National Crush: ರಶ್ಮಿಕಾ ಮಂದಣ್ಣನನ್ನು ಬದಿಗೊತ್ತಿ ನ್ಯಾಷನಲ್​ ಕ್ರಶ್​ ಪಟ್ಟ ಪಡೆದ ಟಾಲಿವುಡ್‌ ಬೆಡಗಿ ..!

National Crush  Replaced By Tollywood Actress: ರಶ್ಮಿಕಾ ಮಂದಣ್ಣ ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಈ ನಟಿಗೆ 2020ರಲ್ಲಿ ಗೂಗಲ್ ಭಾರತದ ರಾಷ್ಟ್ರೀಯ ಕ್ರಷ್ ಎಂದು ಘೋಷಿಸಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ‘ನ್ಯಾಷನಲ್​ ಕ್ರಶ್ ಪಟ್ಟಕ್ಕೆ ಟಾಲಿವುಡ್‌ ನಟಿಯ ಹೆಸರು ಕೇಳಿ ಬರುತ್ತಿದೆ.

Written by - Zee Kannada News Desk | Last Updated : May 18, 2023, 01:09 PM IST
  • ನ್ಯಾಷನಲ್​ ಕ್ರಶ್ ರಶ್ಮಿಕಾ ಮಂದಣ್ಣ ಬದಲಾಗಿ ಟಾಲಿವುಡ್‌ ನಟಿ
  • ನಟಿ ರಶ್ಮಿಕಾ ಮಂದಣ್ಣನಿಗೆ ಗೂಗಲ್ 2020 ರಲ್ಲಿ ‘ನ್ಯಾಷನಲ್​ ಕ್ರಶ್ ಪಟ್ಟ ನೀಡಿತ್ತು
  • ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಷನಲ್​ ಕ್ರಶ್ ಪಟ್ಟಕ್ಕೆ ಟಾಲಿವುಡ್‌ ಬೆಡಗಿ
National Crush: ರಶ್ಮಿಕಾ ಮಂದಣ್ಣನನ್ನು ಬದಿಗೊತ್ತಿ ನ್ಯಾಷನಲ್​ ಕ್ರಶ್​ ಪಟ್ಟ ಪಡೆದ ಟಾಲಿವುಡ್‌ ಬೆಡಗಿ ..! title=

ಬೆಂಗಳೂರು: ಸ್ಯಾಂಡಲ್ವುಡ್‌ ಕಿರಿಕ್‌ ಪಾರ್ಟಿ ಚಿತ್ರದಿಂದ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಬಹು ಬೇಡಿಕೆ ನಟಿಗೆ ಗೂಗಲ್ ಭಾರತದ ರಾಷ್ಟ್ರೀಯ ಕ್ರಷ್ ಎಂದು ಘೋಷಿಸಲಾಗಿತ್ತು.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ‘ನ್ಯಾಷನಲ್​ ಕ್ರಶ್ ಎಂದು ಟಾಲಿವುಡ್‌ ನಟಿಯ ಹೆಸರು ಕೇಳಿ ಬರುತ್ತಿದೆ.

ದಕ್ಷಿಣ ಭಾರತ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಡಿಮ್ಯಾಂಡ್‌ ಇರುವ ನಟಿ ರಶ್ಮಿಕಾ ಮಂದಣ್ಣನಿಗೆ ಗೂಗಲ್ 2020 ರಲ್ಲಿ ‘ನ್ಯಾಷನಲ್​ ಕ್ರಶ್ ಪಟ್ಟ ನೀಡಿತ್ತು. ತನ್ನ ಬ್ಯೂಟಿ ಮಾತ್ರವಲ್ಲದೇ  ನಟನೆಯಿಂದಲೇ ಎಲ್ಲರ ಮನೆ ಗೆದ್ದಿರುವ ನಟಿಗೆ ಸಿನಿಮಾ ಮಾತ್ರವಲ್ಲದೇ, ಜಾಹೀರಾತು ಬ್ರಾಂಡ್ ಅಂಬಾಸಿಡರ್, ವಿದೇಶಿ ಫ್ಯಾಷನ್‌ ರಾಯಾಭಾರಿ ಹೀಗೆ  ಎಲ್ಲಾ ಕ್ಷೇತ್ರದಲ್ಲೂ ಶ್ರೀವಲ್ಲಿಗೆ ಬಾರಿ ಬೇಡಿಕೆ ಕೇಳಿ ಬರುತ್ತಿತ್ತು .

ಇದನ್ನೂ ಓದಿ: Weekend With Ramesh: ಡಾಕ್ಟರ್‌ ಆಗಿದ್ದ ನಾ. ಸೋಮೇಶ್ವರ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿದ್ದು ಹೇಗೆ?

ಅದರಲ್ಲೂ ಹೆಚ್ಚಾಗಿ  ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಷನಲ್​ ಕ್ರಶ್ ಟ್ರೆಂಡಿಂಗ್‌ ನಲ್ಲಿ ಮಿಂಚುತ್ತಿದ್ದರು.  ಆದರೆ ನೆಟ್ಟಿಗರ ನೋಟದಲ್ಲಿ ಕೊಂಚ ಬದಲಾಗಿದೆ. ನಟಿ ಮೃಣಾಲ್​  ಠಾಕೂರ್ ​ ಕಾನ್​ ಚಿತ್ರೋತ್ಸವಕ್ಕೆ ಭಾಗಿ ಪೋಟೊಗಳನ್ನು ಹಂಚಿಕೊಳ್ಳುತ್ತಿದ್ದಂತೆ ನ್ಯಾಷನಲ್‌ ಕ್ರಶ್‌ ಕಮೆಂಟ್‌ಗಳ ಸುರಿಮಳೆ ಹರಿದಿದೆ. ನೆಟ್ಟಿಗರು  ಟಾಲಿವುಡ್‌  ನಟಿಗೆ ನ್ಯಾಷನಲ್​ ಕ್ರಶ್ ಪಟ್ಟ ನೀಡುತ್ತಿದ್ದಾರೆ.

ಇದನ್ನೂ ಓದಿ: Actor Dhruva Sarja: ಮಗಳ ಫೋಟೋ ರಿವೀಲ್ ಮಾಡಿದ ಧ್ರುವ ಸರ್ಜಾ ... ಇಲ್ಲಿವೆ ನೋಡಿ ಕ್ಯೂಟ್‌ ಫೋಟೊಸ್‌

ತಮ್ಮ ನಟನೆಯಿಂದಲೇ ಎಲ್ಲರ ಮನ ಗೆದ್ದಿರುವ ಈ ನಟಿ ಸಹ ಬಹು ಬೇಡಿಕೆ ನಟಿಯಾಗಿದ್ದಾರೆ. ಇತ್ತಿಚೇಗೆ ಬಿಡುಗಡೆಯಾದ ಟಾಲಿವುಡ್‌ ಸಿನಿಮಾ ‘ಸೀತಾ ರಾಮಂ’ ಚಿತ್ರದಲ್ಲಿ ತಮ್ಮ ಚೊಚ್ಚಲ ನಟನೆಯಿಂದ ಟಾಲಿವುಡ್‌ ಸೇರಿದಂತೆ ಎಲ್ಲರ ಮನ ಗೆದ್ದಿದ್ದರು.

ಮೃಣಾಲ್​ ​ಠಾಕೂರ್ ಕಾನ್​ ಚಿತ್ರೋತ್ಸವದಲ್ಲಿ ಧರಿಸಿದ್ದ ಕಾಸ್ಟ್ಯೂಮ್​ ಗಮನ ಸೆಳೆದಿದೆ. ಹೀಗಾಗಿ ಆಕೆಯ ಮನ ಮೋಹಕ ನೋಟಕ್ಕೆ ನೆಟ್ಟಿಗರಿಂದ ನ್ಯಾಷನಲ್​ ಕ್ರಶ್ ಬಿರುದು ಪಟ್ಟ  ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಬೇಡಿಕೆ ಇದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News