ಕೆಇಎಸ್ ಅಧಿಕಾರಿ ಮಂಜಪ್ಪ ಮಾಗೊದಿಗೆ ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್

ಬೆಂಗಳೂರು: ಮಂಜಪ್ಪ ಮಾಗೊದಿ ಅವರು ಪ್ರಗತಿಪರ ಚಿಂತಕರು, ಸೃಜನಶೀಲ ಬರಹಗಾರರು ಹಾಗು ಉತ್ತಮ ಕವಿಗಳಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿಯೂ ಇವರು ಸಾಹಿತ್ಯ ಮತ್ತು ಸಂಭಾಷಣೆಕಾರರಾಗಿ ಕಾರ್ಯನಿವರ್ಹಿಸಿದ್ದಾರೆ.

Written by - YASHODHA POOJARI | Last Updated : May 14, 2024, 07:03 PM IST
    • ಕೆಇಎಸ್‌ ಅಧಿಕಾರಿ ಮಂಜಪ್ಪ ಮಾಗೊದಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌
    • ಉಪನ್ಯಾಸಕರಾಗಿ ಹಾಗೂ ಶಿಕ್ಷಣಾಧಿಕಾರಿಯಾಗಿದ್ದ ಮಂಜಪ್ಪ
    • ಕನಕದಾಸರ ಸಾಹಿತ್ಯ ಮತ್ತು ತಳಸಮುದಾಯಗಳು-ಪುನರ್‌ ಚಿಂತನೆ ಎಂಬ ವಿಷಯ ಕುರಿತು ಪ್ರಬಂಧ
ಕೆಇಎಸ್ ಅಧಿಕಾರಿ ಮಂಜಪ್ಪ ಮಾಗೊದಿಗೆ ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್ title=
Manjappa Magodi

ಬೆಂಗಳೂರು: ಕೆಇಎಸ್‌ ಅಧಿಕಾರಿ ಮಂಜಪ್ಪ ಮಾಗೊದಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಉಪನ್ಯಾಸಕರಾಗಿ ಹಾಗೂ ಶಿಕ್ಷಣಾಧಿಕಾರಿಯಾಗಿದ್ದ ಮಂಜಪ್ಪ ಅವರು, ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ನಿರ್ದೇಶಕ ಪ್ರೊ.ಶಿವಾನಂದ ಕೆಳಗಿನಮನಿ ಅವರ ಮಾರ್ಗದರ್ಶನದಲ್ಲಿ ಕನಕದಾಸರ ಸಾಹಿತ್ಯ ಮತ್ತು ತಳಸಮುದಾಯಗಳು-ಪುನರ್‌ ಚಿಂತನೆ ಎಂಬ ವಿಷಯ ಕುರಿತು ಮಂಡಿಸಿದ್ದ ಸಂಶೋಧನ ಪ್ರಬಂಧಕ್ಕೆ ಕುವೆಂಪು ವಿವಿ ಪಿಹೆಚ್‌ಡಿ ಪದವಿ ನೀಡಿದೆ. 

ಮಂಜಪ್ಪ ಮಾಗೊದಿ ಅವರು ಪ್ರಗತಿಪರ ಚಿಂತಕರು, ಸೃಜನಶೀಲ ಬರಹಗಾರರು ಹಾಗು ಉತ್ತಮ ಕವಿಗಳಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿಯೂ ಇವರು ಸಾಹಿತ್ಯ ಮತ್ತು ಸಂಭಾಷಣೆಕಾರರಾಗಿ ಕಾರ್ಯನಿವರ್ಹಿಸಿದ್ದಾರೆ.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಈ ನಾಲ್ವರು ಆಟಗಾರರು! ಯಾರವರು ಗೊತ್ತಾ?

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಎಂ.ಜಿ.ದಿಬ್ಬ ಗ್ರಾಮದ ಪಾರ್ವತಮ್ಮ ಮತ್ತು ತಿಮ್ಮಪ್ಪನವರ ಮಗನಾಗಿ ಜನಿಸಿದ ಮಂಜಪ್ಪ ಮಾಗೊದಿ ತೀರಾ ಬಡಕುಟುಂಬದ ಹಿನ್ನೆಲೆಯಿಂದ ಬಂದವರು. ಕಡುಬಡತನದಲ್ಲೇ ವಿದ್ಯಾಭ್ಯಾಸ ನಡೆಸಿದ ಅವರು, ಪ್ರತಿಭಾವಂತರು, ವಾಗ್ಮಿಗಳು, ಮುಂದಾಲೋಚನೆ ಉಳ್ಳವರು.

ದೂರದೃಷ್ಟಿ ಇಟ್ಟುಕೊಂಡೇ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ಕುರಿತು ಬೋಧನೆ ಮಾಡಿದವರು. ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸುವಲ್ಲಿಯೂ ಕಾರಣರಾದವರು. ಹೊಸದುರ್ಗ ತಾಲೂಕಿನಲಿ ಉಪನ್ಯಾಸಕರಾಗಿದ್ದ ಇವರನ್ನು ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ಗುರು ಪ್ರೀತಿಯೊಂದಿಗೆ ಹಿಂಬಾಲಿಸುತ್ತಿದ್ದಾರೆ ಎಂಬುದು ವಿಶೇಷ.

ಬಡತನದಲ್ಲೇ ಬೆಳೆದು ಶಿಕ್ಷಣದೊಂದಿಗೆ ಅರಳಿದ ಮಂಜಪ್ಪ, ಇಂದಿಗೂ ಬಡವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಇಟ್ಟುಕೊಂಡ ಮಧ್ಯಕರ್ನಾಟಕದ ಪ್ರತಿಭೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಣ ಕೆಲಸ ನಿರ್ವಹಿಸಿದ ಇವರ ಬೆನ್ನ ಹಿಂದೆ ಇದೀಗ ದೊಡ್ಡ ವಿದ್ಯಾರ್ಥಿ ಸಮೂಹವೇ ಇದೆ. ಎಲ್ಲೆಡೆ ಶಿಕ್ಷಣ ಕ್ರಾಂತಿ ಮಾಡಿ ಸೈ ಎನಿಸಿಕೊಂಡ ಮಂಜಪ್ಪ ಮಾಗೊದಿ, ಬೆಂಗಳೂರಿಗೆ ಬಂದು ಸಚಿವರ ಜೊತೆಗೆ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಮುಖ್ಯಮತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ರಾಜಕಾರಣಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡವರು. ಇನ್ನು, ಶಿಕ್ಷಣದ ಬಗ್ಗೆ  ಸಾಕಷ್ಟು ಕಾಳಜಿ ವಹಿಸಿರುವ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಹೀಗೆ ಇರಬೇಕು ಅಂದುಕೊಂಡು ಆ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದವರು. ಮಕ್ಕಳ ಶಿಕ್ಷಣದ ಗುಣಮಟ್ಟ ಹೇಗಿದೆ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಿದ್ದರು. ಇನ್ನು ಸರ್ಕಾರ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ತಯಾರಿಕೆ ಸಮಿತಿಗೆ ಇವರನ್ನು ವಿಶೇಷ ಅಧಿಕಾರಿಯನ್ನಾಗಿಸಿದ್ದ  ಸಂದರ್ಭದಲ್ಲಿ ಇವರು ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ಕಾರಣರಾಗಿದ್ದರು.

ಇವರು ವರ್ಷಗಳ ಹಿಂದೆ ಬರೆದ ಕವನವೊಂದು ಕುವೆಂಪು ವಿವಿ ಪಠ್ಯಪುಸ್ತಕದಲ್ಲಿ ಪಠ್ಯವಾಗಿದೆ. ಇಂದಿಗೂ ವಿದ್ಯಾರ್ಥಿಗಳು ಆ ಕವನ ಓದುತ್ತಿದ್ದಾರೆ. ಇನ್ನು, ಹೊಸದುರ್ಗ ತಾಲೂಕಿನಲ್ಲಿ ಹಲವು ವಿಷಯಗಳ ಮೂಲಕ ಸದ್ದು ಮಾಡಿ ಸಂಚಲನ ಮೂಡಿಸಿದ್ದು ವಿಶೇಷ.  ಆ ತಾಲೂಕಿನ ಅಭಿವೃದ್ಧಿ, ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳ ವಿಕಸನ ಕುರಿತು ಅಧ್ಯಯನ ನಡೆಸಿದ್ದರು. ಅಂದರೆ ಈ ತಾಲೂಕು ಅಭಿವೃದ್ಧಿ ಪಥದಲ್ಲಿ ಹೀಗೆ ಸಾಗಬೇಕು, ಇಲ್ಲಿನ ರಾಜಕಾರಣಿಗಳು ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂಬ ಕುರಿತಂತೆ ಹಲವು ವಿಷಯಗಳ ಬಗ್ಗೆ ತಿಳಿವಳಿಕೆಯ ಅಧ್ಯಯನ ಮಾಡಿದ್ದರು. ಅದು ದೊಡ್ಡ ಮಟ್ಟದಲ್ಲಿ ವೈರಲ್‌  ಆಗಿತ್ತು.

ಇದನ್ನೂ ಓದಿ: ಟೀಂ ಇಂಡಿಯಾದ ದಿಗ್ಗಜ ಇರ್ಫಾನ್ ಪಠಾಣ್ ಪತ್ನಿ ಯಾರು ಗೊತ್ತಾ? ಮದುವೆಯಾಗಿ 8 ವರ್ಷ ಕಾಲ ಮುಖ ತೋರಿಸದೆ ಬದುಕಿದ್ಳು ಈ ಸುಂದರಿ

ಮಂಜಪ್ಪ ಮಾಗೊದಿ ಅವರು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಕೆಎಎಸ್‌ ಅಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿವರ್ಹಿಸಿದವರು.  ಕನಕದಾಸರ ಸಾಹಿತ್ಯ ಮತ್ತು ತಳಸಮುದಾಯಗಳು-ಪುನರ್‌ ಚಿಂತನೆ ಎಂಬ ವಿಷಯ ಕುರಿತು ಮಂಡಿಸಿದ್ದ ಸಂಶೋಧನ ಪ್ರಬಂಧಕ್ಕೆ ಕುವೆಂಪು ವಿವಿ ಪಿಹೆಚ್‌ಡಿ ಪದವಿ ನೀಡಿ ಗೌರವಿಸಿರುವುದು   ಅವರ ಆಪ್ತ ಬಳಗಕ್ಕೆ ಸಂತಸ ಹೆಚ್ಚಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News