Lok Sabha Election 2024: ಸುಮಲತಾ ಪರ ನಟ ದರ್ಶನ್ ಪ್ರಚಾರ ಫಿಕ್ಸ್..!

Lok Sabha Election 2024: ಈ ಬಾರಿಯೂ ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣಾ ರಣಕಣವು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಲಿದೆ. ಸುಮಲತಾರ ಪರ ಕಳೆದ ಬಾರಿ ದರ್ಶನ್-ಯಶ್‌ ಜೋಡಿಯಾಗಿ ಪ್ರಚಾರ ನಡೆಸಿದ್ದರು. ಈ ಬಾರಿಯೂ ಜೊಡೆತ್ತುಗಳು ಜೊತೆಯಾಗಿ ಪ್ರಚಾರ ನಡೆಸುತ್ತಾರಾ? ಕಾದು ನೋಡಬೇಕಿದೆ. ​

Written by - Puttaraj K Alur | Last Updated : Mar 10, 2024, 04:27 PM IST
  • ಸುಮಲತಾ ಅಂಬರೀಶ್ ಪರ ಈ ಬಾರಿಯೂ ನಟ ದರ್ಶನ್‌ ಪ್ರಚಾರ
  • ʼಹೆತ್ತ ತಾಯಿಯನ್ನು ಬಿಟ್ಟು ಕೊಡಲು ಆಗುತ್ತಾ?ʼ ಎಂದ ಚಾಲೆಂಜಿಂಗ್‌ ಸ್ಟಾರ್‌
  • ಈ ಬಾರಿಯೂ ದರ್ಶನ್-ಯಶ್‌ ಜೋಡಿಯಾಗಿ ಪ್ರಚಾರ ಮಾಡ್ತಾರಾ..?
Lok Sabha Election 2024: ಸುಮಲತಾ ಪರ ನಟ ದರ್ಶನ್ ಪ್ರಚಾರ ಫಿಕ್ಸ್..! title=
ಸುಮಲತಾ ಪರ ದರ್ಶನ್‌ ಪ್ರಚಾರ

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರಾದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಹಾಗೂ ರಾಕಿಂಗ್‌ ಸ್ಟಾರ್ ಯಶ್ ಅವರು ಸುಮಲತಾ ಪರ ಪ್ರಚಾರ ಮಾಡಿದ್ದರು. ಹೀಗಾಗಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಸಹ ನಟ ದರ್ಶನ್ ಅವರು ಸುಮಲತಾರ ಪರ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ. 

ಸುಮಲತಾರ ಪರ ಪ್ರಚಾರ ಮಾಡುವ ಬಗ್ಗೆ ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ದರ್ಶನ್, ʼಹೆತ್ತ ತಾಯಿಯನ್ನು ಬಿಟ್ಟು ಕೊಡಲು ಆಗುತ್ತಾ? ಈ ಹಿಂದೆಯೂ ಅವರ ಜೊತೆಗೆ ನಿಂತಿದ್ದೇ, ಯಾವಾಗಲೂ ನಮ್ಮ ಅಮ್ಮನ ಜೊತೆ ಇರುತ್ತೇನೆ. ನಿಮ್ಮ ಮನೆಯಲ್ಲಿ ನಿಮ್ಮ ತಾಯಿಯನ್ನು ಬಿಟ್ಟು ಬಿಡ್ತೀರಾ? ಅಮ್ಮ.. ಅಮ್ಮನೇ ಅಲ್ವಾʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: India's First AI Teacher: ಭಾರತದ ಮೊದಲ ರೋಬೋಟ್ ಶಿಕ್ಷಕಿ..! AI ತಂತ್ರಜ್ಞಾನದೊಂದಿಗೆ ಬೋಧನೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಒಂದು ಕಡೆ ಸುಮಲತಾ ಅಂಬರೀಷ್ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದಿದ್ದಾರೆ. ಇನ್ನೊಂದು ಕಡೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಿರುವ ಹಿನ್ನೆಲೆ ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದರ ಬಗ್ಗೆ ಬಿಜೆಪಿಯಲ್ಲಿ ಗೊಂದಲ ಉಂಟಾಗಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ಈ ಬಾರಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ? ಅಥವಾ ಅವರಿಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಟಿಕೆಟ್‌ ಸಿಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. 

ಬಿಜೆಪಿ ತನ್ನ ೨ನೇ ಅಭ್ಯರ್ಥಿಗಳ ಲಿಸ್ಟ್‌ ಬಿಡುಗಡೆ ಬಳಿಕವೇ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ. ಈ ಬಾರಿಯೂ ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣಾ ರಣಕಣವು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಲಿದೆ. ಸುಮಲತಾರ ಪರ ಕಳೆದ ಬಾರಿ ದರ್ಶನ್-ಯಶ್‌ ಜೋಡಿಯಾಗಿ ಪ್ರಚಾರ ನಡೆಸಿದ್ದರು. ಈ ಬಾರಿಯೂ ಜೊಡೆತ್ತುಗಳು ಜೊತೆಯಾಗಿ ಪ್ರಚಾರ ನಡೆಸುತ್ತಾರಾ? ಕಾದು ನೋಡಬೇಕಿದೆ. 

ಇದನ್ನೂ ಓದಿ: Miss world 2024 : ʼವಿಶ್ವ ಸುಂದರಿ 2024ʼ ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಸುಂದರಿ..! ಭಾರತ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News