ಸಾಂಗ್ಸ್‌ ಇಲ್ಲದಿದ್ದರೂ ಸೂಪರ್‌ ಹಿಟ್‌ ಆದ ಕನ್ನಡ ಸಿನಿಮಾಗಳು ಇವೆ ನೋಡಿ..!

ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಲವ್ ಸಾಂಗ್, ಐಟಂ ಸಾಂಗ್, ಮೆಲೋಡಿ ಸಾಂಗ್ ಹೀಗೆ ಹಲವು ಹಾಡುಗಳಿತ್ತವೆ. 

Written by - Zee Kannada News Desk | Last Updated : Mar 2, 2023, 02:55 PM IST
  • ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ ಎಂದೆನಿಸಿಕೊಂಡ ಕನ್ನಡ ಸಿನಿಮಾ 'ಪುಷ್ಪಕ ವಿಮಾನ'.
  • ಸಸ್ಪೆನ್ಸ್ ಕಮ್ ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಎಂದು ಬ್ರ್ಯಾಂಡ್ ಆಗಿದ್ದ ಸುನಿಲ್ ಕುಮಾರ್ ದೇಸಾಯಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.
  • 2021ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ ದಿಯಾ. ರೋಮ್ಯಾಂಟಿಕ್, ಟ್ರಾಜಿಡಿ ಕಥಾಹಂದರ ಹೊಂದಿದ್ದ ಈ ಸಿನಿಮಾ
ಸಾಂಗ್ಸ್‌ ಇಲ್ಲದಿದ್ದರೂ ಸೂಪರ್‌ ಹಿಟ್‌ ಆದ ಕನ್ನಡ ಸಿನಿಮಾಗಳು ಇವೆ ನೋಡಿ..!  title=

ಕನ್ನಡ ಚಿತ್ರರಂಗದಲ್ಲಿ ಅನೇಕ ರೀತಿಯ ಪ್ರಯೋಗಾತ್ಮಕ ಸಿನಿಮಾಗಳು ತೆರೆಗೆ ಬಂದಿವೆ. ಸ್ಟಾರ್ ನಟ-ನಟಿಯರಿಲ್ಲದೆ ಸೂಪರ್ ಹಿಟ್ ಆದ ಅನೇಕ ಸಿನಿಮಾಗಳು ನಮ್ಮ ಕಣ್ಮುಂದೆ ಇವೆ. ಇದರ ಜೊತೆಗೆ ಹಾಡುಗಳೇ ಇಲ್ಲದ ಸಿನಿಮಾಗಳು ಕೂಡ ಬಂದಿವೆ. ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಲವ್ ಸಾಂಗ್, ಐಟಂ ಸಾಂಗ್, ಮೆಲೋಡಿ ಸಾಂಗ್ ಹೀಗೆ ಹಲವು ಹಾಡುಗಳಿತ್ತವೆ. ಚಿತ್ರತಂಡದವರು ಸಿನಿಮಾ ಪ್ರಚಾರದ ವೇಳೆ ಹೆಚ್ಚಾಗಿ ನಮ್ಮ ಸಿನಿಮಾದಲ್ಲಿ ಈ ತರಹದ ಹಾಡುಗಳಿವೆ, ಈ ಲೊಕೇಶನ್ ನಲ್ಲಿ ಶೂಟ್ ಮಾಡಲಾಗಿದೆ ಅಂತೆಲ್ಲಾ ಹೇಳಿಕೊಳ್ಳುತ್ತಾರೆ. ಆದರೆ, ಕನ್ನಡದಲ್ಲಿ ಈ ಹಿಂದೆ ತೆರೆಕಂಡ ಕೆಲ ಸಿನಿಮಾಗಳಲ್ಲಿ ಹಾಡುಗಳೇ ಇಲ್ಲ. ಆದರೂ ಕೂಡ ಈ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆ ಸಿನಿಮಾಗಳು ಯಾವವು ಎಂಬ ಮಾಹಿತಿ ಇಲ್ಲಿದೆ.

ಪುಷ್ಪಕ ವಿಮಾನ
ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ ಎಂದೆನಿಸಿಕೊಂಡ ಕನ್ನಡ ಸಿನಿಮಾ 'ಪುಷ್ಪಕ ವಿಮಾನ'. ಕಮಲ್ ಹಾಸನ್ ನಟನೆಯ ಈ ಮೂಕಿ ಕಾಮಿಡಿ ಸಿನಿಮಾ 1987ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಯಾವುದೇ ಹಾಡುಗಳಿರಲಿಲ್ಲ ಹಾಗೂ ಸಂಭಾಷಣೆ ಇರಲಿಲ್ಲ. ಬರೀ ಮೂಕಭಿನಯದಿಂದ ಅಂದಿನ ದಿನಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.  'ಪುಷ್ಪಕ ವಿಮಾನ' ಸಿನಿಮಾವನ್ನು ವಾಸ್ ರಾವ್ ನಿರ್ದೇಶನ ಮಾಡಿದ್ದರು. ಕಮಲ್ ಹಾಸನ್, ಅಮಲಾ, ಮನದೀಪ್ ರಾಯ್, ಫರೀದಾ ಜಲಾಲ್, ಟಿನು ಆನಂದ್, ಪಿ.ಎಲ್,ನಾರಾಯಣ , ಕೆ.ಎಸ್.ರಮೇಶ್, ಪ್ರತಾಪ್ ಸೇರಿದಂತೆ ದೊಡ್ಡ ತಾರಾಗಣವಿತ್ತು.  ವೈದ್ಯನಾಥನ್ ಅವರ ಹಿನ್ನೆಲೆ ಸಂಗೀತ ಬಿಟ್ಟರೆ ಯಾವುದೇ ಹಾಡುಗಳು ಈ ಚಿತ್ರದಲ್ಲಿ ಇರಲಿಲ್ಲ. ಬೆಂಗಳೂರಿನಲ್ಲಿ ೩೫ ವಾರಗಳ ಕಾಲ ಈ ಸಿನಿಮಾ ಪ್ರದರ್ಶನವಾಗಿತ್ತು.

ಇದನ್ನೂ ಓದಿ-Rahul Sipligunj : ಆಸ್ಕರ್‌ ಅಂಗಳದಲ್ಲಿ ʼಸ್ಲಂ ಹುಡುಗʼನ ʼನಾಟು ನಾಟುʼ ಪರ್ಫಾರ್ಮೆನ್ಸ್..! ಸಾಧನೆ ಅಂದ್ರೆ ಇದೇನಾ..?

ನಿಷ್ಕರ್ಷ
ಹಾಡುಗಳಿಲ್ಲದೆ ಯಶಸ್ವಿಯಾದ ಮತ್ತೊಂದು ಕನ್ನಡ ಸಿನಿಮಾ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ನಿಷ್ಕರ್ಷ'. ಸಸ್ಪೆನ್ಸ್ ಕಮ್ ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಎಂದು ಬ್ರ್ಯಾಂಡ್ ಆಗಿದ್ದ ಸುನಿಲ್ ಕುಮಾರ್ ದೇಸಾಯಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಬ್ಯಾಂಕ್ ದರೋಡೆಯನ್ನು ಬಹಳ ಅದ್ಭುತವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದ ಸುನಿಲ್ ಕುಮಾರ್ ದೇಸಾಯಿ ಅವರು ಇಡೀ ಚಿತ್ರವನ್ನು ಒಂದೇ ಕಟ್ಟಡದಲ್ಲಿ ಚಿತ್ರೀಕರಣ ಮಾಡಿ ಅಂದಿನ ಕಾಲಕ್ಕೆ ಬಹುದೊಡ್ಡ ಸಾಹಸ ಮಾಡಿದ್ದರು. ವಿಷ್ಣುಯುವರ್ಧನ್ ಈ ಸಿನಿಮಾದಲ್ಲಿ ಕಮಾಂಡೋ ಅಜಯ್ ಆಗಿ ಮಿಂಚಿದ್ರು. ೧೯೯೩ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಕೂಡ ಒಂದೇ ಒಂದು ಹಾಡು ಇರಲಿಲ್ಲ. ಈ ಸಿನಿಮಾ ಮೂಲಕ ಬಿ.ಸಿ.ಪಾಟೀಲ್ ಖಳನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.  ಅಂದಿನ ಕಾಲದಲ್ಲಿ 12 ಲಕ್ಷ ಬಂಡವಾಳ ಹೂಡಿ ಈ ಸಿನಿಮಾ ನಿರ್ಮಾಣ ಮಾಡಲಾಗಿತ್ತು.  ಹಾಡುಗಳಿಲ್ಲದಿದ್ದರೂ ಕೂಡ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. 

ದಿಯಾ
2021ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ ದಿಯಾ. ರೋಮ್ಯಾಂಟಿಕ್, ಟ್ರಾಜಿಡಿ ಕಥಾಹಂದರ ಹೊಂದಿದ್ದ ಈ ಸಿನಿಮಾದಲ್ಲಿ ಖುಷಿ ರವಿ, ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ  ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಲವ್ ಸ್ಟೋರಿ ಜೊತೆಗೆ ಎಮೋಷನ್ ಇದ್ದ ಕಾರಣ ಈ ಸಿನಿಮಾ ಪ್ರೇಕ್ಷಕರನ್ನು ಹೆಚ್ಚು ಸೆಳೆದಿತ್ತು. ಎರಡು ಲವ್ ಸ್ಟೋರಿಗಳನ್ನು ಒಳಗೊಂಡ ಈ ಸಿನಿಮಾ ಸಿನಿರಸಿಕರಿಗೆ ಬಹಳ ಇಷ್ಟವಾಗಿತ್ತು. ರೋಮ್ಯಾಂಟಿಕ್ ಲವ್ ಸ್ಟೋರಿ ಅಂದ ಮೇಲೆ ಅಲ್ಲಿ ಹಾಡುಗಳಿಗೆ ಹೆಚ್ಚಿನ ಆದ್ಯತೆ ಇರುತ್ತದೆ. ಆದರೆ, ಕೆ.ಎಸ್.ಅಶೋಕ್ ನಿರ್ದೇಶನದ ಈ ಸಿನಿಮಾದಲ್ಲಿಯೂ ಕೂಡ ಯಾವುದೇ ಹಾಡುಗಳು ಇರಲಿಲ್ಲ. ಇಲ್ಲಿ ಗಟ್ಟಿತನದ ಕತೆ ಇದ್ದಿದ್ದರಿಂದ ಹಾಡುಗಳ ಅವಶ್ಯಕತೆ ಇರಲಿಲ್ಲ ಎಂಬುದು ನಿರ್ದೇಶಕ ಅಭಿಪ್ರಾಯ.  

​ಇದನ್ನೂ ಓದಿ-ಬಿಬಿಎಂಪಿ ಮಾಡಲು ಆಗದ ಕೆಲಸ ಮಾಡಿ ಸೈ ಅನಿಸಿಕೊಂಡಿದ್ದಾರೆ ನಟಿ ಕಾರುಣ್ಯರಾಮ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News