ಕೀಳರಿಮೆ ಮನೋಭಾವದಿಂದ ರಾಕಿಂಗ್ ಸ್ಟಾರ್ ಯಶ್ ಹೊರಬಂದಿದ್ದು ಹೇಗೆ ಗೊತ್ತಾ?

 ಬಸ್ ಡ್ರೈವರ್ ರೊಬ್ಬನ ಮಗನಾಗಿ ಸಾಮಾನ್ಯ ಕುಟುಂಬದಿಂದ ಬಂದಂತಹ ಯಶ್ ಈಗ ದೇಶಾದ್ಯಂತ ರಾಕಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.ಆದರೆ ಅವರ ಸಿನಿ ಜರ್ನಿ ಮಾತ್ರ ಅಷ್ಟು ಸಲಿಸಾಗಿರಲಿಲ್ಲ, ಆರಂಭದಲ್ಲಿ ರಂಗಭೂಮಿಯಲ್ಲಿ ಬ್ಯಾಕ್ ಗ್ರೌಂಡ್ ಕೆಲಸ ಮಾಡುತ್ತಲೇ ಕಿರುತೆರೆಗೆ ಪ್ರವೇಶಿಸಿ ಮುಂದೆ ಬೆಳ್ಳಿ ತೆರೆಯಲ್ಲಿಯೂ ಕೂಡ ಸೈ ಎನಿಸಿಕೊಂಡವರು.

Written by - Zee Kannada News Desk | Last Updated : May 21, 2022, 06:00 PM IST
  • ಕಲೆಯನ್ನು ಅನ್ವೇಷಿಸಿ ಕಲಿಯಿರಿ, ಯಾರಾದರೂ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದರೆ ಅದರ ಬಗ್ಗೆ ತಿಳಿದುಕೊಳ್ಳಿ ಎಂದರು.
ಕೀಳರಿಮೆ ಮನೋಭಾವದಿಂದ ರಾಕಿಂಗ್ ಸ್ಟಾರ್ ಯಶ್ ಹೊರಬಂದಿದ್ದು ಹೇಗೆ ಗೊತ್ತಾ?  title=

ಬೆಂಗಳೂರು:  ಬಸ್ ಡ್ರೈವರ್ ರೊಬ್ಬನ ಮಗನಾಗಿ ಸಾಮಾನ್ಯ ಕುಟುಂಬದಿಂದ ಬಂದಂತಹ ಯಶ್ ಈಗ ದೇಶಾದ್ಯಂತ ರಾಕಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.ಆದರೆ ಅವರ ಸಿನಿ ಜರ್ನಿ ಮಾತ್ರ ಅಷ್ಟು ಸಲಿಸಾಗಿರಲಿಲ್ಲ, ಆರಂಭದಲ್ಲಿ ರಂಗಭೂಮಿಯಲ್ಲಿ ಬ್ಯಾಕ್ ಗ್ರೌಂಡ್ ಕೆಲಸ ಮಾಡುತ್ತಲೇ ಕಿರುತೆರೆಗೆ ಪ್ರವೇಶಿಸಿ ಮುಂದೆ ಬೆಳ್ಳಿ ತೆರೆಯಲ್ಲಿಯೂ ಕೂಡ ಸೈ ಎನಿಸಿಕೊಂಡವರು.

ಈಗ ಕೆಜಿಎಫ್ ಚಿತ್ರದ ಮೂಲಕ ಅವರೊಬ್ಬ ದೇಶದ ಬಹುಬೇಡಿಕೆ ನಟರಾಗಿ ಹೊರಹೊಮ್ಮುವುದಷ್ಟೇ ಅಲ್ಲದೆ ಕನ್ನಡ ಸಿನಿಮಾದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.ಅವರು ತಮ್ಮ ನಡೆದು ಬಂದ ಹಾದಿಯ ಕುರಿತಾಗಿ ದಿ ವೀಕ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.ತಮ್ಮ ಬದ್ದತೆ ಮತ್ತು ಕಠಿಣ ಪರಿಶ್ರಮದಿಂದ ಈ ಹಂತವನ್ನು ಏರಿರುವುದಾಗಿ ಹೇಳುತ್ತಾರೆ.

ಇದನ್ನೂ ಓದಿ: Kangana Ranaut : ಐಷಾರಾಮಿ ಕಾರು ಖರೀದಿಸಿದ ನಟಿ ಕಂಗನಾ, ಇದರ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ!

ಅಷ್ಟೇ ಅಲ್ಲದೆ ಆರಂಭದಲ್ಲಿ ತಮಗಿದ್ದ ಕೀಳಿರಿಮೆಯ ಮನೋಭಾವದಿಂದ ತಾವು ಹೊರ ಬಂದಿದ್ದು ಹೇಗೆ ಎನ್ನುವ ಸಂಗತಿಯನ್ನು ಕೂಡ ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. "ನನ್ನ ದೊಡ್ಡ ಸಾಧನೆಯೆಂದರೆ ಸ್ಟಾರ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಗಳಿಸಿರುವುದಲ್ಲ, ಬದಲಾಗಿ ನಮ್ಮೊಳಗೆ ಇರಬಹುದಾದ ಯುದ್ಧವೊಂದಿದೆ. ಜನರು ನಿಮ್ಮನ್ನು ಸಣ್ಣ ಪಟ್ಟಣದ ಹುಡುಗ ಎಂದೋ ಅಥವಾ ಇಂಗ್ಲಿಶ್ ಚೆನ್ನಾಗಿ ಬರಲ್ಲ ಎಂದೋ ಅಥವಾ ನೀವು ಧರಿಸುವ ಬಟ್ಟೆ ಸರಿಯಿಲ್ಲ ಎನ್ನುವುದು ಹೀಗೆ, ಆದರೆ ಇದೆಲ್ಲವನ್ನು ಕಲಿಯಬಹುದು ಎಂದು ನಾನು ಬಯಸುತ್ತೇನೆ.ಆತ್ಮವಿಶ್ವಾಸವಿದ್ದರೆ ಎಲ್ಲವೂ ಸರಿಹೋಗುತ್ತದೆ ಮತ್ತು ನನ್ನ ಅರ್ಥ ಬರೀ ಆತ್ಮವಿಶ್ವಾಸ ಎಂದಲ್ಲ, ಜ್ಞಾನವು ಭಯವನ್ನು ಹೋಗಲಾಡಿಸುತ್ತದೆ' ಎಂದು ಯಶ್ ಹೇಳುತ್ತಾರೆ.

ಇದನ್ನೂ ಓದಿ : IPL 2022: ಅಮೋಘ ಪ್ರದರ್ಶನ ನೀಡುತ್ತಿರುವ ಫಾಸ್ಟ್ ಬೌಲರ್ .! ಜಹೀರ್ ಖಾನ್ ಗೆ ಹೋಲಿಸುತ್ತಿರುವ ಫ್ಯಾನ್ಸ್

ಕಲೆಯನ್ನು ಅನ್ವೇಷಿಸಿ ಕಲಿಯಿರಿ, ಯಾರಾದರೂ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದರೆ ಅದರ ಬಗ್ಗೆ ತಿಳಿದುಕೊಳ್ಳಿ ಎಂದರು.ಆಗ ನೀವು ಸಿನಿಮಾವನ್ನು ಅರ್ಥ ಮಾಡಿಕೊಳ್ಳುತ್ತೀರಿ ಆಗ ನೀವು ಭಯಪಡಬೇಕಾಗಿಲ್ಲ, ನಿಮಗೆ ಗೊತ್ತಿಲ್ಲದಿದ್ದಾಗ ನೀವು ಭಯಪಡುತ್ತೀರಿ, ಒಬ್ಬರು ಪರೀಕ್ಷೆಗೆ ತಯಾರಾದಾಗ ಹೆದರುವುದಿಲ್ಲ, ನಿಮಗೆ ಎಷ್ಟು ಬೇಕು ಎನ್ನುವುದಕ್ಕೆ ಮುಂಚಿತವಾಗಿ ಅದಕ್ಕೆ ನೀವು ಎಷ್ಟು ಶ್ರಮ ಹಾಕುತ್ತಿರಿ ಎನ್ನುವುದು ಮುಖ್ಯವಾಗುತ್ತದೆ, ನೀವು ಜಗತ್ತನ್ನು ಕೇಳಬಾರದು, ಬದಲಿಗೆ ನಿಮ್ಮನ್ನು ನಂಬಬೇಕು, ಯಾರಾದರೂ ನಿಮಗೆ ಏನನ್ನಾದರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೆ, ನೀವು ಅದನ್ನು ಇನ್ನೂ ಮಾಡಬಹುದು, ಮತ್ತು ನಿಮ್ಮಲ್ಲಿ ಅಂತಹ ಅನನ್ಯತೆ ಇದ್ದರೆ, ನೀವು ಯಾರಿಗೂ ಭಯಪಡುವ ಅಗತ್ಯವಿಲ್ಲ" ಎಂದು ಅವರು ಹೇಳುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News