ಕನ್ನಡ ಸಿನಿಮಾ ಹವಾ: ರಿಲೀಸ್‌ಗೂ ಮೊದಲೇ 500 ಕೋಟಿ ವಸೂಲಿ ಮಾಡಿದ 'ಕೆಜಿಎಫ್‌-2'..!

KGF Chapter 2 : ಒಂದು ಕಡೆ ಹತ್ತಾರು ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್‌ ಮಾಡಲು 'ಕೆಜಿಎಫ್‌' ಟೀಂ ತಯಾರಿ ನಡೆಸಿರುವ ಸಂದರ್ಭದಲ್ಲೇ, ರಿಲೀಸ್‌ಗೂ ಮುನ್ನ 500 ಕೋಟಿ ರೂಪಾಯಿಯನ್ನ 'ಕೆಜಿಎಫ್‌' ಚಾಪ್ಟರ್‌ 2 ಗಳಿಸಿದೆ ಎನ್ನಲಾಗಿದೆ. ಇದು ಕೂಡ ಸಂಚಲನ ಸೃಷ್ಟಿ ಮಾಡಿದೆ.

Written by - Malathesha M | Edited by - Yashaswini V | Last Updated : Apr 6, 2022, 10:55 AM IST
  • ಏಪ್ರಿಲ್‌ 14ಕ್ಕೆ 'ಕೆಜಿಎಫ್‌' ಚಾಪ್ಟರ್‌ 2 ಗ್ಯ್ರಾಂಡ್‌ ಎಂಟ್ರಿ ಕೊಡಲಿದೆ

    ಹತ್ತಿರ ಹತ್ತಿರ ಹತ್ತು ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್‌ ಮಾಡಲು 'ಕೆಜಿಎಫ್‌' ಚಿತ್ರತಂಡ ಪ್ಲ್ಯಾನ್‌ ಮಾಡಿದೆ

    ಹಿಂದಿನ ಎಲ್ಲಾ ದಾಖಲೆಗಳು 'ಕೆಜಿಎಫ್‌-2' ಎದುರು ಉಡೀಸ್‌
ಕನ್ನಡ ಸಿನಿಮಾ ಹವಾ: ರಿಲೀಸ್‌ಗೂ ಮೊದಲೇ 500 ಕೋಟಿ ವಸೂಲಿ ಮಾಡಿದ 'ಕೆಜಿಎಫ್‌-2'..! title=
KGF Chapter 2 Records

KGF chapter 2: ಎಲ್ಲೆಲ್ಲೂ  'ಕೆಜಿಎಫ್‌' ಹವಾ ಜೋರಾಗಿದೆ. ಏಪ್ರಿಲ್‌ 14ಕ್ಕೆ  'ಕೆಜಿಎಫ್‌' ಚಾಪ್ಟರ್‌ 2 ಗ್ಯ್ರಾಂಡ್‌ ಎಂಟ್ರಿ ಕೊಡಲಿದೆ. ಹತ್ತಿರ ಹತ್ತಿರ ಹತ್ತು ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್‌ ಮಾಡಲು 'ಕೆಜಿಎಫ್‌' ಚಿತ್ರತಂಡ ಪ್ಲ್ಯಾನ್‌ ಮಾಡಿದೆ. 'ಕೆಜಿಎಫ್‌' ಚಾಪ್ಟರ್‌ 2 ಬ್ಲಾಕ್‌ ಬಸ್ಟರ್ ಹಿಟ್‌ ಆಗೋದು ಪಕ್ಕಾ. ‌ಇದಕ್ಕಿಂತ ಹೆಚ್ಚಾಗಿ ಹಿಂದಿನ ಎಲ್ಲಾ ದಾಖಲೆಗಳು 'ಕೆಜಿಎಫ್‌-2' ಎದುರು ಉಡೀಸ್‌ ಆಗಲಿದೆ. ಕನ್ನಡಿಗರು ಮಾತ್ರವಲ್ಲ, ಇಡೀ ಜಗತ್ತಿನ ಸಿನಿ ಪ್ರೇಮಿಗಳು ಉಸಿರುವ ಬಿಗಿ ಹಿಡಿದು, 'ಕೆಜಿಎಫ್‌-2' ರಿಲೀಸ್‌ಗೆ ಕಾಯುತ್ತಿದ್ದಾರೆ.

ಒಂದು ಕಡೆ ಹತ್ತಾರು ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್‌ ಮಾಡಲು 'ಕೆಜಿಎಫ್‌' ಟೀಂ ತಯಾರಿ ನಡೆಸಿರುವ ಸಂದರ್ಭದಲ್ಲೇ, ರಿಲೀಸ್‌ಗೂ ಮುನ್ನ 500 ಕೋಟಿ ರೂಪಾಯಿಯನ್ನು 'ಕೆಜಿಎಫ್‌' ಚಾಪ್ಟರ್‌ 2 (KGF Chapter 2)  ಗಳಿಸಿದೆ ಎನ್ನಲಾಗಿದೆ. ಇದು ಕೂಡ ಸಂಚಲನ ಸೃಷ್ಟಿ ಮಾಡಿದೆ.

ಇದನ್ನೂ ಓದಿ- ಎಲ್ಲೆಲ್ಲೂ 'ಕೆಜಿಎಫ್‌-2' ಹವಾ: ಮೊದಲ ಬಾರಿಗೆ ಗ್ರೀಸ್‌ನಲ್ಲಿ ದಕ್ಷಿಣ ಭಾರತದ ಸಿನಿಮಾ ರಿಲೀಸ್‌..!

ಕನ್ನಡ ಸಿನಿಮಾ ಹವಾ:
ಭಾರತೀಯ ಸಿನಿಮಾ (Indian Cinema) ಒಂದು ರಿಲೀಸ್‌ ಆಗೋದಕ್ಕೂ ಮೊದಲು ಇಷ್ಟೊಂದು ದೊಡ್ಡ ಮಟ್ಟದ ಹಣವನ್ನ ಗಳಿಸಿರೋದು ಇದುವರೆಗಿನ ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಸಿನಿಮಾ ಹೊಸ ಹೊಸ ದಾಖಲೆಗಳನ್ನು ನಿರ್ಮಿಸುವ ಜೊತೆಗೆ ಬಾಕ್ಸ್‌ ಆಫಿಸ್‌ ಕೂಡ ಉಡೀಸ್‌ ಆಗುತ್ತಿದೆ. ಹಿಂದೆ ಎಂದೂ ಕಾಣದ ದಾಖಲೆಗಳನ್ನ ಕನ್ನಡ ಸಿನಿಮಾ  'ಕೆಜಿಎಫ್‌' ಮಾಡಿ ತೋರಿಸುತ್ತಿದೆ.

ಇದನ್ನೂ ಓದಿ- KGF 2: ತೂಫಾನ್ ಬಳಿಕ ರಿಲೀಸ್‌ ಆಗ್ತಿದೆ ಮತ್ತೊಂದು ಲಿರಿಕಲ್‌ ಸಾಂಗ್‌! ಇದು ಎಲ್ಲಾ ಅಮ್ಮಂದಿರ ಧ್ವನಿ ಎಂದ ಕೆಜಿಎಫ್‌2 ತಂಡ!

ಒಟ್ಟಾರೆ ಹೇಳೋದಾದ್ರೆ 'ಕೆಜಿಎಫ್‌' ಚಾಪ್ಟರ್‌ 2 ಕನ್ನಡ ಚಿತ್ರರಂಗವನ್ನ ಜಾಗತಿಕ ಮಟ್ಟದಲ್ಲಿ ಮಿನುಗುವಂತೆ ಮಾಡುತ್ತಿದೆ. ಯಶ್‌ ಅಭಿಮಾನಿಗಳು ಹಾಗೂ 'ಕೆಜಿಎಫ್‌' ಫ್ಯಾನ್ಸ್‌ 'ಕೆಜಿಎಫ್‌' ಚಾಪ್ಟರ್‌ 2 ರಿಲೀಸ್‌ಗಾಗಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದು, ಏಪ್ರಿಲ್‌ 14ರಂದು ಜಗತ್ತಿನಾದ್ಯಂತ ಅದರಲ್ಲೂ ಕರುನಾಡಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗೋದು ಪಕ್ಕಾ. ಇದಕ್ಕಾಗಿ ಈಗಾಗಲೇ ಸಂಭ್ರಮದ ತಯಾರಿಯನ್ನ ಯಶ್‌ ಫ್ಯಾನ್ಸ್ ಮಾಡಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News