ನಾನು ದೀಪಿಕಾ ಪಡುಕೋಣೆಯನ್ನು ಲವ್‌ ಮಾಡ್ತೀನಿ : ಏಕಾಎಕಿ ಪ್ರಭಾಸ್‌ ಹೀಗೆ ಹೇಳಿದ್ಯಾಕೆ..!

Kalki 2898 AD : ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ದೀಪಿಕಾ ಬಗ್ಗೆ ಪ್ರಭಾಸ್ ಹಲವು ಪ್ರಮುಖ ಹೇಳಿಕೆಗಳನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಡಾರ್ಲಿಂಗ್‌ ಹೇಳಿಕೆಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Written by - Krishna N K | Last Updated : Aug 3, 2023, 05:58 PM IST
  • ಅಂತರಾಷ್ಟ್ರೀಯ ಮಾಧ್ಯಮವೊಂದಕ್ಕೆ 'ಕಲ್ಕಿ 2898 ಎಡಿ' ಚಿತ್ರದ ಬಗ್ಗೆ ಸಂದರ್ಶನ ನೀಡಿದ ನಟ ಪ್ರಭಾಸ್‌.
  • ನಟಿ ದೀಪಿಕಾ ಬಗ್ಗೆ ಪ್ರಭಾಸ್ ಹಲವು ಪ್ರಮುಖ ಹೇಳಿಕೆಗಳನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
  • 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ಪ್ರಭಾಸ್‌ ಜೊತೆ ದೀಪಿಕಾ ಪಡುಕೋಣೆ ನಟಿಸಿದ್ದಾರೆ.
ನಾನು ದೀಪಿಕಾ ಪಡುಕೋಣೆಯನ್ನು ಲವ್‌ ಮಾಡ್ತೀನಿ : ಏಕಾಎಕಿ ಪ್ರಭಾಸ್‌ ಹೀಗೆ ಹೇಳಿದ್ಯಾಕೆ..! title=

Prabhas on Deepika Padukone : 'ಕಲ್ಕಿ 2898 AD' ಇದೀಗ ಭಾರತದಲ್ಲಿ ತಯಾರಾಗುತ್ತಿರುವ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಇಲ್ಲಿಯವರೆಗೆ, 'ಪ್ರಾಜೆಕ್ಟ್ ಕೆ' ಎಂದು ಕರೆಯಲ್ಟಟ್ಟಿದ್ದ ಈ ಚಲನಚಿತ್ರಕ್ಕೆ 'ಕಲ್ಕಿ 2898 AD' ಎಂದು ಟೈಟಲ್ ಇಡಲಾಗಿದೆ. ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಕಾಮಿಕ್ ಕಾನ್ ಸಮಾರಂಭದಲ್ಲಿ ಈ ಶಿರ್ಷಿಕೆಯನ್ನು ಚಿತ್ರತಂಡ ಘೋಷಣೆ ಮಾಡಿತು. ಪ್ರಭಾಸ್, ರಾಣಾ, ಕಮಲ್ ಹಾಸನ್, ನಾಗ್ ಅಶ್ವಿನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : ರಜನಿಗೆ 150 ಕೋಟಿ! ಶಿವಣ್ಣ, ತಮನ್ನಾಗೆ ಎಷ್ಟು ಕೋಟಿ? ಜೈಲರ್ ತಂಡದ ಸಂಭಾವನೆ ವಿವರ ಇಲ್ಲಿದೆ.!

ಅಮಿತಾಬ್ ಬಚ್ಚನ್ ಆನ್‌ಲೈನ್ ಕರೆ ಮೂಲಕ ಭಾಗವಹಿಸಿದರು. ಆದರೆ ಈ ಕಾರ್ಯಕ್ರಮಕ್ಕೆ ದೀಪಿಕಾ ಪಡುಕೋಣೆ ಹಾಜರಾಗಿರಲಿಲ್ಲ. ಇತ್ತೀಚೆಗಷ್ಟೇ ಪ್ರಭಾಸ್ ಅಂತರಾಷ್ಟ್ರೀಯ ಮಾಧ್ಯಮವೊಂದಕ್ಕೆ 'ಕಲ್ಕಿ 2898 ಎಡಿ' ಚಿತ್ರದ ಬಗ್ಗೆ ಸಂದರ್ಶನ ನೀಡಿದ್ದು, ಅದರಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿದ್ದಾರೆ.

ಹೌದು.. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಇತ್ತೀಚೆಗೆ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು. ನಂತರ ಅವರು ಕೋಸ್ಟಾರ್ ದೀಪಿಕಾ ಬಗ್ಗೆ ಮಾತನಾಡಿದರು. ದೀಪಿಕಾ ದೊಡ್ಡ ಸೂಪರ್ ಸ್ಟಾರ್ ಎಂದು ಹೊಗಳಿದರು. 

ಇದನ್ನೂ ಓದಿ : : ಕರ್ನಾಟಕದ ಹೊಸ ಕ್ರಶ್ ನಿಮಿಕಾ ರತ್ನಾಕರ್‌ಗೆ ಬರ್ತ್‍ಡೇ ಸಂಭ್ರಮ!

ಅಲ್ಲದೆ, ದೀಪಿಕಾ ಸೆಟ್‌ಗಳಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ. ಅವರು ಸೆಟ್‌ಗೆ ಬಂದಾಗ ಎಲ್ಲರೂ ಸಂತೋಷವಾಗಿರುತ್ತಾರೆ. ಹಾಗಾಗಿ ನಟಿ ದೀಪಿಕಾ ಎಂದರೆ ನನಗೆ ತುಂಬಾ ಇಷ್ಟ ನಾನು ಯಾವಾಗ್ಲೂ ಅವಳನ್ನ ಇಷ್ಟ ಪಡ್ತೀನಿ ಅಂತ ಪ್ರಭಾಸ್ ಹೇಳಿದರು. ದೀಪಿಕಾ ಬಗ್ಗೆ ಪ್ರಭಾಸ್ ಹೇಳಿದ ಮಾತುಗಳು ವೈರಲ್ ಆಗುತ್ತಿವೆ. 

ನಿರ್ದೇಶಕ ನಾಗ್ ಅಶ್ವಿನ್ ಬಹಳ ಮಹತ್ವಾಕಾಂಕ್ಷೆಯ ಕಲ್ಕಿ ಎಡಿ 2898 ಸಿನಿಮಾವನ್ನು ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವನಿ ದತ್ ಸುಮಾರು ರು.600 ಕೋಟಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಿಂದ ಬಿಡುಗಡೆಯಾಗಿರುವ ಗ್ಲಿಂಪ್ಸಸ್ ವಿಡಿಯೋ ಈಗಾಗಲೇ ದಾಖಲೆಗಳನ್ನು ಸೃಷ್ಟಿಸಿದೆ. ಚಿತ್ರದ ಬಗ್ಗೆ ನಿರೀಕ್ಷೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News