Namra Qadri Videos: ಬಂಧನದ ಬಳಿಕ ಭಾರಿ ಟ್ರೆಂಡ್ ಆದ ನಮ್ರಾ ಕಾದಿರ್ ಹಾಟ್ ವಿಡಿಯೋಗಳು, ನೋಡಿದ್ರೆ ಶಾಕ್ ಆಗ್ತಿರಾ

Namra Qadir ಬಂಧನದ ಬಳಿಕ ಆಕೆಯ ಬೋಲ್ಡ್ ಡಾನ್ಸ್ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳ ಮೇಲೆ ಸಾಕಷ್ಟು ಸದ್ದು ಮಾಡತೊಡಗಿವೆ. ಈ ವಿಡಿಯೋಗಳ ವೀಕ್ಷಣೆಗಳು ಮಿಲಿಯನ್ಸ್ ಗೆ ತಲುಪಿವೆ.  

Written by - Nitin Tabib | Last Updated : Dec 7, 2022, 07:18 PM IST
  • ನಮ್ರಾ ಅವರು ಹನಿಟ್ರ್ಯಾಪ್ ಆರೋಪವನ್ನು ಎದುರಿಸುತ್ತಿದ್ದಾರೆ.
  • ಮಾಧ್ಯಮಗಳ ವರದಿಗಳ ಪ್ರಕಾರ ದೊಡ್ಡ ಉದ್ಯಮಿಗಳನ್ನು ಬಲೆಗೆ ಬೀಳಿಸಿ
  • ನಮ್ರಾ ಸುಮಾರು 80 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ
Namra Qadri Videos: ಬಂಧನದ ಬಳಿಕ ಭಾರಿ ಟ್ರೆಂಡ್ ಆದ  ನಮ್ರಾ ಕಾದಿರ್ ಹಾಟ್ ವಿಡಿಯೋಗಳು, ನೋಡಿದ್ರೆ ಶಾಕ್ ಆಗ್ತಿರಾ  title=
Namra Qadir

Namra Qadir Videos: ಇತ್ತೀಚೆಗೆ, ಯೂಟ್ಯೂಬ್‌ನಿಂದ ಹಿಡಿದು ಇನ್‌ಸ್ಟಾ ರೀಲ್ಸ್‌ ವರೆಗೆ ಪ್ರಾಬಲ್ಯ ಹೊಂದಿರುವ ಸಾಮಾಜಿಕ ಮಾಧ್ಯಮ ತಾರೆ ನಮ್ರಾ ಖಾದಿರ್ ಬಗ್ಗೆ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಮ್ರಾ ಅವರು ಹನಿಟ್ರ್ಯಾಪ್ ಆರೋಪವನ್ನು ಎದುರಿಸುತ್ತಿದ್ದಾರೆ. ಮಾಧ್ಯಮಗಳ ವರದಿಗಳ ಪ್ರಕಾರ ದೊಡ್ಡ ಉದ್ಯಮಿಗಳನ್ನು ಬಲೆಗೆ ಬೀಳಿಸಿ ನಮ್ರಾ ಸುಮಾರು 80 ಲಕ್ಷ ರೂಪಾಯಿ ಸಂಗ್ರಹಿಸಿದ್ದಾಳೆ ಎಂಬ ಆರೋಪಗಳು ಕೇಳಿ ಬಂದಿದ್ದು, ಪ್ರಸ್ತುತ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದೇ ವೇಳೆ, ನಮ್ರಾ ಬಂಧನಕ್ಕೆ ಒಳಗಾದ ಸುದ್ದಿ ಪ್ರಕಟವಾಗುತ್ತಿದ್ದಂತೆ, ಸಾಕಷ್ಟು ಜನರು ಆಕೆಯ ಸಾಮಾಜಿಕ ಖಾತೆಯನ್ನು ಪರಿಶೀಲಿಸಲು ಶುರು ಮಾಡಿದ್ದಾರೆ ಮತ್ತು ಆಕೆಯ ಅನೇಕ ಹಳೆಯ ಹಾಟ್ ವೀಡಿಯೊಗಳು ಇಂಟರ್ನೆಟ್‌ನಲ್ಲಿ ಭಾರಿ ಟ್ರೆಂಡ್ ಅನ್ನೇ ಸೃಷ್ಟಿಸಿವೆ.

ಪತಿಯೂ ಬೆಂಬಲಿಸುತ್ತಿದ್ದ
ದೆಹಲಿಯ ಸೋಷಿಯಲ್ ಮೀಡಿಯಾ ಸ್ಟಾರ್ ನಮ್ರಾ ಖಾದಿರ್ ವಿವಾಹಿತಳಾಗಿದ್ದು, ತನ್ನ ಪತಿಯೊಂದಿಗೆ ಸೇರಿ  ಅನೇಕ ಜನರನ್ನು ಹನಿ ಟ್ರ್ಯಾಪ್ ಮಾಡುವ ಮೂಲಕ ಸುಲಿಗೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಮ್ರಾ ಖಾದಿರ್ ಮೊದಲು ಉದ್ಯಮಿಯೋರ್ವನನ್ನು ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಅತ್ಯಾಚಾರದ ಆರೋಪ ಹೊರಿಸಿ ಹಣ ವಸೂಲಿ ಮಾಡಿದ್ದಾಳೆ. 80 ಲಕ್ಷ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ನಮ್ರಾ ಖಾದಿರ್ ಉದ್ಯಮಿಗೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

 
 
 
 

 
 
 
 
 
 
 
 
 
 
 

A post shared by Namra Qadir ♥️ (@namra_qadir)

ಇದನ್ನೂ ಓದಿ-Alia Bhatt: "ನಾನು ರಣಬೀರ್ ಹಾಸಿಗೆಯ ಮೇಲೆ..." ಬೆಡ್‌ರೂಮ್‌ ರಹಸ್ಯ ಬಿಚ್ಚಿಟ್ಟ ಆಲಿಯಾ!

ಪೊಲೀಸರು ನೀಡಿದ ಮಾಹಿತಿ ಏನು?
ಈ ವಿಷಯ ಬೆಳಕಿಗೆ ಬಂದ ಬಳಿಕ ಸೋಮವಾರ ಪೊಲೀಸರು ಆಕೆಯನ್ನು ಬಂಧಿಸಿದ್ದು, ನಾಲ್ಕು ದಿನಗಳ ಕಾಲ ಅವಳು ಪೋಲೀಸರ ವಶದಲ್ಲಿಯೇ ಇರಲಿದ್ದಾಳೆ. ಮಾಧ್ಯಮ ವರದಿಗಳ ಪ್ರಕಾರ, ನಮ್ರಾ ಪತಿ ಆಕೆಯನ್ನು ತನ್ನ ಬ್ಲಾಕ್ ಮೇಲ್ ತಂತ್ರಗಳನ್ನು ರೂಪಿಸಲು ಬಳಸಿಕೊಳ್ಳುತ್ತಿದ್ದರು ಎಂಬುದು ಪೋಲೀಸ್ ತನಿಖೆಯಿಂದ ತಿಳಿದುಬಂದಿದೆ. ಪ್ರಸ್ತುತ ನಮ್ರಾ ಪತಿ ಮನೀಶ್ ಅಲಿಯಾಸ್ ವಿರಾಟ್ ಬೇನಿವಾಲ್ ತಲೆಮರೆಸಿಕೊಂಡಿದ್ದು, ನಮ್ರಾ ಕಾದಿರ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ-Viral Video: ಬೆಡ್ ರೂಮ್ ಸೀಕ್ರೆಟ್ಸ್ ಕುರಿತು ಕೇಳಿದ ಪ್ರಶ್ನೆಗೆ ಉರ್ಫಿಯ ಶಾಕಿಂಗ್ ಉತ್ತರ

ತನ್ನ ಹಾಟ್ ವಿಡಿಯೋಗಳನ್ನು ಹಂಚಿಕೊಂಡು ಸುದ್ದಿಯಲ್ಲಿರುತ್ತಿದ್ದಳು ನಮ್ರಾ
22 ವರ್ಷ ವಯಸ್ಸಿನ ನಾದಿರಾ ಅಲಿಯಾಸ್ ನಮ್ರಾ ಖಾದಿರ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರೀಯಳಾಗಿದ್ದಳು. ಸಾಮಾಜಿಕ ಮಾಧ್ಯಮಗಳಲ್ಲಿ ಅವಳ ಹಿಂಬಾಲಕರ ಸಂಖ್ಯೆ ಯಾವುದೇ ಒಂದು ಸ್ಟಾರ್ ಗಿಂತ ಕಮ್ಮಿ ಇಲ್ಲ ಎನ್ನಲಾಗಿದೆ. ಹಲವಾರು ಬೋಲ್ಡ್ ವಿಡಿಯೋಗಳನ್ನು ಹಂಚಿಕೊಂಡು ನಮ್ರಾ ಸಾಕಷ್ಟು ಸುದ್ದಿ ಮಾಡಿದ್ದಾಳೆ ಎನ್ನಲಾಗಿದೆ. ನಾದಿರಾಳ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗುತ್ತವೆ. ಈ ಕುರಿತು ಖುದ್ದು ನಮ್ರಾ ಮಾಹಿತಿಯನ್ನು ಬಹಿರಂಗಪಡಿಸಿದ್ದಾಳೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News