ಕೆಜಿಎಫ್ 2 ಸಿನಿಮಾ ನೋಡುತ್ತಲೇ ಅಭಿಮಾನಿ ಸಾವು..!

Written by - Zee Kannada News Desk | Last Updated : May 10, 2022, 06:19 PM IST
  • ಈಗ ಇಡೀ ಜಗತ್ತು ಕೆಜಿಎಫ್ 2 ಚಿತ್ರವನ್ನು ನೋಡಿ ಸಂಭ್ರಮಿಸುತ್ತಿರುವಾಗ ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.
  • ಮೇ 9 ರಂದು ಎಲೂರಿನ ಥಿಯೇಟರ್‌ನಲ್ಲಿ ನಟ ಯಶ್ ಅವರ ಚಿತ್ರ ವೀಕ್ಷಿಸಲು ಬಂದಿದ್ದ ಅಭಿಮಾನಿಯೊಬ್ಬನು ಚಿತ್ರವನ್ನು ನೋಡುತ್ತಲೇ ಸಾವನ್ನಪ್ಪಿದ್ದಾನೆ.
 ಕೆಜಿಎಫ್ 2 ಸಿನಿಮಾ ನೋಡುತ್ತಲೇ ಅಭಿಮಾನಿ ಸಾವು..!  title=
file photo

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ, ಶೀಘ್ರದಲ್ಲೇ ಅದು 1200 ಕೋಟಿ ತಲುಪುವ ಸಾಧ್ಯತೆ ಇದೆ. ಚಿತ್ರದ ಕ್ರೇಜ್ ಯಾವ ರೀತಿ ಇದೆ ರಾಕಿ ಭಾಯ್ ಪಾತ್ರದ ಬಗ್ಗೆ ವಿಶ್ವದಾದ್ಯಂತ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಅವರನ್ನು ಅನುಕರಿಸುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರವನ್ನು ಆನಂದಿಸುತ್ತಿದ್ದಾರೆ. ಇನ್ನೊಂದೆಡೆಗೆ ಬಾಹುಬಲಿ 2 ನಂತರ ದೇಶಿಯ ಬಾಕ್ಸ್ ಆಫೀಸ್ ನಲ್ಲಿ ಎರಡನೇ ಆಲ್ ಟೈಮ್ ಹಿಟ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮಹರ್ಷಿ ಶ್ರೀ ಅರವಿಂದರ ತತ್ವಬೋಧನೆ

ಈಗ ಇಡೀ ಜಗತ್ತು ಕೆಜಿಎಫ್ 2 ಚಿತ್ರವನ್ನು ನೋಡಿ ಸಂಭ್ರಮಿಸುತ್ತಿರುವಾಗ ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.ಮೇ 9 ರಂದು ಎಲೂರಿನ ಥಿಯೇಟರ್‌ನಲ್ಲಿ ನಟ ಯಶ್ ಅವರ ಚಿತ್ರ ವೀಕ್ಷಿಸಲು ಬಂದಿದ್ದ ಅಭಿಮಾನಿಯೊಬ್ಬನು ಚಿತ್ರವನ್ನು ನೋಡುತ್ತಲೇ ಸಾವನ್ನಪ್ಪಿದ್ದಾನೆ.ಈ ಸುದ್ದಿಯನ್ನು ತಿಳಿದ ಪೊಲೀಸರು ಕೂಡಲೇ ಚಿತ್ರಮಂದಿರಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಏಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.ಸದ್ಯ ತನಿಖೆ ನಡೆಯುತ್ತಿರುವುದರಿಂದ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!

ಏತನ್ಮಧ್ಯೆ, ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತು ಪ್ರಕಾಶ್ ರಾಜ್ ನಟಿಸಿರುವ ಕೆಜಿಎಫ್ 2 ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಇಂದಿಗೂ ಕೂಡ ಹಿಂದಿ ಚಿತ್ರಗಳ ಪ್ರಭಾವದ ನಡುವೆಯೂ ಇನ್ನೂ ಅಬ್ಬರಿಸುತ್ತಿದೆ.ಈಗಾಗಲೇ ಹಿಂದಿಯಲ್ಲಿ ಈ ಚಿತ್ರವು 415.30 ಕೋಟಿ ರೂ.ಗಳನ್ನು ಗಳಿಸಿದ್ದು, ಈ ವಾರದ ಅಂತ್ಯಕ್ಕೆ 420 ಕೋಟಿ ರೂ,ತಲುಪಲಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News