close

News WrapGet Handpicked Stories from our editors directly to your mailbox

ಕಾಫಿ, ಟಿ ಕುಡಿದಿದ್ದಕ್ಕೆ 78,650 ರೂ. ಬಿಲ್ ನೀಡಿದ ಕಿರುತೆರೆ ನಟ....ಆದರೆ ಸ್ವಲ್ಪ ಟ್ವಿಸ್ಟ್..!

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟರು ಪಂಚತಾರಾ ಹೋಟೆಲ್‌ಗಳಲ್ಲಿ ಅನೇಕ ಆಹಾರ ಪದಾರ್ಥಗಳನ್ನು ಅಧಿಕವಾಗಿ ಚಾರ್ಜ್ ಮಾಡಿದ್ದಕ್ಕಾಗಿ ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಬಾಲಿವುಡ್ ನಟ ರಾಹುಲ್ ಬೋಸ್ ಎರಡು ಬಾಳೆಹಣ್ಣಿನ ಬಿಲ್ ಬಗ್ಗೆ ದೂರು ನೀಡಿರುವುದು.

Updated: Sep 5, 2019 , 04:33 PM IST
ಕಾಫಿ, ಟಿ ಕುಡಿದಿದ್ದಕ್ಕೆ 78,650 ರೂ. ಬಿಲ್ ನೀಡಿದ ಕಿರುತೆರೆ ನಟ....ಆದರೆ ಸ್ವಲ್ಪ ಟ್ವಿಸ್ಟ್..!
Photo courtesy: PTI

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟರು ಪಂಚತಾರಾ ಹೋಟೆಲ್‌ಗಳಲ್ಲಿ ಅನೇಕ ಆಹಾರ ಪದಾರ್ಥಗಳನ್ನು ಅಧಿಕವಾಗಿ ಚಾರ್ಜ್ ಮಾಡಿದ್ದಕ್ಕಾಗಿ ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಬಾಲಿವುಡ್ ನಟ ರಾಹುಲ್ ಬೋಸ್ ಎರಡು ಬಾಳೆಹಣ್ಣಿನ ಬಿಲ್ ಬಗ್ಗೆ ದೂರು ನೀಡಿರುವುದು.

ಈಗ ಅಂತಹದ್ದೇ ಒಂದು ಘಟನೆ ಈಗ ಮತ್ತೊಮ್ಮೆ ನಡೆದಿದೆ. ಆದರೆ ಈ ಘಟನೆಗೆ ಸ್ವಲ್ಪ ಟ್ವಿಸ್ಟ್ ಇದೆ ಎನ್ನಬಹುದು. ಹೌದು, ಕಿರುತೆರೆಯ ಹಾಸ್ಯ ನಟ ಕಿಕು ಶಾರದಾ ಅವರು ಕಾಫಿ ಮತ್ತು ಚಹಾದ ಬಿಲ್ ನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ನೀಡಿರುವ ಮೊತ್ತವನ್ನು ನೀವು ಕೇಳಿದರೆ ಬೆಚ್ಚಿ ಬಿಳುತ್ತೀರಿ, ಅವರು ಬರಿ ಕಾಫಿ ಮತ್ತು ಟಿ ಗೆ ನೀಡಿರುವ ಬಿಲ್, ಬರೋಬ್ಬರಿ 78,650 ರೂಪಾಯಿ. ಆದಾಗ್ಯೂ ಅವರು ಈ ಬಗ್ಗೆ ದೂರು ನೀಡಿಲ್ಲವೆಂದರೆ ನಿಮಗೆ ಅಚ್ಚರಿ ಅಲ್ಲವೇ? ಅದಕ್ಕೆ ಕಿಕು ಶಾರದಾ ಅವರೇ ಸ್ಪಷ್ಟನೇ ನೀಡುತ್ತಾರೆ. ಇದನ್ನು ಅವರ ಮಾತಿನಲ್ಲೇ ಕೇಳಿ '

'1 ಕ್ಯಾಪುಸಿನೊ ಮತ್ತು 1 ಚಹಾಕ್ಕಾಗಿ ನನ್ನ ಬಿಲ್ 78,650 /- ಆಗಿದೆ, ಆದರೆ ನಾನು ಇಂಡೋನೇಷ್ಯಾದ ಬಾಲಿಯಲ್ಲಿರುವ ಕಾರಣ ನಾನು ದೂರು ನೀಡುತ್ತಿಲ್ಲ ಮತ್ತು ಅವರ ಕರೆನ್ಸಿಯಲ್ಲಿನ ಈ ಮೊತ್ತವು ಭಾರತೀಯ ರೂಪಾಯಿಯಲ್ಲಿ 400 / -ರೂ.ಗೆ ಪರಿವರ್ತಿಸುತ್ತದೆ ' ಎಂದು ಹೇಳಿದ್ದಾರೆ.