ಆಲಿಯಾಗೆ ತಡರಾತ್ರಿ ಮೆಸೇಜ್‌ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್!‌ ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆ

Katrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ. ಈಗ ಈ ಪ್ರಶ್ನೆ ಏನು ಮತ್ತು ಅದಕ್ಕೆ ಆಲಿಯಾ ಏನು ಉತ್ತರ ನೀಡಿದ್ದರು ಇಲ್ಲಿದೆ ನೋಡಿ...

Written by - Chetana Devarmani | Last Updated : Aug 5, 2024, 02:41 PM IST
  • ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್
  • ಆಲಿಯಾಗೆ ಕೇಳಿದ್ದರಂತೆ ಇಂಥದ್ದೆಲ್ಲ ಪ್ರಶ್ನೆ
  • ಆಲಿಯಾ ಏನು ಉತ್ತರ ನೀಡಿದ್ದರು?
ಆಲಿಯಾಗೆ ತಡರಾತ್ರಿ ಮೆಸೇಜ್‌ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್!‌ ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆ  title=

Katrina Kaif texted Alia Bhatt at late night: ಬಾಲಿವುಡ್‌ನಲ್ಲಿ ಕೆಲವೇ ಕೆಲವು ಸುಂದರಿಯರಿದ್ದಾರೆ ಅವರ ಸ್ನೇಹಕ್ಕೆ ಸಾಟಿಯಿಲ್ಲ. ಇದರಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಹೆಸರು ಕೂಡ ಸೇರಿದೆ. ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ. ಈಗ ಈ ಪ್ರಶ್ನೆ ಏನು ಮತ್ತು ಅದಕ್ಕೆ ಆಲಿಯಾ ಏನು ಉತ್ತರ ನೀಡಿದ್ದರು ಇಲ್ಲಿದೆ ನೋಡಿ...

ಆಲಿಯಾ ಭಟ್‌ ಮತ್ತು ಕತ್ರಿನಾ ಕೈಫ್‌ ಒಮ್ಮೆ 'BFF ವಿತ್ ವೋಗ್ ಶೋ' ಗೆ ಹೋಗಿದ್ದರು. ಈ ವೇಳೆ ಇಬ್ಬರೂ ನಟಿಯರು ತಮ್ಮ ಸ್ನೇಹದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಂತರ ರಾತ್ರಿ 2-3 ಗಂಟೆ ಸುಮಾರಿಗೆ ಆಲಿಯಾಗೆ ಮೆಸೇಜ್ ಮಾಡಿದ್ದೆ ಎಂದು ಕತ್ರಿನಾ ಹೇಳಿದ್ದಾರೆ. 

ಆಲಿಯಾ ತನ್ನ Instagram ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಕತ್ರಿನಾ ಕೈಫ್ ಕಾರ್ಯಕ್ರಮದಲ್ಲಿ ಹೇಳಿದ್ದರು. ನಾನು ಒಮ್ಮೆ ರಾತ್ರಿ 2-3 ಗಂಟೆಗೆ ಅವಳಿಗೆ ಮೆಸೇಜ್ ಮಾಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ಫೋಟೋ ಫಿಟ್ ಆಗುತ್ತಿಲ್ಲ ಎಂದು ಮೆಸೇಜ್ ಮಾಡಿದ್ದೆ. ಇದಕ್ಕಾಗಿ ನಾನು ಏನು ಮಾಡಬೇಕು? ಎಂದು ಕೇಳಿದೆ. ಆಗ ಆಲಿಯಾ ಅವರಿಗೆ ಫೋಟೋದ ಸೈಜ್‌ ಕಡಿಮೆ ಮಾಡಬೇಕಾಗುತ್ತದೆ ಎಂದು ಉತ್ತರಿಸಿದರಂತೆ. ನಂತರ ನಾನು ಹಾಗೇ ಮಾಡಿದೆ ಎಂದು ಕತ್ರಿನಾ ಹೇಳಿದ್ದಾರೆ.  

ಇದನ್ನೂ ಓದಿ: ಅಮ್ಮನಾಗಲಿರುವ ನಟಿ ದೀಪಿಕಾ ಪಡುಕೋಣೆ ನಿಜವಾದ ವಯಸ್ಸೆಷ್ಟು ಗೊತ್ತಾ?

ರಾತ್ರಿ ಸುಮಾರು 2 ಗಂಟೆ ಆಗಿದೆ ಎಂದು ನಂತರ ನನಗೆ ಅರಿವಾಯಿತು ಎಂದು ಕತ್ರಿನಾ ಹೇಳಿದ್ದಾರೆ. ಈ ಪ್ರಶ್ನೆ ಕೇಳಲು ಇದು ಸರಿಯಾದ ಸಮಯವಲ್ಲ ಎಂದು ನಾನು ಬೇಜಾರು ಮಾಡಿಕೊಂಡೆ ಎಂದಿದ್ದಾರೆ. ಕತ್ರಿನಾ ಈ ಮಾತು ಹೇಳಿದ ತಕ್ಷಣ ಆಲಿಯಾ ನಗಲು ಶುರು ಮಾಡಿದರು. 

ರಣಬೀರ್ ಕಪೂರ್ ಕತ್ರಿನಾ ಕೈಫ್‌ ಜೊತೆ ಡೇಟಿಂಗ್ ಮಾಡಿದ್ದರಂಬ ವದಂತಿಯಿದೆ. ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡಿದ್ದರೆಂದು ಹೇಳಲಾಗುತ್ತದೆ. ಇಬ್ಬರ ಜೊತೆ ಬ್ರೇಕ್ ಅಪ್ ಆದ ನಂತರ ರಣಬೀರ್ ಆಲಿಯಾಳನ್ನು ಮದುವೆಯಾದರು. ಆದರೆ ಇನ್ನೂ ಆಲಿಯಾ ಮತ್ತು ಕತ್ರಿನಾ ಒಳ್ಳೆಯ ಸ್ನೇಹಿತರಾಗಿಯೇ ಇದ್ದಾರೆ. ಜೀ ಲೇ ಜರಾ ಚಿತ್ರದಲ್ಲಿ ಕತ್ರಿನಾ, ಆಲಿಯಾ ಮತ್ತು ಪ್ರಿಯಾಂಕಾ ಚೋಪ್ರಾ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸದ್ಯ ಈ ಚಿತ್ರ ಸ್ಥಗಿತಗೊಂಡಿದೆ.

ಇದನ್ನೂ ಓದಿ: ಪುಷ್ಪ 2 ರಿಲೀಸ್ ತಡವಾಗಲು ಇದೇ ಅಸಲಿ ಕಾರಣ.. ರಹಸ್ಯ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

Trending News