ಹಿಂದಿಯಲ್ಲಿ ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 2ನೇ ಟ್ರೇಲರ್...!

ಎಕ್ಸೆಲ್​ ಮೂವೀಸ್​​ ಯೂಟ್ಯೂಬ್​ ಚಾನೆಲ್​ನಿಂದ ಟ್ರೈಲರ್​​ ರಿಲೀಸ್​ ಆಗಿದೆ. ಮೊದಲ ಟ್ರೇಲರ್​ನಷ್ಟೇ ಇದು ಕೂಡ​ ಸಖತ್​ ಮಾಸ್​ ಆಗಿದೆ.

Updated: Dec 5, 2018 , 04:31 PM IST
ಹಿಂದಿಯಲ್ಲಿ ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 2ನೇ ಟ್ರೇಲರ್...!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯ ಎರಡನೇ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. 

ಹಿಂದಿ ಅವತರಣಿಕೆಯ ಕೆಜಿಎಫ್ ಚಿತ್ರದ ಎರಡನೇ ಟ್ರೇಲರ್ ನಲ್ಲಿ ಯಶ್ ಎಂಟ್ರಿ ಜಬರ್ದಸ್ತ್ ಆಗಿದ್ದು, ಅವರ ಮಾಸ್ ಡೈಲಾಗ್ ಸಖತ್ ಫೇಮಸ್ ಆಗ್ತಿದೆ. "ಈ ಗ್ಯಾಂಗ್ ಲೇಕರ್ ಆನೆವಾಲೇ ಹೋಥೆ ಹೇ ಗ್ಯಾಂಗ್‌ಸ್ಟರ್, ಓ ಅಕೇಲೇ ಆಥಾ ಥಾ.! ಮಾನ್ಸ್‌ಟರ್‌ .." ಅನ್ನೋ ಡೈಲಾಗ್ ಎಲ್ಲರ ಬಾಯಲ್ಲಿ ಕೇಳಿಬರುತ್ತಿದೆ. ಹೀಗಾಗಿ ಈಗ ರಾಕಿಂಗ್ ಸ್ಟಾರ್ ಯಶ್ ಗ್ಯಾಂಗ್‌ಸ್ಟರ್ ಅಲ್ಲ ಮಾನ್ಸ್‌ಟರ್‌ ಆಗಿ ಎಲ್ಲೆಡೆ ತಮ್ಮ ಹವಾ ಬೀಸುತ್ತಿದ್ದಾರೆ.

ಎಕ್ಸೆಲ್​ ಮೂವೀಸ್​​ ಯೂಟ್ಯೂಬ್​ ಚಾನೆಲ್​ನಿಂದ ಟ್ರೈಲರ್​​ ರಿಲೀಸ್​ ಆಗಿದೆ. ಮೊದಲ ಟ್ರೇಲರ್​ನಷ್ಟೇ ಇದು ಕೂಡ​ ಸಖತ್​ ಮಾಸ್​ ಆಗಿದೆ. ಟ್ರೇಲರ್​ ಉದ್ದಕ್ಕೂ ಗುಂಡಿನ ಸದ್ದಿನ ಹವಾ ಜೋರಾಗಿದೆ. ಕಳೆದ ಟ್ರೈಲರ್​​ಗೆ ಅನಂತ್​ನಾಗ್​ ಅವರ ನಿರೂಪಣೆ ಇತ್ತು. ಆದರೆ ಅವರು ಕಾಣಿಸಿಕೊಂಡಿರಲಿಲ್ಲ. ಆದರೆ ಎರಡನೇ ಟ್ರೈಲರ್ ನಲ್ಲಿ ಅನಂತ್ ನಾಗ್ ಅವರ ದರ್ಶನದೊಂದಿಗೆ ಡೈಲಾಗ್ ಗಳೂ ಕೇಳಿಬಂದಿವೆ. 

ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲದೆ, ಭಾರತೀಯ ಚಿತ್ರರಂಗದಲ್ಲಿ ಬಹಳ ನಿರೀಕ್ಷೆ ಮೂಡಿಸಿರುವ ಚಿತ್ರವಾದ ಕೆಜಿಎಫ್, ತನ್ನ ಮೊದಲ ಟ್ರೇಲರ್ ರಿಲೀಸ್ ಆದಾಗಲೇ ನಂ.1 ಪಟ್ಟಕ್ಕೇರಿತ್ತು. ಇನ್ನು, ಕನ್ನಡ, ತಮಿಳು, telugu ಭಾಷೆಗಳಲ್ಲಿ ರಿಲೀಸ್ ಆಗಲಿರುವ 2ನೇ ಟ್ರೇಲರ್ ಗೆ ಜನ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಹಾಗೇ ಈ ಚಿತ್ರ ಇದೇ ಡಿಸೆಂಬರ್ 21ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.