Refrigerator Blast: ಇಂತಹ ಜಾಗದಲ್ಲಿ ಫ್ರೀಡ್ಜ್ ಇಟ್ಟರೆ ಅದು ಸ್ಫೋಟಗೊಳ್ಳಬಹುದು, ಎಚ್ಚರ!

Refrigerator Blast: ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಳ್ಳಲು ತಾಂತ್ರಿಕ ಸಮಸ್ಯೆಗಳು ಕಾರಣವಿರಬಹುದು. ಇದರ ಹೊರತಾಗಿ ನಾವು ಅವುಗಳನ್ನು ಬಳಸುವ ರೀತಿಯೂ ಕೂಡ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ. 

Written by - Yashaswini V | Last Updated : Jun 18, 2024, 11:11 AM IST
  • ನೀವು ದೀರ್ಘಕಾಲದವರೆಗೆ ರೆಫ್ರಿಜರೇಟರ್‌ನಲ್ಲಿ ಏನನ್ನೂ ಇಡದಿದ್ದರೆ ಫ್ರಿಡ್ಜ್ ತಾಮಪಾನವನ್ನು ಕಡಿಮೆ ಮಾಡಿ
  • ದೀರ್ಘ ಸಮಯದ ಬಳಿಕ ನೀವು ರೆಫ್ರಿಜರೇಟರ್ ಬಳಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಮೊದಲು ಫ್ರಿಡ್ಜ್ ಆಫ್ ಮಾಡಿ, ಕೆಲ ಸಮಯದ ನಂತರ ಅದನ್ನು ಆನ್ ಮಾಡಿ ಬಳಸಿ.
Refrigerator Blast: ಇಂತಹ ಜಾಗದಲ್ಲಿ ಫ್ರೀಡ್ಜ್ ಇಟ್ಟರೆ ಅದು ಸ್ಫೋಟಗೊಳ್ಳಬಹುದು, ಎಚ್ಚರ! title=

Refrigerator Blast: ಸ್ಮಾರ್ಟ್ಫೋನ್, ಗೀಸರ್ ಗಳಂತೆ ಫ್ರೀಜ್ಡ್/ ರೆಫ್ರಿಜರೇಟರ್ ಸ್ಫೋಟಗೊಳ್ಳುವ ಪ್ರಕರಣಗಳು ಹೊಸತೇನಲ್ಲ. ರೆಫ್ರಿಜರೇಟರ್ ಕಂಪ್ರೆಸರ್ ಸಿಡಿಯಲು ಹಲವು ಕಾರಣಗಳಿರಬಹುದು. ಆದರೆ, ನೀವು ಫ್ರಿಡ್ಜ್ ಅನ್ನು ಬಲಸುವಾಗ ಅದನ್ನು ಸರಿಯಾದ ಸ್ಥಳದಲ್ಲಿ ಇಡದಿದ್ದರೆ ಅದೂ ಕೂಡ ರೆಫ್ರಿಜರೇಟರ್ ಬಾಂಬ್ ನಂತೆ ಸಿಡಿಯಲು (Refrigerator Blast) ಕಾರಣವಾಗಬಹುದು ಎಂದು ನಿಮಗೆ ತಿಳಿದಿದೆಯೇ? 

ರೆಫ್ರಿಜರೇಟರ್ (Refrigerator) ಅನ್ನು ಸರಿಯಾದ ಸ್ಥಳದಲ್ಲಿ ಇಡುವುದು ಎಂದರೆ ಅದನ್ನು ವಾಸ್ತು ಪ್ರಕಾರವಾಗಿ ಇಡುವುದು ಎಂದರ್ಥವಲ್ಲ. ಬದಲಿಗೆ  ಫ್ರಿಡ್ಜ್‌ನ ಸಂಕೋಚಕ ಭಾಗವನ್ನು ಗೋಡೆ ಅಥವಾ ವಾತಾಯನ ವ್ಯವಸ್ಥೆ ಇಲ್ಲದ ದಿಕ್ಕಿನಲ್ಲಿ ಇರಿಸಬಾರದು ಎಂದರ್ಥ. 

ಹೌದು,  ಫ್ರಿಡ್ಜ್  (Fridge) ಅನ್ನು ಸರಿಯಾದ ವಾತಾಯನ ಇಲ್ಲದ ಕರೆ ಇಡುವುದರಿಂದ ಅದರ ಸಂಕೋಚಕವು ಅತಿಯಾಗಿ ಬಿಸಿಯಾಗಿ ಇದು ಪ್ರಬಲ ಸ್ಫೋಟಕ್ಕೆ ಕಾರಣವಾಗಬಹುದು. 

ಇದನ್ನೂ ಓದಿ- Smartphone Blast: ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಇವೇ ಪ್ರಮುಖ ಕಾರಣಗಳು

ರೆಫ್ರಿಜರೇಟರ್ ಸ್ಫೋಟಕ್ಕೆ ಕಾರಣವಾಗುವ ಪ್ರಮುಖ ಅಂಶಗಳೆಂದರೆ:- 
ವಿದ್ಯುತ್ ಏರಿಳಿತವಾಗುವ ಸ್ಥಳ: 

ಹೆಚ್ಚು ವಿದ್ಯುತ್ ಏರಿಳಿತವಾಗುವ ಸ್ಥಳದಲ್ಲಿ ಎಂದಿಗೂ ಫ್ರಿಡ್ಜ್ ಇಡುವ ತಪ್ಪನ್ನು ಮಾಡಬೇಡಿ. ಇದು ಫ್ರಿಡ್ಜ್‌ನ ಸಂಕೋಚಕದ ಮೇಲಿನ ಒತ್ತಡವನ್ನು ಹೆಚ್ಚಿಸುವುದರಿಂದ ಸ್ಫೋಟ ಸಂಭವಿಸಬಹುದು. 

ಆಗಾಗ್ಗೆ ರೆಫ್ರಿಜರೇಟರ್ ತೆಗೆಯದಿರುವುದು: 
ಒಂದೊಮ್ಮೆ ನೀವು ಫ್ರಿಡ್ಜ್‌ನಲ್ಲಿ ಮಂಜುಗಡ್ಡೆಯನ್ನು ಫ್ರೀಜ್ ಮಾಡಲು ಅನುಮತಿಸಿದರೆ ಅಂತಹ ಪರಿಸ್ಥಿತಿಯಲ್ಲಿ ನೀವು ಪ್ರತಿ ಕೆಲವು ಗಂಟೆಗಳಿಗೊಮ್ಮೆ ರೆಫ್ರಿಜರೇಟರ್ ಅನ್ನು ತೆರೆಯುತ್ತಿರಬೇಕು. ಇಲ್ಲದಿದ್ದರೆ, ಇದು ರೆಫ್ರಿಜರೇಟರ್‌ನ ತಾಪಮಾನವನ್ನು ಹೆಚ್ಚಿಸಿ ಸ್ಫೋಟಗೊಳ್ಳಲು ಕಾರಣವಾಗಬಹುದು. 

ಸಂಕೋಚಕದಲ್ಲಿ​ ಸ್ಫೋಟ: 
ರೆಫ್ರಿಜರೇಟರ್‌ನ  ಸಂಕೋಚಕ ಭಾಗದಲ್ಲಿ ಯಾವುದೇ ರೀತಿಯ ದೋಷವಿದ್ದರೆ ಅದನ್ನು ಸರಿಪಡಿಸಲು ನಿಮ್ಮ ಫ್ರಿಡ್ಜ್ ಕಂಪನಿಯ ಸೇವಾ ಕೇಂದ್ರಕ್ಕೆ ಕರೆ ಮಾಡಿ ಇಂಜಿನಿಯರ್ ಗಳನ್ನು ಕರೆಸಿ ಸರಿಪಡಿಸಿ. ನೀವು ಸ್ಥಳೀಯವಾಗಿ ಇದನ್ನು ಸರಿಪಡಿಸಲು ಪ್ರಯತ್ನಿಸಿದರೆ ನಕಲಿ ಭಾಗಗಳನ್ನು ಬಳಸುವುದರಿಂದ ಫ್ರಿಡ್ಜ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ.

ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಬರಲಿವೆ 5 ಹೊಸ ಚಾಟ್ ಥೀಮ್‌ಗಳು!

ತಾಪಮಾನ: 
ನೀವು ನಿರಂತರವಾಗಿ ರೆಫ್ರಿಜರೇಟರ್ ಬಳಸುವಾಗ ಎಂದಿಗೂ ಕೂಡ ಅದರ ತಾಪಮಾನವನ್ನು ಕಡಿಮೆ ಮಟ್ಟದಲ್ಲಿ ಇರಿಸಬಾರದು. ಇದರಿಂದ ರೆಫ್ರಿಜರೇಟರ್ ಸಂಕೋಚಕವು ಅಗತ್ಯಕ್ಕಿಂತ ಹೆಚ್ಚಿನ ಒತ್ತಡವನ್ನು ಹಾಕಬೇಕಾಗುತ್ತದೆ. ಇದು ಸಾಧನವನ್ನು ಓವರ್ ಹೀಟ್ ಮಾಡುತ್ತದೆ. ಇದರಿಂದಾಗಿಯೂ ಫ್ರಿಡ್ಜ್ ಸ್ಫೋಟಗೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News