'ವ್ಹೀಲ್‌ಚೇರ್' ಮೇಲೆ ಕೂತು ಹೊಟ್ಟೆ ನೋಯುವಂತೆ ನಗಿಸುತ್ತಾನೆ 'ರೋಮಿಯೋ'..!

ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹೊಸಬರ ಅಬ್ಬರ ಬಲು ಜೋರಾಗಿದೆ. ಹೊಸ ಪ್ರಯೋಗಗಳ ಮೂಲಕ ಕನ್ನಡಿಗರಿಗೆ ಹೊಸ ಬಗೆಯ ಸಿನಿಮಾಗಳನ್ನ ನ್ಯೂ ಕಮರ್ಸ್‌ ಕೊಡುತ್ತಿದ್ದು, ಈ ಸಾಲಿಗೆ 'ವ್ಹೀಲ್‌ಚೇರ್ ರೋಮಿಯೋ' ಕೂಡ ಸೇರ್ಪಡೆಯಾಗಿದೆ. ಕನ್ನಡಿಗರನ್ನ ಥಿಯೇಟರ್‌ ಒಳಗೆ ಬಿದ್ದು ಬಿದ್ದು ನಗುವಂತೆ ಮಾಡಲು 'ವ್ಹೀಲ್‌ಚೇರ್ ರೋಮಿಯೋ' ಎಂಟ್ರಿ ಕೊಟ್ಟಿದ್ದಾನೆ.

Written by - Malathesha M | Edited by - Manjunath N | Last Updated : May 27, 2022, 04:30 PM IST
  • ಕನ್ನಡದಲ್ಲಿ ವಿಭಿನ್ನ ಟೈಟಲ್‌ನಡಿ, ಟ್ರೆಂಡಿಂಗ್‌ ಕಥೆಯನ್ನೇ ಹಿಡಿದು ಬರುವ ಹೊಸಬರ ತಂಡಗಳು ಸಾಕಷ್ಟು ಯಶಸ್ಸು ಗಳಿಸುತ್ತಿದ್ದು,
  • ಸದ್ಯ 'ವ್ಹೀಲ್‌ಚೇರ್ ರೋಮಿಯೋ' ಕೂಡ ಅದೇ ರೀತಿ ಗಮನ ಸೆಳೆಯುತ್ತಿದೆ. ಹೀರೋಗೆ ಸಿಕ್ಸ್ ಪ್ಯಾಕ್ ಇರಬೇಕು, ನೋಡೋಕೆ ಹ್ಯಾಂಡ್ಸಮ್‌ ಆಗಿರಬೇಕು, ಸ್ಮಾರ್ಟ್ & ಫಿಟ್ ಆಗಿರಬೇಕು, ಡ್ಯಾನ್ಸ್ ಕೂಡ ಬರಬೇಕು
'ವ್ಹೀಲ್‌ಚೇರ್' ಮೇಲೆ ಕೂತು ಹೊಟ್ಟೆ ನೋಯುವಂತೆ ನಗಿಸುತ್ತಾನೆ 'ರೋಮಿಯೋ'..! title=

ಬೆಂಗಳೂರು: ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹೊಸಬರ ಅಬ್ಬರ ಬಲು ಜೋರಾಗಿದೆ. ಹೊಸ ಪ್ರಯೋಗಗಳ ಮೂಲಕ ಕನ್ನಡಿಗರಿಗೆ ಹೊಸ ಬಗೆಯ ಸಿನಿಮಾಗಳನ್ನ ನ್ಯೂ ಕಮರ್ಸ್‌ ಕೊಡುತ್ತಿದ್ದು, ಈ ಸಾಲಿಗೆ 'ವ್ಹೀಲ್‌ಚೇರ್ ರೋಮಿಯೋ' ಕೂಡ ಸೇರ್ಪಡೆಯಾಗಿದೆ. ಕನ್ನಡಿಗರನ್ನ ಥಿಯೇಟರ್‌ ಒಳಗೆ ಬಿದ್ದು ಬಿದ್ದು ನಗುವಂತೆ ಮಾಡಲು 'ವ್ಹೀಲ್‌ಚೇರ್ ರೋಮಿಯೋ' ಎಂಟ್ರಿ ಕೊಟ್ಟಿದ್ದಾನೆ.

ಕನ್ನಡದಲ್ಲಿ ವಿಭಿನ್ನ ಟೈಟಲ್‌ನಡಿ, ಟ್ರೆಂಡಿಂಗ್‌ ಕಥೆಯನ್ನೇ ಹಿಡಿದು ಬರುವ ಹೊಸಬರ ತಂಡಗಳು ಸಾಕಷ್ಟು ಯಶಸ್ಸು ಗಳಿಸುತ್ತಿದ್ದು, ಸದ್ಯ 'ವ್ಹೀಲ್‌ಚೇರ್ ರೋಮಿಯೋ' ಕೂಡ ಅದೇ ರೀತಿ ಗಮನ ಸೆಳೆಯುತ್ತಿದೆ. ಹೀರೋಗೆ ಸಿಕ್ಸ್ ಪ್ಯಾಕ್ ಇರಬೇಕು, ನೋಡೋಕೆ ಹ್ಯಾಂಡ್ಸಮ್‌ ಆಗಿರಬೇಕು, ಸ್ಮಾರ್ಟ್ & ಫಿಟ್ ಆಗಿರಬೇಕು, ಡ್ಯಾನ್ಸ್ ಕೂಡ ಬರಬೇಕು... ಹೀಗೆ ಒಂದು ದೊಡ್ಡ ಲಿಸ್ಟ್‌ ಆಫ್‌ ಕ್ವಾಲಿಟಿ ಈ ಚಿತ್ರದ ಹೀರೀಗೆ ಇಲ್ಲ. 'ವ್ಹೀಲ್‌ಚೇರ್ ರೋಮಿಯೋ' ಹೀರೋ ಕೂರೋದೆ  'ವ್ಹೀಲ್‌ಚೇರ್' ಮೇಲೆ. ಹೀಗೆ ಹೀರೋ ಆಗಿ ಉಲ್ಲಾಸ್‌ ಪಾತ್ರದಲ್ಲಿ ರಾಮ್ ಚೇತನ್‌ ಮಿಂಚಿದ್ದಾರೆ. ರಾಮ್ ಚೇತನ್‌ಗೆ ರಂಗಾಯಣ ರಘು ಮತ್ತು ಸುಚೇಂದ್ರ ಪ್ರಸಾದ್‌ ಸೇರಿದಂತೆ ನಟ ಗಿರೀಶ್‌ ಶಿವಣ್ಣ ಸಾಥ್‌ ನೀಡಿದ್ದಾರೆ.No description available.

ಇದನ್ನೂ ಓದಿ: DK Sivakumar : 'ಒಂದು ಬಿಜೆಪಿಯವರಿಗೆ ಶರಣಾಗಬೇಕು, ಇಲ್ಲ ಅವರ ಜೊತೆ ಸೇರಿಕೊಳ್ಳಬೇಕು'

ಪಕ್ಕಾ ರೋಮಿಯೋ..!

ನಡೆಯಲಾಗದ, ಕೈಕಾಲು ಆಡದ, ಸ್ವಚ್ಛ ಮನಸ್ಸಿನ ಹುಡುಗ ಪ್ರಾಯಕ್ಕೆ ಬಂದಾಗ ಹುಟ್ಟುವುದೇ ಮದುವೆಯ ಪ್ರಶ್ನೆ. ಹೀಗೆ ಯಾರನ್ನು ಆತ ಮದುವೆ ಆಗಬೇಕು ಎಂಬ ಪ್ರಶ್ನೆಗೆ ಉತ್ತರವನ್ನು ಅದೇ ಹೀರೋ ಹುಡುಕಿಕೊಂಡು, ಕಡೆಗೆ ಕಾಮಾಟಿಪುರಕ್ಕೆ ಹೋಗುತ್ತಾನೆ. ಹೀಗೆ ಸಾಗುವ ಕಥೆ ಸಮಾಜಿಕ ಸಂದೇಶದ ಜೊತೆಗೆ, ಪ್ರೇಕ್ಷಕನ ಹೊಟ್ಟೆ ನೋಯಿಸುವಂತೆ ನಗಿಸುತ್ತದೆ. ಸ್ವತಃ ಅಪ್ಪನೇ ಮಗನ ವಿಚಿತ್ರ ವರ್ತನೆಗೆ ಬೇಸತ್ತು ಹೋಗಿರುತ್ತಾನೆ. ಆದರೆ ಕಡೆಗೆ ತನ್ನ ಮಗ ಮಾಡುತ್ತಿರುವುದು ಸರಿಯಾಗಿದೆ ಅನ್ನೋದು ತಿಳಿದ ತಕ್ಷಣ ತನ್ನ ನಿಲುವು ಬದಲಿಸಿಕೊಳ್ಳುವ ಅಪ್ಪ ಸೊಸೆಯನ್ನ ಮನೆಗೆ ಕರೆತರಲು ಬರ್ತಾನೆ.No description available.

ಇದನ್ನೂ ಓದಿ: RSS ಮೆಚ್ಚಿಸಲು ಬಿಜೆಪಿ ಸರ್ಕಾರ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ: ಕಾಂಗ್ರೆಸ್

ನಿರ್ದೇಶಕ ನಟರಾಜ್‌ ಎಲ್ಲಾ ಕಡೆ ಗೆದ್ದು, ಕಡೆಗೆ ಒಂಚೂರು ಎಡವಿದ್ದಾರೆ. ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಕೆಲ ಸೀನ್‌ಗಳನ್ನ ಎಳೆದಾಡಿದ ಅನುಭವ ಆದ್ರೂ, ಸಿನಿಮಾ ಮಾತ್ರ ಸೂಪರ್.‌‌ ಇನ್ನು ಭರತ್ ಬಿ.ಜೆ. ಸಂಗೀತ ಸಂತೋಷ್ ಪಾಂಡಿ ಛಾಯಾಗ್ರಹಣ ಸೂಪರ್‌. ಕನ್ನಡದಲ್ಲಿ ಇಂತಹ ವಿಭಿನ್ನ ಪ್ರಯತ್ನ ಹಾಗೂ ವಿಭಿನ್ನವಾಗಿ ಕಥೆ ಹೇಳುವ ತಂಡಗಳು ಮತ್ತಷ್ಟು ಬರಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News