ಎಲ್ಲಿಗೆ ಹೋದ್ರು KGF ಸುಂದರಿ ನಟಿ ಶ್ರೀನಿಧಿ ಶೆಟ್ಟಿ...! ಪ್ಯಾನ್ಸ್‌ ಹುಡುಕಾಟ

Srinidhi Shetty new movie : KGF ಸುಂದರಿ, ನಟಿ ಶ್ರೀನಿಧಿ ಶೆಟ್ಟಿ ಸುದ್ದಿನೇ ಇಲ್ಲ, ಯಾಕೆ..? ಅಂತ ಫ್ಯಾನ್ಸ್ ಕೇಳುತ್ತಿದ್ದಾರೆ. ಯಾವ ಸಿನಿಮಾ ಮಾಡ್ತಿದ್ದಾರೆ, ಯಾವ ಸ್ಟಾರ್ ನಟನ ಜೊತೆ ಮುಂದಿನ ಸಿನಿಮಾ.. ಅಂತ ಸಾಲು ಸಾಲು ಪ್ರಶ್ನೆಗಳನ್ನ ಅವರು ಅಭಿಮಾನಿಗಳು ಕೇಳುತ್ತಿದ್ದಾರೆ. ಒಂದು ರೀತಿಯಲ್ಲಿ ಮಿಂಚಿ ಮರೆಯಾದರ ನಟಿ ಶ್ರೀನಿಧಿ ಶೆಟ್ಟಿ ಅನ್ನೋ ಪ್ರಶ್ನೆ ಕೂಡ ಕಾಡತೊಡಗಿದೆ. 

Written by - YASHODHA POOJARI | Edited by - Krishna N K | Last Updated : Mar 25, 2023, 03:27 PM IST
  • ನಟಿ ಶ್ರೀನಿಧಿ ಶೆಟ್ಟಿ ಸುದ್ದಿನೇ ಇಲ್ಲ, ಯಾಕೆ..? ಅಂತ ಫ್ಯಾನ್ಸ್ ಕೇಳುತ್ತಿದ್ದಾರೆ.
  • ಯಾವ ಸ್ಟಾರ್ ನಟನ ಜೊತೆ ಮುಂದಿನ ಸಿನಿಮಾ ಮಾಡ್ತಾರೆ..
  • ಅಂತ ಸಾಲು ಸಾಲು ಪ್ರಶ್ನೆಗಳನ್ನ ಶ್ರೀನಿಧಿ ಅಭಿಮಾನಿಗಳು ಕೇಳುತ್ತಿದ್ದಾರೆ.
ಎಲ್ಲಿಗೆ ಹೋದ್ರು KGF ಸುಂದರಿ ನಟಿ ಶ್ರೀನಿಧಿ ಶೆಟ್ಟಿ...! ಪ್ಯಾನ್ಸ್‌ ಹುಡುಕಾಟ title=

Srinidhi Shetty : KGF 1 ಮತ್ತು KGF ಪಾರ್ಟ್ 2 ಮೂಲಕ ಮಿಂಚಿದ ನಟಿ ಶ್ರೀನಿಧಿ ಶೆಟ್ಟಿ ಸುದ್ದಿನೇ ಇಲ್ಲ, ಯಾಕೆ..? ಅಂತ ಫ್ಯಾನ್ಸ್ ಕೇಳುತ್ತಿದ್ದಾರೆ. ಯಾವ ಸಿನಿಮಾ ಮಾಡ್ತಿದ್ದಾರೆ, ಯಾವ ಸ್ಟಾರ್ ನಟನ ಜೊತೆ ಮುಂದಿನ ಸಿನಿಮಾ.. ಅಂತ ಸಾಲು ಸಾಲು ಪ್ರಶ್ನೆಗಳನ್ನ ಅವರು ಅಭಿಮಾನಿಗಳು ಕೇಳುತ್ತಿದ್ದಾರೆ. ಮಾಡಿರೋ ಎರಡು ಸಿನಿಮಾಗೆ ತುಂಬಾ ಸಂಭಾವನೆ ಕೇಳುತ್ತಾರೆ ಅನ್ನೋ ಆರೋಪ ಶ್ರೀನಿಧಿ ಶೆಟ್ಟಿ ಮೇಲೆ ಇತ್ತು. 

ತೆಲುಗಿನಲ್ಲಿ, ತಮಿಳಿನಲ್ಲಿ ಸಿನಿಮಾ ಮಾಡುತ್ತಾರೆ ಅಂತ ಹೇಳಲಾಗುತ್ತಿತ್ತು. ಆದ್ರೆ ಯಾವ ಮ್ಯಾಟರ್ ಕೂಡ ಈಗ ಕೇಳುತ್ತಿಲ್ಲ ಯಾಕೆ ಅನ್ನೋ ಪ್ರಶ್ನೆಯನ್ನ ಸಾಮಾನ್ಯವಾಗಿ ಸಿನಿಮಾ ಪ್ರಿಯರು ಕೇಳುತ್ತಿದ್ದಾರೆ. ಒಂದು ರೀತಿಯಲ್ಲಿ ಮಿಂಚಿ ಮರೆಯಾದರ ನಟಿ ಶ್ರೀನಿಧಿ ಶೆಟ್ಟಿ ಅನ್ನೋ ಪ್ರಶ್ನೆ ಕೂಡ ಕಾಡತೊಡಗಿದೆ. ಕೊನೆಯದಾಗಿ ಶ್ರೀನಿಧಿ ಕಾಲಿವುಡ್‌ ನಟ ವಿಕ್ರಮ್‌ ಅಭಿನಯದ ʼಕೋಬ್ರಾʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಬಿಟ್ಟರೆ ಇದೂ ವರೆಗೆ ತಮ್ಮ ಮುಂದಿನ ಪ್ರಾಜೆಕ್ಸ್‌ ಬಗ್ಗೆ ಎಲ್ಲೂ ಹೇಳಿಕೆ ನೀಡಿಲ್ಲ. ಇದರಿಂದ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಇದನ್ನೂ ಓದಿ: Tanisha Kuppanda : ಲಿಪ್‌ಲಾಕ್‌, ಬ್ಯಾಕ್‌ಲೆಸ್‌ 'ಪೆಂಟಗನ್' ಸ್ಕ್ಯಾಮ್‌ ಬಗ್ಗೆ ಬಾಯ್ಬಿಟ್ಟ ನಟಿ ತಾನಿಷಾ..!

ಮೂಲತಃ ಮಂಗಳೂರಿನ  ಶ್ರೀನಿಧಿ ಶೆಟ್ಟಿ ಕನ್ನಡ ಚಿತ್ರರಂಗದ ನಟಿ ಮತ್ತು ರೂಪದರ್ಶಿ. ಬೆಂಗಳೂರಿನ ಜೈನ ವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಇವರು 2016 ರಲ್ಲಿ ಜರುಗಿದ ಮಿಸ್ ದಿವಾ ಸ್ಪರ್ಧೆಯ ವಿಜೇತೆ. ಕೆಲಕಾಲ ಬೆಂಗಳೂರಿನ ಖ್ಯಾತ ಸಾಫ್ಟವೇರ್ ಕಂಪನಿ `ಆಕ್ಸೆಂಚರ್' ನ ಉದ್ಯೋಗಿಯಾಗಿದ್ದರು. ಈ ಸಮಯದಲ್ಲಿ ಹಲವಾರು ಡಿಸೈನರ್‌ಗಳ ಜೊತೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ.

ಹಲವಾರು ಸೌಂದರ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿರುವ ಇವರು ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆಯ ವಿಜೇತೆ. ದುಬೈ, ಪ್ರಾನ್ಸ್, ಜಪಾನ್, ಸಿಂಗಾಪುರ್, ಥೈಲಾಂಡ್, ಪೊಲ್ಯಾಂಡ್ ದೇಶಗಳ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News