ಮೃಣಾಲ್ ಠಾಕೂರ್ ಮದುವೆ..! ಸೀತಾ ಮಹಾಲಕ್ಷ್ಮೀಯ್ನನು ವರಿಸುವ ವರ ಯಾರು ಗೊತ್ತಾ?

Mrunal Thakur Marriege: 'ಸೀತಾರಾಮನ್' ಚಿತ್ರದ ಮೂಲಕ ಅಭಿಮಾನಿಗಳ ಗಮನ ಸೆಳೆದ ನಟಿ ಮೃಣಾಲ್ ಠಾಕೂರ್. ಇದೀಗ ಇವರ ಮದುವೆ ವಿಚಾರ ಸೋಷಿಯಲ್‌ ಮಿಡಿಯಾದಲ್ಲಿ ಹಾಟ್‌ ಟಾಫಿಕ್‌ ಆಗಿದೆ.   

Written by - Savita M B | Last Updated : Oct 30, 2023, 03:23 PM IST
  • ಟಾಲಿವುಡ್‌ನಲ್ಲಿ ಸಖತ್‌ ಬ್ಯುಸಿಯಾಗಿರುವ ನಟಿ ಮೃಣಾಲ್‌ ಠಾಕುರ್‌
  • 'ಸೀತಾರಾಮನ್' ಚಿತ್ರದ ಮೂಲಕ ಅಭಿಮಾನಿಗಳ ಗಮನ ಸೆಳೆದ ನಟಿ ಮೃಣಾಲ್ ಠಾಕೂರ್
  • ಮೃಣಾಲ್‌ ಮದುವೆ ಸುದ್ದಿ ಹಾಟ್ ಟಾಪಿಕ್ ಆಗಿದೆ
ಮೃಣಾಲ್ ಠಾಕೂರ್ ಮದುವೆ..! ಸೀತಾ ಮಹಾಲಕ್ಷ್ಮೀಯ್ನನು ವರಿಸುವ ವರ ಯಾರು ಗೊತ್ತಾ? title=

Tollywood News: ಟಾಲಿವುಡ್‌ನಲ್ಲಿ ಸಖತ್‌ ಬ್ಯುಸಿಯಾಗಿರುವ ನಟಿ ಮೃಣಾಲ್‌ ಠಾಕುರ್‌ 'ಸೀತಾರಾಮನ್' ಸಿನಿಮಾ ಮೂಲಕ ಸಿನಿಮಾ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿನ ಅಭಿನಯದಿಂದ ಅನೇಕ ನಿರ್ದೇಶಕರ ಮನಗೆದ್ದಿದ್ದಾರೆ. 

ಇತ್ತೀಚೆಗೆ ಮದುವೆ ವಿಚಾರವಾಗಿ ಸಾಕಷ್ಟು ನಟ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಸೌತ್‌ ಸುಂದರಿ ಕೀರ್ತಿ ಸುರೇಶ್‌ ಹಾಗೂ ಅನಿರುದ್ಧ್‌ ಇಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೂ ಜೋರಾಗಿಯೇ ಕೇಳಿಬಂದಿತ್ತು ಆದರೆ ನಟಿ ಹಾಗೂ ಅವರ ತಂದೆ ಇಬ್ಬರೂ ಪ್ರತಿಕ್ರಿಯಿಸಿ ಆ ಗಾಸಿಪ್‌ಗೆ ಫುಲ್‌ ಸ್ಟಾಪ್‌ ಇಟ್ಟಿದ್ದರು. 

ಇದನ್ನೂ ಓದಿ-BBK10: ಕಾರ್ತಿಕ್‌ VS ಡ್ರೋನ್‌ ಪ್ರತಾಪ್‌..! ನಾಮಿನೇಷನ್ ಪಾಸ್‌ ಕಾದಾಟದಲ್ಲಿ ಗೆದ್ದೋರು ಯಾರು?   

ಇದೀಗ ಸೀತಾ ಮಹಾಲಕ್ಷ್ಮೀ ಅಲಿಯಾಸ್‌ ಮೃಣಾಲ್‌ ಮದುವೆ ಸುದ್ದಿ ಹಾಟ್ ಟಾಪಿಕ್ ಆಗಿದೆ. ಅದಕ್ಕೆ ಮುಖ್ಯ ಕಾರಣ ಟಾಲಿವುಡ್ ಮೆಗಾ ಪ್ರೊಡ್ಯೂಸರ್ ಅಲ್ಲು ಅರವಿಂದ್ ಮಾಡಿದ ಕಾಮೆಂಟ್.

ಹೌದು ಇತ್ತೀಚೆಗೆ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ‘ಸೀತಾರಾಮ’ ಚಿತ್ರದ ನಾಯಕಿಯಾಗಿ ಮೃಣಾಲ್ ಠಾಕೂರ್ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಕೈಯಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಈ ವೇಳೆ ಅಲ್ಲು ಅರವಿಂದ್ ಅವರು ಮೃಣಾಲ್ ಠಾಕೂರ್ ಬಗ್ಗೆ ಮಾತನಾಡಿದರು.

ಇದನ್ನೂ ಓದಿ-BBK 10: ದೊಡ್ಮನೆಯಲ್ಲಿ ಆಟದ ವರಸೆಯನ್ನೇ ಬದಲಿಸಿದ ಡ್ರೋನ್ ಪ್ರತಾಪ್..! ಕರ್ಚೀಪ್ ಕೊಟ್ಟು, ಬುದ್ಧಿ ಹೇಳಿದ್ದೇ ತಪ್ಪಾಯ್ತಾ?

ಮೃಣಾಲ್ ಠಾಕೂರ್ ಕೂಡ ಶೀಘ್ರದಲ್ಲೇ ಹೈದರಾಬಾದ್‌ನ ಹುಡುಗನೊಂದಿಗೆ ಮದುವೆಯಾಗಲಿ ಎಂದು ಆಶೀರ್ವದಿಸಿದರು.  ವಿಶೇಷವೆಂದರೇ ಈ ಹಿಂದೆ ಯುವ ನಾಯಕಿ ಲಾವಣ್ಯ ತ್ರಿಪಾಠಿ ಅವರನ್ನು ಉದ್ದೇಶಿಸಿ, ಹೈದರಾಬಾದ್‌ನ ಹುಡುಗನನ್ನು ಮದುವೆಯಾಗಬೇಕೆಂದು ಹೇಳಿದ್ದರು. ಅದೇ ರೀತಿ ಲಾವಣ್ಯ ಅವರ ಮದುವೆ ನವೆಂಬರ್ 1 ರಂದು ಮೆಗಾ ಪ್ರಿನ್ಸ್ ವರುಣ್ ತೇಜ್ ಅವರೊಂದಿಗೆ ನಡೆಯಲಿದೆ. ಇದೀಗ ಅವರ ಮಾತು ನಿಜವಾಗುತ್ತಿದ್ದಂತೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. 

ಇದೀಗ ಮೃಣಾಲ್ ಠಾಕೂರ್ ಕೂಡ ಹೈದರಾಬಾದ್ ಹುಡುಗನನ್ನು ಮದುವೆಯಾಗುವ ಆಶೀರ್ವಾದ ಪಡೆದಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಮೆಗಾ ನಿರ್ಮಾಪಕರ ಮಾತು ಎಷ್ಟರಮಟ್ಟಿಗೆ ನಿಜವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News