಶವ್ಯಾಪಿಯ ಸಿನಿಮಾ ಪ್ರೇಮಿಗಳು ‘ಐ ಲವ್ ಯೂ’ ಅನ್ನೋ ರೀತಿ ಎಂಟರ್ ವರ್ಲ್ಡ್ ‘ಕಬ್ಜ’ ಮಾಡ್ಕೊಳಕೆ ಹೆಜ್ಜೆ ಇಟ್ಟಿದ್ದಾರೆ..

ಇದನ್ನೂ ಓದಿ: ಕಪ್ಪು ಬಿಕಿನಿ ಧರಿಸಿ ಹಾಟ್‌ ಲುಕ್‌ ಕೊಟ್ಟ "ಶಾಮಾ ಸಿಕಂದರ್"..!

‘ಕಬ್ಜ’ ಟ್ರೈಲರ್ ನೋಡ್ತಿದ್ರೆ? ಈ ಮನುಷ್ಯ ಹೆಂಗ್ ಇದೆಲ್ಲಾ ಥಿಂಕ್ ಮಾಡ್ತಾರೆ.. ಈ ಐಡಿಯಾಸ್ ಗಳೆಲ್ಲಾ ಹೆಂಗ್ ಬಂದ್ವು.. 1945-1987ನಲ್ಲಿ ನಡೆಯೋ ಕಥೆ.. ಪಿನ್ ಟು ಪಿನ್ ಆ ಕಾಲಘಟ್ಟಕ್ಕೆ ಕರ್ಕೊಂಡು ಹೋಗಿದ್ದಾರೆ.. ಟ್ರೈಲರ್ ನೋಡ್ತಿದ್ರೆ ಹುಡುಕಿದ್ರೂ ಒಂದ್ ತಪ್ಪು ಕಣ್ಸೋದಿಲ್ಲ.. ಈ ಲೆವೆಲ್ ಮೇಕಿಂಗ್ ಹೆಂಗ್ ಸಾಧ್ಯವಾಯ್ತು.. ಒನ್ ಮ್ಯಾನ್ ಆರ್ಮಿ ತರ ಹೇಗೆ ಇದೆಲ್ಲಾ ಸಾಧಿಸಿದ್ರು‌ ಅನ್ನೋ ಅಚ್ಚರಿಯಾಗುತ್ತೆ.. ಮೊದ್ಲೇ ಹೇಳಿದ್ವಲ್ಲಾ.. ಛಲ ಛಲ.. ಕನ್ನಡ ಇಂಡಸ್ಟ್ರಿ ಈಗಾಗಲೇ ಪ್ಯಾನ್ ಇಂಡಿಯಾ ಲೆವೆಲ್ ಮುಟ್ಟಿದೆ.. 100 ಕೋಟಿ ಅಲ್ಲ 1000 ಕೋಟಿ ಕಲೆಕ್ಷನ್ ದಾಟಿದೆ.. ಇಂತಹ ಸಮಯದಲ್ಲಿ ನನ್ನದು‌ ಒಂದು ಕೊಡುಗೆ ಕೊಡ್ಬೇಕು.. ಸ್ಯಾಂಡಲ್‍ವುಡ್‍ನ ಇನ್ನೊಂದು ಹಂತಕ್ಕೆ ಕೊಂಡೊಯ್ಬೇಕು ಅನ್ನೋ ಛಲ...

ನೀವ್ ಅಂದ್ಕೊಬಹುದು.. ಕೆಜಿಎಫ್ ನೋಡಿ ಚಂದ್ರುಗೆ ಈ ಕನಸು ಹುಟ್ಟಿದೆ ಅಂತ.. ನಿಜ ಕೆಜಿಎಫ್ ಸಿನಿಮಾನೇ ಕನ್ನಡದ ಮಾರುಕಟ್ಟೆ ಓಪನ್ ಆಗೋಕೆ ರಹದಾರಿ.. ಅದೇ ಭರವಸೆಯಲ್ಲಿ,‌ ಹೋಪ್ ನಲ್ಲೇ ಶುರುವಾದ ಪ್ರಾಜೆಕ್ಟ್ ‘ಕಬ್ಜ’.. ಆದ್ರೆ ನಡುವೆ ಕೊರೊನಾ ಬಂತು ನೋಡಿ.. ಆ ಸಮಯದಲ್ಲಿ ಯಾರಿಗಾದ್ರೂ ಒಂದು ಕ್ಷಣ ಎದೆ ದಸಕ್ ಅಂದಿರುತ್ತೆ.. ಕೊರೊನಾ ನಂತ್ರ ಏನು? ಜ‌ನ ಥಿಯೇಟರ್ ಗೆ ಬರ್ತಾರಾ ಅನ್ನೋ ಭಯ ಆಗಿರುತ್ತೆ.. ಆದರೆ ಸವಾಲುಗಳ ನಡುವೆಯೇ ಸವಾರಿ ಮಾಡಿರೋ ಮೈಲಾರಿಯ ಸಾರಥಿಗೆ ಇದೊಂದು ದೊಡ್ಡ ಸವಾಲು ಅನಿಸ್ಲೇ ಇಲ್ಲ..

ಇಲ್ಲ ಅಂದುಕೊಂಡಿದನ್ನು ಮಾಡ್ಲೇಬೇಕು ಎಂಬ ಹಠಕ್ಕೆ ಬಿದ್ರು.. ಉತ್ಸಾಹಿ, ಕ್ರಿಯೇಟಿವ್ ಟೀಂನ ಜೊತೆಗಿಟ್ಕೊಂಡು.. ಕೋವಿಡ್‍ನ ಸಂಕಷ್ಟ ಕಾಲದಲ್ಲೂ ತಮ್ಮ ಕನಸು ಕಲ್ಪನೆಗೆ ಸಿನಿಮಾ ರೂಪ ಕೊಡೋಕೆ ನಿಂತ್ರು.. ಎಲ್ಲೂ ರಾಜಿಯಾಗ್ಲಿಲ್ಲ.. ಯಾವುದಕ್ಕೂ ಹಿಂಜರಿಯಲಿಲ್ಲ.. ಇಟ್ಟ ಹೆಜ್ಜೆಯಲ್ಲಿ ದಿಟ್ಟತನವಿತ್ತು.. ಸಾಧಿಸ್ತೀನಿ ಅನ್ನೋ ಆತ್ಮವಿಶ್ವಾಸವಿತ್ತು.. ಆ ಛಲ, ಆ ಆತ್ಮವಿಶ್ವಾಸವೇ ‘ಕಬ್ಜ’..

ಇದನ್ನೂ ಓದಿ: ಆಕಾಶದಲ್ಲಿರುವ ನಕ್ಷತ್ರಕ್ಕೆ ರಾಜರತ್ನ ʼಅಪ್ಪು' ಹೆಸರು..! ಇದಲ್ವಾ ಗುರು ಖುಷಿ ವಿಚಾರ

ಈ ಸಿನಿಮಾ ಬರೀ ಸಿನಿಮಾವಲ್ಲ.. ಇದೊಂದು ತಪಸ್ಸು,‌ ಇದೊಂದು ಕನಸ್ಸು.. ಖಂಡಿತ ಇದು ಸಾಮಾನ್ಯ ಸಿನಿಮಾವಲ್ಲ.. ಅಂತಿಂಥ ಗೆಲುವು ಸಿಗೋದಿಲ್ಲ.. ನೆಕ್ಸ್ಟ್ ಬಿಗ್ ಥಿಂಗ್ಸ್.. ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಚರಿತ್ರೆ.. ರಕ್ತದಲ್ಲಿ ಬರ್ದಿದ್ದಲ್ಲ.. ಚಂದ್ರು ಹೃದಯದಿಂದ ಬರೆಯೋ ಚರಿತ್ರೆ.. ಎಂದೆಂದೂ ಅಳಿಸಲಾಗದ ಚರಿತ್ರೆ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News