ʼಮೊಗ್ಗಿನ ಮನಸ್ಸುʼ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು "ಲವ್ 360" ಸಿನಿಮಾ ಸಾಂಗ್‌

ನಾನು ಲವ್ 360 ಸಿನಿಮಾದ ಈ  ಹಾಡನ್ನು ಇದೇ ದಿನ ಬಿಡುಗಡೆ ಮಾಡಲು ಪ್ರಮುಖ ಕಾರಣವಿದೆ. ಅದೇನೆಂದರೆ, ನನ್ನ ನಿರ್ದೇಶನದ "ಮೊಗ್ಗಿನ ಮನಸ್ಸು" ಚಿತ್ರ ತೆರೆಕಂಡು ಇಂದಿಗೆ (ಜುಲೈ 18) ಹದಿನಾಲ್ಕು ವರ್ಷಗಳಾಗಿದೆ. ಹಾಗಾಗಿ ಇಂದು ಆ ಚಿತ್ರದ ನೆನಪುಗಳೊಂದಿಗೆ ಲವ್ 360 ಚಿತ್ರದ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಮೊಗ್ಗಿನ ಮನಸ್ಸು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗಂಗಾಧರ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಆ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರನ್ನು ಆಹ್ವಾನಿಸಿದ್ದೆ. ಕಾರ್ಯದೊತ್ತಡದಿಂದ ಅವರಿಗೆ ಬರಲಾಗಲಿಲ್ಲ ಎಂದರು. 

Written by - YASHODHA POOJARI | Edited by - Bhavishya Shetty | Last Updated : Jul 19, 2022, 01:56 PM IST
  • "ಲವ್ 360" ಚಿತ್ರದ "ಭೋರ್ಗರೆದು" ಎಂಬ ಹಾಡು ಬಿಡುಗಡೆ
  • ಕೀರ್ತನ್ ಹೊಳ್ಳ ಹಾಡಿರುವ ಈ ಸಾಂಗ್‌ಗೆ ಅರ್ಜುನ್ ಜನ್ಯ ಸಂಗೀತ
  • "ಮೊಗ್ಗಿನ ಮನಸ್ಸು" ಸಿನಿಮಾದ 14 ವರ್ಷ ಸಂಭ್ರಮದಲ್ಲಿರುವಾಗ ಈ ಹಾಡು ಬಿಡುಗಡೆ
ʼಮೊಗ್ಗಿನ ಮನಸ್ಸುʼ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು "ಲವ್ 360" ಸಿನಿಮಾ ಸಾಂಗ್‌  title=
Love 360 cinema

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವವರು ನಿರ್ದೇಶಕ ಶಶಾಂಕ್. ಅವರ ನಿರ್ದೇನದಲ್ಲಿ ಮೂಡಿಬಂದಿದ್ದ "ಮೊಗ್ಗಿನ ಮನಸ್ಸು" ಚಿತ್ರ‌ ಬಿಡುಗಡೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ಈ ಸುಂದರ ನೆನಪಿನೊಂದಿಗೆ ಪ್ರಸ್ತುತ ಅವರು ನಿರ್ದೇಶಿಸಿರುವ  "ಲವ್ 360" ಚಿತ್ರದ "ಭೋರ್ಗರೆದು" ಎಂಬ ಹಾಡು ಬಿಡುಗಡೆಯಾಗಿದೆ. ಶಶಾಂಕ್ ಅವರೆ ಬರೆದಿರುವ ಈ ಹಾಡನ್ನು ಕೀರ್ತನ್ ಹೊಳ್ಳ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. 

ಇದನ್ನೂ ಓದಿ: Priyanka Chopra: ಪ್ರಿಯಾಂಕಾ ಚೋಪ್ರಾ ಬರ್ತ್‌ ಡೇ.. ಪತಿ ನಿಕ್ ಜೋನಾಸ್ ಕೊಟ್ರು ಬಿಗ್ ಸರ್‌ಪ್ರೈಸ್‌‌

ನಾನು ಲವ್ 360 ಸಿನಿಮಾದ ಈ  ಹಾಡನ್ನು ಇದೇ ದಿನ ಬಿಡುಗಡೆ ಮಾಡಲು ಪ್ರಮುಖ ಕಾರಣವಿದೆ. ಅದೇನೆಂದರೆ, ನನ್ನ ನಿರ್ದೇಶನದ "ಮೊಗ್ಗಿನ ಮನಸ್ಸು" ಚಿತ್ರ ತೆರೆಕಂಡು ಇಂದಿಗೆ (ಜುಲೈ 18) ಹದಿನಾಲ್ಕು ವರ್ಷಗಳಾಗಿದೆ. ಹಾಗಾಗಿ ಇಂದು ಆ ಚಿತ್ರದ ನೆನಪುಗಳೊಂದಿಗೆ ಲವ್ 360 ಚಿತ್ರದ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಮೊಗ್ಗಿನ ಮನಸ್ಸು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗಂಗಾಧರ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಆ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರನ್ನು ಆಹ್ವಾನಿಸಿದ್ದೆ. ಕಾರ್ಯದೊತ್ತಡದಿಂದ ಅವರಿಗೆ ಬರಲಾಗಲಿಲ್ಲ ಎಂದರು. 

ಮಾತು ಮುಂದುವರೆಸಿದ ಅವರು, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಶುಭಾ ಪೂಂಜಾ ಮುಂತಾದವರು ಅಭಿನಯಿಸಿದ್ದ ಸಿನಿಮಾವದು. ಚಿತ್ರ ಹಾಗೂ ಹಾಡುಗಳು ಈಗಲೂ ಜನಪ್ರಿಯ. ಮುಂದೊಂದು ದಿನ ಮೊಗ್ಗಿನ ಮನಸ್ಸು ಭಾಗ 2  ಮಾಡುವ ಆಸೆಯಿದೆ. ಆ ಚಿತ್ರವನ್ನೂ ಹೊಸ ಕಲಾವಿದರೊಂದಿಗೆ ಮಾಡುತ್ತೇನೆ. ಇನ್ನು ಇಂದು ಬಿಡುಗಡೆಯಾಗಿರುವ ಲವ್ 360   ಚಿತ್ರದ "ಭೋರ್ಗರೆದು" ಹಾಡನ್ನು ನಾನೇ ಬರೆದಿದ್ದೇನೆ. ಕೀರ್ತನ್ ಹೊಳ್ಳ ಹಾಡಿದ್ದಾರೆ. ಇನ್ನೊಂದು ಹಾಡಿದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಜನಪ್ರಿಯವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ನಾವು ಅಂದುಕೊಂಡದಕ್ಕಿಂತ ದೊಡ್ಡ ಯಶಸ್ಸು ಕಂಡಿದೆ. ರೀಲ್ಸ್‌ನಲ್ಲೂ ಈ ಹಾಡಿಗೆ ಹೆಜ್ಜೆ ಹಾಕುತ್ತಿರುವವರು ಹೆಚ್ಚಾಗಿದ್ದಾರೆ ಎಂದು ನಿರ್ದೇಶಕ ಶಶಾಂಕ್ ಮಾಹಿತಿ ನೀಡಿದರು.

ನಮ್ಮ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. ಜಗವೇ ನೀನು ಹಾಡಿನಿಂದ ಈಗಾಗಲೇ ಜನ ನನ್ನನ್ನು ಹೋದ ಕಡೆ ಎಲ್ಲಾ ಗುರುತಿಸುತ್ತಿದ್ದಾರೆ. ಚಿತ್ರದ ಗೆಲುವಿನ ಖುಷಿಯನ್ನು ಈ ಹಾಡು ನನಗೆ ಈಗಾಗಲೇ ನೀಡಿದೆ. ಇಂತಹ ಅದ್ಭುತ ಹಾಡು ಕೊಟ್ಟಿರುವ ನಿರ್ದೇಶಕರಿಗೆ ಹಾಗೂ ಮೆಚ್ಚಿಕೊಂಡಿರುವ ಕಲಾರಸಿಕರಿಗೆ ಧನ್ಯವಾದ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಾಯಕ ಪ್ರವೀಣ್.

 ಬಿಡುಗಡೆಯಾಗಿರುವ ಎರಡು ಹಾಡುಗಳು ಗೆದ್ದಿದೆ. ಹಿರಿಯರು, ಕಿರಿಯರು ಎಲ್ಲಾ ವಯಸ್ಸಿನವರಿಗೂ "ಜಗವೇ ನೀನು ಗೆಳತಿಯೆ" ಹಾಡು ಇಷ್ಟವಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲುತ್ತದೆ ಎಂದರು ನಾಯಕಿ ರಚನಾ ಇಂದರ್.

ಇದನ್ನೂ ಓದಿ: ಸೋನಿಯಾ ಪರ ಕಾಂಗ್ರೆಸ್ ಹೋರಾಟ: ಇಟಲಿವರೆಗೆ ಪಾದಯಾತ್ರೆ ಮಾಡಿ ಎಂದ ಬಿಜೆಪಿ

ಲವ್ 360 ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವುದಕ್ಕೆ ಆನಂದ್ ಆಡಿಯೋ ಶ್ಯಾಮ್ ಸಂತಸಪಟ್ಟರು. ಚಿತ್ರೀಕರಣದ ಅನುಭವಗಳನ್ನು ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಮಾಧ್ಯಮದ ಮುಂದೆ ಹಂಚಿಕೊಂಡರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News