Sandalwood Latest News: ಯಶ್‌, ಸುದೀಪ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ: ಬ್ಯಾಕ್‌ ಟು ಬ್ಯಾಕ್‌ ಪ್ಯಾನ್‌ ಇಂಡಿಯಾ ಸಿನಿಮಾ..!

Latest Movie Update: ಕನ್ನಡ ಸಿನಿಮಾ ರಂಗ (Sandalwood) ಇದೀಗ ಜಾಗತಿಕ ಮಟ್ಟದಲ್ಲಿ (Global Level) ಮತ್ತೆ ವಿಜೃಂಭಿಸುತ್ತಿದೆ. ಈ ಹಿಂದೆ ಹಲವು ಕನ್ನಡ ಸಿನಿಮಾಗಳು ಜಗತ್ತಿನ ಗಮನ ಸೆಳೆದಿದ್ದವು. ಆದರೆ ಕೆಜಿಎಫ್‌ ಬಿಡುಗಡೆ ಬಳಿಕ ಕನ್ನಡ ಸಿನಿಮಾಗಳ ಹವಾ ಜೋರಾಗಿದ್ದು, ಇದೀಗ ಬ್ಯಾಕ್‌ ಟು ಬ್ಯಾಕ್‌ ಸಿಹಿ ಸುದ್ದಿ ಕನ್ನಡ ಸಿನಿಮ ಪ್ರಿಯರಿಗೆ ಸಿಗುತ್ತಿದೆ. 

Written by - Malathesha M | Edited by - Nitin Tabib | Last Updated : Mar 29, 2022, 08:56 PM IST
  • ಕನ್ನಡ ಸಿನಿಮಾ ರಂಗ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೆ ವಿಜೃಂಭಿಸುತ್ತಿದೆ.
  • ಈ ಹಿಂದೆ ಹಲವು ಕನ್ನಡ ಸಿನಿಮಾಗಳು ಜಗತ್ತಿನ ಗಮನ ಸೆಳೆದಿದ್ದವು.
  • ಆದರೆ ಕೆಜಿಎಫ್‌ ಬಿಡುಗಡೆ ಬಳಿಕ ಕನ್ನಡ ಸಿನಿಮಾಗಳ ಹವಾ ಜೋರಾಗಿದ್ದು, ಇದೀಗ ಬ್ಯಾಕ್‌ ಟು ಬ್ಯಾಕ್‌ ಸಿಹಿ ಸುದ್ದಿ ಕನ್ನಡ ಸಿನಿಮ ಪ್ರಿಯರಿಗೆ ಸಿಗುತ್ತಿದೆ.
Sandalwood Latest News: ಯಶ್‌, ಸುದೀಪ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ: ಬ್ಯಾಕ್‌ ಟು ಬ್ಯಾಕ್‌ ಪ್ಯಾನ್‌ ಇಂಡಿಯಾ ಸಿನಿಮಾ..! title=
Back To Back Global Hits

Latest Movie Update: ಕನ್ನಡ ಸಿನಿಮಾ ರಂಗ (Sandalwood) ಇದೀಗ ಜಾಗತಿಕ ಮಟ್ಟದಲ್ಲಿ (Global Level) ಮತ್ತೆ ವಿಜೃಂಭಿಸುತ್ತಿದೆ. ಈ ಹಿಂದೆ ಹಲವು ಕನ್ನಡ ಸಿನಿಮಾಗಳು ಜಗತ್ತಿನ ಗಮನ ಸೆಳೆದಿದ್ದವು. ಆದರೆ ಕೆಜಿಎಫ್‌ ಬಿಡುಗಡೆ ಬಳಿಕ ಕನ್ನಡ ಸಿನಿಮಾಗಳ ಹವಾ ಜೋರಾಗಿದ್ದು, ಇದೀಗ ಬ್ಯಾಕ್‌ ಟು ಬ್ಯಾಕ್‌ ಸಿಹಿ ಸುದ್ದಿ ಕನ್ನಡ ಸಿನಿಮ ಪ್ರಿಯರಿಗೆ ಸಿಗುತ್ತಿದೆ. ಅದರಲ್ಲೂ ಯಶ್‌ (Challenging Star Yash) ಅಭಿನಯದ ಕೆಜಿಎಫ್‌ ಚಾಪ್ಟರ್‌ 2 ಟ್ರೇಲರ್‌ (KGF Chapter 2 Trailer) ಮೂಲಕ ಅಬ್ಬರಿಸುತ್ತಿದ್ದರೆ, ಮತ್ತೊಂದು ಕಡೆ ಸುದೀಪ್‌ (Kiccha Sudeep) ಅಭಿನಯದ ವಿಕ್ರಾಂತ್‌ ರೋಣ (Vikrant Rona) ಕೂಡ ಹಾಲಿವುಡ್‌ (Hollywood) ರೇಂಜ್‌ಗೆ ಸಿದ್ಧವಾಗಿದೆ.

ಕನ್ನಡ ಸಿನಿಮಾಗಳಿಗೆ ಸರಿಯಾಗಿ ಥಿಯೇಟರ್‌ ಸಿಗುತ್ತಿಲ್ಲ, ಕನ್ನಡ ಸಿನಿಮಾ ಓಡುತ್ತಿಲ್ಲ ಅನ್ನೋ ದಿನಗಳು ಮುಗಿದು ಹೋಗಿವೆ. ಯಾಕಂದ್ರೆ ಕನ್ನಡ ಸಿನಿಮಾ ಅಂದ್ರೆ ಒಂದು ಹೆಮ್ಮೆಯಿಂದ ನೋಡುವ ದಿನಗಳು ಇದೀಗ ಎದುರಾಗಿವೆ. ಕನ್ನಡ ಸಿನಿಮಾಗಳಿಗೆ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಯಾಗಿದೆ.

'ಕೆಜಿಎಫ್‌-2' ರೆಕಾರ್ಡ್..! (KGF Chapter II)
ಕೆಜಿಎಫ್‌ ಚಾಪ್ಟರ್‌ 2 ಟ್ರೇಲರ್‌ ಈಗಾಗಲೇ ದೊಡ್ಡ ರೆಕಾರ್ಡ್‌ ಕ್ರಿಯೇಟ್‌ ಮಾಡಿದ್ದು, ಸಿನಿಮಾ ಯಾವಾಗ ರಿಲೀಸ್‌ ಆಗುತ್ತಪ್ಪಾ ಅಂತಾ ಜಗತ್ತಿನಾದ್ಯಂತ ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ. ಏಪ್ರಿಲ್‌ 14ರಂದು ಇಡೀ ಜಗತ್ತು ಕನ್ನಡ ಸಿನಿಮಾ ಕಣ್ತುಂಬಿಕೊಳ್ಳುವುದು ಪಕ್ಕಾ. ಹಾಗೇ ಹಾಲಿವುಡ್‌ ಸ್ಟಾರ್ಸ್‌ ಕೂಡ ಕನ್ನಡ ಸಿನಿಮಾ ಕೆಜಿಎಫ್‌ ಚಾಪ್ಟರ್‌ 2 ರಿಲೀಸ್‌ಗಾಗಿ ಕಾದು ಕುಳಿತಿದಿದ್ದಾರೆ. ಮತ್ತೊಂದು ಕಡೆ ಕನ್ನಡದ ಇನ್ನೊಂದು ಸಿನಿಮಾ ಕೂಡ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. 

ಇದನ್ನೂ ಓದಿ-4 ದಿನದಲ್ಲಿ ₹500 ಕೋಟಿ..! ರಾಜಮೌಳಿ RRR ಹೊಸ ದಾಖಲೆ..!

ಸುದೀಪ್‌ ಸಿನಿಮಾ ಹವಾ..!
ಅಂದಹಾಗೆ ವಿಕ್ರಾಂತ್ ರೋಣ ಸಿನಿಮಾ ರಿಲೀಸ್‌ಗೆ ಹಾಲಿವುಡ್‌ ಮಂದಿ ಕೂಡ ಕಾದು ಕುಳಿತಿದ್ದಾರೆ. ಯಾಕಂದ್ರೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್‌ ಹಾಗೂ ಪೋಸ್ಟರ್‌ಗಳು ಕೂತೂಹಲ ಹೆಚ್ಚಿಸಿವೆ. ಹಾಲಿವುಡ್‌ನಲ್ಲೂ ರಿಲೀಸ್‌ ಆಗಲು ವಿಕ್ರಾಂತ್ ರೋಣ ಸಿದ್ಧವಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ಇಂಗ್ಲಿಷ್‌ ಭಾಷೆಯಲ್ಲೂ ಸಂಪೂರ್ಣವಾಗಿ ರಿಲೀಸ್‌ ಆಗುವ ಮೂಲಕ ದೊಡ್ಡ ರೆಕಾರ್ಡ್‌ ಕ್ರಿಯೇಟ್‌ ಮಾಡಲಿದೆ. ಏಪ್ರಿಲ್ 2ರಂದು ಬೆಳಗ್ಗೆ 9.55ಕ್ಕೆ ವಿಕ್ರಾಂತ್ ರೋಣ ಟೀಂ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್‌ ನೀಡಲು ಸಜ್ಜಾಗಿದೆ.

ಇದನ್ನೂ ಓದಿ-Viral Photo: ಗುಟ್ಟಾಗಿ ವಿವಾಹವಾಗಿದ್ದಾರೆಯೇ Alia Bhatt-Ranabir Kapoor?

ಒಟ್ಟಾರೆ ಹೇಳುವುದಾದರೆ ಇದು ಕನ್ನಡ ಸಿನಿ ರಂಗಕ್ಕೆ ಸುವರ್ಣಾಕ್ಷರದಲ್ಲಿ ಬರೆದಿಡುವ ಸಮಯ. ಕನ್ನಡ ಸಿನಿಮಾಗಳು ಹಾಲಿವುಡ್‌ ಲೆವೆಲ್‌ಗೆ ಬೆಳೆದು ನಿಂತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಜೊತೆಗೆ ಮತ್ತಷ್ಟು ಕನ್ನಡ ಸಿನಿಮಾಗಳು ಹೀಗೆ ದೊಡ್ಡ ದೊಡ್ಡ ರೆಕಾರ್ಡ್‌ ಬರೆಯಲಿ ಎಂಬುದು ಕನ್ನಡಿಗರ ಆಶಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News