Pentagon film : ಐದು ಹೀರೋಗಳ "ಪೆಂಟಗನ್ " ಸಿನಿಮಾ ಏಪ್ರಿಲ್ 7ಕ್ಕೆ ರಿಲೀಸ್..!

Pentagon film release date: "ಪೆಂಟಗನ್"  ಚಿತ್ರ ನಿಮ್ಮನ್ನ ಅದ್ಭುತ ಲೋಕಕ್ಕೆ ಕರೆದೊಯ್ಯಲು ಹೊರಟಿದೆ ಚಿತ್ರತಂಡ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ.

Written by - Zee Kannada News Desk | Last Updated : Mar 19, 2023, 05:19 PM IST
  • ಐದು ಹೀರೋಗಳ "ಪೆಂಟಗನ್ " ಸಿನಿಮಾ ಏಪ್ರಿಲ್ 7ಕ್ಕೆ ರಿಲೀಸ್
  • ರಾಘು ಶಿವಮೊಗ್ಗ ಈ ಸಿನಿಮಾವನ್ನು ನಿರ್ದೇಶಿಸಿದ್ಧಾರೆ
  • ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ
Pentagon film : ಐದು ಹೀರೋಗಳ "ಪೆಂಟಗನ್ " ಸಿನಿಮಾ ಏಪ್ರಿಲ್ 7ಕ್ಕೆ ರಿಲೀಸ್..! title=

Pentagon film release date: ಅಬ್ಬಾ...ಕನ್ನಡ  ಸಿನಿಮಾ ಇಂಡಸ್ಟ್ರಿ ಯಿಂದ ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ. ಈಗ ನಿಮ್ಮನ್ನ ರಂಜಿಸಲು ಮತ್ತೊಂದು ಸಿನಿಮಾ ಬರುತ್ತಿದೆ.ಯೆಸ್ ಐದು ಜನ ನಿರ್ದೇಶಕರು, ಐದು ಕಥೆಗಳು, ಐದು ಜನ ಬರಹಗಾರರು, ಐದು ಹೀರೋಗಳು ಹೀಗೆ ಐದೈದು ವಿಷಯಗಳನ್ನು ಒಂದೇ ಸಿನಿಮಾದಲ್ಲಿ ನೋಡಲು ಬಹುದೊಡ್ಡ ಅವಕಾಶ ನಿಮ್ಮ ಮುಂದಿದೆ.

ಯೆಸ್ "ಪೆಂಟಗನ್" ಅನ್ನೋ ಚಿತ್ರ ನಿಮ್ಮನ್ನ ಅದ್ಭುತ ಲೋಕಕ್ಕೆ ಕರೆದೊಯ್ಯಲು ಹೊರಟಿದೆ ಚಿತ್ರತಂಡ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ. ಹಾಗಾಗಿ ಸಿನಿಮಾ ಟ್ರೈಲರ್ ಬಿಡುಗಡೆಯಾದ ದಿನದಿಂದ ನಿರೀಕ್ಷೆಯಂತೂ ಬೆಟ್ಟದಷ್ಟು ಮೂಡಿಸಿದೆ. ಇದೀಗ "ಪೆಂಟಗನ್" ಸಿನಿಮಾ ಏಪ್ರಿಲ್ 7ಕ್ಕೆ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: Haripriya : ಮದುವೆಯಾದ 2 ತಿಂಗಳಲ್ಲೇ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಡಲು ರೆಡಿಯಾದ ಸಿಂಹಪ್ರಿಯಾ..!

ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ.  ಜೊತೆಗೆ ಗುರು ದೇಶಪಾಂಡೆ ಇಲ್ಲಿ ಹಣ ಹೂಡಿದ್ದಾರೆ.ಪ್ರಕಾಶ್ ಬೆಳವಾಡಿ, ಕಿಶೋರ್ ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.

ಇದನ್ನೂ ಓದಿ: weekend with Ramesh season 5: ಮಾ.25 ರಿಂದ ಆರಂಭಗೊಳ್ಳಲಿದೆ 'ವೀಕೆಂಡ್‌ ವಿತ್‌ ರಮೇಶ್‌ʼ ಸೀಸನ್‌ 5'

ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ.  ಸೋ ವೇಟ್ ಮಾಡಿ ಸಿನಿಮಾ ನೋಡಿ ಎಂಜಾಯ್ ಮಾಡೋಣ ಅಲ್ವಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News