Adipurush Viral Video: ಇಂದು ಬಹುನಿರೀಕ್ಷಿತ ಸಿನಿಮಾ ಆದಿಪುರುಷ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ವಿಮರ್ಶೆಗಳು ಬರುತ್ತಿವೆ. ಕೆಲವರು ಚಿತ್ರದ ಬಗ್ಗೆ ಹಾಡಿ ಹೊಗಳುತ್ತಿದ್ದರೆ, ಮತ್ತೆ ಕೆಲವರು ಚಿತ್ರದ ನೆಗೆಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಿಲೀಸ್ ಆದ ಮೇಲೆ ಥಿಯೇಟರ್ ನಲ್ಲಿ ಪ್ರೇಕ್ಷಕರ ರೆಸ್ಪಾನ್ಸ್ ಕುರಿತು ಬಗೆ ಬಗೆಯ ಸುದ್ದಿಗಳು ಬರುತ್ತಿವೆ. ಈ ಮಧ್ಯೆ ಚಿತ್ರ ತಂಡ ಮೊದಲೇ ನಿರ್ಧರಿಸಿದಂತೆ, ಆಂಜನೇಯನಿಗಾಗಿ ಪ್ರತಿ ಚಿತ್ರಮಂದಿರದಲ್ಲೂ ಒಂದು ಸೀಟ್ ಮೀಸಲಿಟ್ಟಿತ್ತು. ಈ ಆಸನದಲ್ಲಿ ಕುಳಿತುಕೊಳ್ಳಲು ಯತ್ನಿಸಿದ ಕಾರಣಕ್ಕಾಗಿ ಹೈದರಾಬಾದ್‌ನಲ್ಲಿ ಚಿತ್ರ ವೀಕ್ಷಿಸಲು ಬಂದ ವ್ಯಕ್ತಿಯನ್ನು ಅಲ್ಲಿದ್ದ ಪ್ರೇಕ್ಷಕರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವರದಿಗಳ ಪ್ರಕಾರ, ವ್ಯಕ್ತಿಯೊಬ್ಬರು ಹನುಮಂತನಿಗೆ ಕಾಯ್ದಿರಿಸಿದ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದರು. ಆಗ ಪ್ರಭಾಸ್ ಅಭಿಮಾನಿಗಳು ಆಕ್ರೋಶಗೊಂಡರು. ಈ ವೇಳೆ ಥಿಯೇಟರ್‌ನಲ್ಲಿ ಗದ್ದಲ ಉಂಟಾಯಿತು. ಆಗ ಕೆಲವರು ಈ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತಾದ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
A person was attacked by Prabhas fans for sitting in a seat allocated to Lord Hanuman in Bramarambha theatre Hyderabad in the early hours of this morning.
.
.#Prabhas #PrabhasFans #Adipurush #Hyderabad pic.twitter.com/oJ234ydDk3— खम्मा घणी (@khamma_ghani_) June 16, 2023
ಇದನ್ನೂ ಓದಿ: ಬಾಕ್ಸ್ ಆಫಿಸ್‌ನಲ್ಲಿ ದಾಖಲೆ ಬರೆದ ʼಆದಿಪುರುಷʼ..! ಎಲ್ಲೆಡೆ ಮೊಳಗುತಿದೆ ಜೈಶ್ರೀರಾಮ ಘೋಷಣೆ
ಮೊದಲ ದಿನವೇ ಭರ್ಜರಿ ಪ್ರದರ್ಶನ
ಮೊದಲ ದಿನವೇ ಚಿತ್ರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕೆಲವರಿಗೆ ವಿಎಫ್‌ಎಕ್ಸ್ ಅದ್ಭುತ ಎನಿಸಿದರೆ ಮತ್ತು ಕೆಲವರು ಕಲಾವಿದರ ಕೆಲಸವನ್ನು ಕಂಡುಕೊಂಡಿದ್ದಾರೆ. ಈ ನಡುವೆ ಚಿತ್ರ ಕೆಲವರಿಗೆ ನಿರಾಸೆ ಮೂಡಿಸಿದೆ. ಆದರೂ ಸಿನಿಮಾ ಇಷ್ಟ ಪಡುವವರೇ ಹೆಚ್ಚು. ಥಿಯೇಟರ್‌ನಲ್ಲಿ ಯಾರೋ ಒಬ್ಬರು ಜೈ ಸಿಯಾ ರಾಮ್ ಘೋಷಣೆಗೆ ನೃತ್ಯ ಕೂಡ ಮಾಡಿದ್ದಾರೆ.
ರಾಘವನಾಗಿ ಮಿಂಚಿದ ಪ್ರಭಾಸ್
ವರದಿಗಳ ಪ್ರಕಾರ, ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಮಿಂಚಿದ್ದಾರೆ. ಓಂ ರಾವುತ್ ನಿರ್ದೇಶನದ ಈ ಚಿತ್ರದೊಂದಿಗೆ ಪ್ರಭಾಸ್ ಅವರ ಸರಣಿ ಫ್ಲಾಪ್ ಚಿತ್ರಗಳು ಅಂತ್ಯಗೊಂಡಿವೆ. ಬಾಹುಬಲಿಯಂತೆ ಆದಿಪುರುಷ ಕೂಡ ಪ್ರಭಾಸ್ ಅವರಿಗೆ ಯಶಸ್ಸನ್ನು ನೀಡಲಿದೆ ಎಂದು ಜನರು ಆಶಿಸುತ್ತಿದ್ದಾರೆ. ಇದರಿಂದಾಗಿ ನಟನ ಮುಳುಗುತ್ತಿರುವ ವೃತ್ತಿಜೀವನವು ಮತ್ತೆ ಟ್ರ್ಯಾಕ್‌ಗೆ ಬರುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.
ಇದನ್ನೂ ಓದಿ: Monkey Watching Adipursh: ಥಿಯೇಟರ್‌ಗೆ ಬಂದು ಆದಿಪುರುಷ ವೀಕ್ಷಿಸಿದ ವಾನರ.. ವಿಡಿಯೋ ವೈರಲ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.