Kantara With ABD: ರಿಷಬ್ ಶೆಟ್ಟಿ ಜೊತೆ ‘ಕಾಂತಾರ’ ಡೈಲಾಗ್ ಹೊಡೆದ ಎಬಿ ಡಿವಿಲಿಯರ್ಸ್!

ಕಂಬಳ ಪ್ರಾರಂಭವಾಗುವ ಮುನ್ನ ಹೇಳುವ ‘ಬಿಡಿಯಾ’ ಮತ್ತು ‘ಕಾಂತಾರ’ ಅನ್ನೋ ಡೈಲಾಗ್ ಅನ್ನು ಎಬಿಡಿ ರಿಷಬ್ ಶೆಟ್ಟಿ ಜೊತೆ ಒಟ್ಟಿಗೆ ಹೇಳಿದ್ದಾರೆ.

Written by - Puttaraj K Alur | Last Updated : Nov 4, 2022, 09:58 AM IST
  • ನಟ-ನಿರ್ದೇಶಕ ರಿಷಬ್ ಜೊತೆಗೆ ಕಾಣಿಸಿಕೊಂಡ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್
  • ರಿಷಬ್ ಶೆಟ್ಟಿ ಜೊತೆಗೆ ‘ಕಾಂತಾರ’ ಸಿನಿಮಾದ ಡೈಲಾಗ್ ಹೇಳಿ ಗಮನ ಸೆಳೆದ ಎಬಿಡಿ
  • ರಿಷಬ್ ಶೆಟ್ಟಿಯೊಂದಿಗೆ ಕಂಬಳದ ಕೋಣ ಒಡಿಸ್ತಾರಾ ಕ್ರಿಕೆಟ್ ಕೋಲದ ಮಿಸ್ಟರ್ 360?
Kantara With ABD: ರಿಷಬ್ ಶೆಟ್ಟಿ ಜೊತೆ ‘ಕಾಂತಾರ’ ಡೈಲಾಗ್ ಹೊಡೆದ ಎಬಿ ಡಿವಿಲಿಯರ್ಸ್!  title=
Kantara With ABD

ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಬಿಡುಗಡೆಯಾದ ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಬಾಕ್ಸಾ ಆಫೀಸ್ ಧೂಳಿಪಟ ಮಾಡಿರುವ ಈ ಕನ್ನಡ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ಸೆಪ್ಟೆಂಬರ್ 30ರಂದು ಕೇವಲ ಕನ್ನಡ ಭಾಷೆಯಲ್ಲಿ ರಿಲೀಸ್ ಆಗಿದ್ದ ‘ಕಾಂತಾರ’ ಬಳಿಕ ಹಲವು ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಸಿನಿಮಾವಾಗಿಯೂ ಯಶಸ್ವಿಯಾಗಿದೆ.

‘ಕಾಂತಾರ’ ಸಿನಿಮಾ ವೀಕ್ಷಿಸಿದ ಭಾರತೀಯ ಚಿತ್ರರಂಗದ ದಿಗ್ಗಜರು ರಿಷಬ್ ಶೆಟ್ಟಿಗೆ ಸಲಾಂ ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ‘ಕಾಂತಾರ’ ಸಿನಿಮಾ ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ. ಚಿತ್ರದ ಕೊನೆಯ 20 ನಿಮಿಷಗಳ ಬಗ್ಗೆಯೇ ಪ್ರತಿಯೊಬ್ಬರೂ ಮಾತನಾಡುವಂತಾಗಿದೆ. ‘ಕಾಂತಾರ’ ಕ್ಲೈಮ್ಯಾಕ್ಸ್ ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರ ಮೈನವಿರೇಳಿಸುವಂತೆ ಮಾಡಿದೆ.

ಇದನ್ನೂ ಓದಿ: Banaras Movie Review: 'ಮುಕ್ತ'ವಾಗಿ ಬದುಕು ಕಟ್ಟಿಕೊಳ್ಳೋಕೆ 'ಬನಾರಸ್ 'ಗೆ ಹಾರಿದ ಜೈದ್ ಖಾನ್..!

ಇದೀಗ ಹೊಸ ವಿಷಯ ಏನಪ್ಪಾ ಅಂದ್ರೆ ಕ್ರಿಕೆಟ್ ಲೋಕದ 360 ಖ್ಯಾತಿಯ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್ ಬೆಂಗಳೂರಿಗೆ ಆಗಮಿಸಿದ್ದಾರೆ. ಮುಂದಿನ ವರ್ಷ ಅಂದರೆ 2023ರಲ್ಲಿ ಆರ್‌ಸಿಬಿ ತಂಡದ ಭಾಗವಾಗಿ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಈ ಹಿಂದೆ ಎಬಿಡಿ ಹೇಳಿದ್ದರು. ಆದರೆ ಅವರು ಆಟಗಾರನಾಗಿಯೋ ಅಥವಾ ಕೋಚ್ ಆಗಿಯೋ ಅಂತಾ ಸ್ಪಷ್ಟಪಡಿಸಿಲ್ಲ. ಎಬಿಡಿ ಬೆಂಗಳೂರಿಗೆ ಬಂದಿರುವುದು ಆರ್‍ಸಿಬಿ ಅಭಿಮಾನಿಗಳಿಗೆ ಖುಷಿ ಹೆಚ್ಚಿಸಿದೆ. ಹೀಗೆ ಬೆಂಗಳೂರಿಗೆ ಬಂದ ಮಿಸ್ಟರ್ 360 ಎಬಿಡಿ ಸಿನಿಮಾ ಲೋಕದ 360 ರಿಷಬ್ ಶೆಟ್ಟಿಯನ್ನು ಭೇಟಿಯಾಗಿದ್ದಾರೆ.

‘ಕಾಂತಾರ’ ಸಿನಿಮಾ ತಂಡವು RCB ಜೊತೆಗೆ Proud Partners ಆಗಿದೆ. ಈ ಬಗ್ಗೆ ಸ್ವತಃ ಆರ್‍ಸಿಬಿ ತಂಡ ಮತ್ತು ರಿಷಬ್ ಶೆಟ್ಟಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಟ್ವೀಟ್‍ನಲ್ಲಿ ರಿಷಬ್ ಜೊತೆಗೆ ಎಬಿಡಿ ‘ಕಾಂತಾರ’ ಸಿನಿಮಾದ ಡೈಲಾಗ ಹೇಳಿ ಗಮನ ಸೆಳೆದಿದ್ದಾರೆ. ಕಂಬಳ ಪ್ರಾರಂಭವಾಗುವ ಮುನ್ನ ಹೇಳುವ ‘ಬಿಡಿಯಾ’ ಮತ್ತು ‘ಕಾಂತಾರ’ ಅನ್ನೋ ಡೈಲಾಗ್ ಅನ್ನು ಎಬಿಡಿ ರಿಷಬ್ ಜೊತೆ ಒಟ್ಟಿಗೆ ಹೇಳಿದ್ದಾರೆ.

ಇದನ್ನೂ ಓದಿ: ಸಮಂತಾ ಡೆಡಿಕೇಷನ್ ನೋಡಿ ಬೆರಗಾದ ಹಾಲಿವುಡ್ ಸಾಹಸ ನಿರ್ದೇಶಕ ಯಾನಿಕ್ ಬೆನ್!

ಎಬಿಡಿ ಭೇಟಿಯಾಗಿರುವ ಸಂತಸ ಹಂಚಿಕೊಂಡಿರುವ ರಿಷಬ್ ಶೆಟ್ಟಿ ವಿಡಿಯೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ‘ಇದು ಪಂದ್ಯ, ನಾನು ಇಂದು ನಿಜವಾದ 360ಯನ್ನು ಭೇಟಿಯಾದೆ. ಸೂಪರ್ ಹೀರೋ ಮತ್ತೆ ತಮ್ಮ ಮೂಲಸ್ಥಾನಕ್ಕೆ ಮರಳಿದ್ದಾರೆ. ನಮ್ಮ ಬೆಂಗಳೂರು’ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಆರ್‍ಸಿಬಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ರಿಶಬ್ ಶೆಟ್ಟಿ ಮತ್ತು ಹೊಂಬಾಳೆ ಪಿಲ್ಸ್ಂ ಜೊತೆ ಸೇರಿ ಎಬಿಡಿ ಕಂಬಳದ ಕೋಣ ಒಡಿಸ್ತಾರಾ ಅಂತಾ ಹಲವು ಪ್ರಶ್ನಿಸಿದ್ದಾರೆ. ಒಟ್ನಲ್ಲಿ ‘ಕಾಂತಾರ’ ಸಿನಿಮಾ ತಂಡದ ಜೊತೆಗೆ ಎಬಿಡಿ ಕಾಣಿಸಿಕೊಂಡಿರುವುದು ತೀವ್ರ ಕುತೂಹಲ ಹೆಚ್ಚಿಸಿದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News