Nawazuddin Siddiqui: ಟ್ರಾನ್ಸ್‌ಜೆಂಡರ್ ಆಗಿ ನಟಿಸಿದ ಅನುಭವ ಬಿಚ್ಚಿಟ್ಟ ನವಾಜುದ್ದೀನ್ ಸಿದ್ದಿಕಿ

Nawazuddin Siddiqui: ನವಾಜುದ್ದೀನ್ ಸಿದ್ದಿಕಿ ಬಾಲಿವುಡ್ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರ ಬಹು ನಿರೀಕ್ಷಿತ ಚಿತ್ರ 'ಹಡ್ಡಿ' ಈ ವರ್ಷ ಬಿಡುಗಡೆಯಾಗಲಿದೆ. ಹೀಗಿರುವಾಗ ನವಾಜ್ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.  

Written by - Chetana Devarmani | Last Updated : May 19, 2023, 04:23 PM IST
  • ಬಾಲಿವುಡ್ ಚಿತ್ರರಂಗದ ಅತ್ಯುತ್ತಮ ನಟ ನವಾಜುದ್ದೀನ್ ಸಿದ್ದಿಕಿ
  • ಟ್ರಾನ್ಸ್‌ಜೆಂಡರ್ ಆಗಿ ನಟಿಸಿದ ಅನುಭವ ಬಿಚ್ಚಿಟ್ಟ ನವಾಜುದ್ದೀನ್
  • ಬಹು ನಿರೀಕ್ಷಿತ ಚಿತ್ರ 'ಹಡ್ಡಿ' ಈ ವರ್ಷ ಬಿಡುಗಡೆಯಾಗಲಿದೆ
Nawazuddin Siddiqui: ಟ್ರಾನ್ಸ್‌ಜೆಂಡರ್ ಆಗಿ ನಟಿಸಿದ ಅನುಭವ ಬಿಚ್ಚಿಟ್ಟ ನವಾಜುದ್ದೀನ್ ಸಿದ್ದಿಕಿ  title=

Nawazuddin Siddiqui: ನವಾಜುದ್ದೀನ್ ಸಿದ್ದಿಕಿ ಬಾಲಿವುಡ್ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರ ನಟನೆ ನೋಡಲೇಬೇಕು. ಅವರು ತಮ್ಮ ಅದ್ಭುತ ನಟನೆ ಮತ್ತು ಪ್ರತಿಭೆಯ ಆಧಾರದ ಮೇಲೆ ಉದ್ಯಮದಲ್ಲಿ ವಿಭಿನ್ನ ಗುರುತು ಮತ್ತು ಹೆಸರನ್ನು ಸಾಧಿಸಿದ್ದಾರೆ. ಸಿನಿಮಾಗಳಲ್ಲಿ ಸೈಡ್ ರೋಲ್ ಮಾಡ್ತಿದ್ದ ನವಾಜುದ್ದೀನ್, ಸಾಕಷ್ಟು ಹೋರಾಟ, ಪರಿಶ್ರಮದ ನಂತರ ಇಂದು ಇಂಡಸ್ಟ್ರಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಾರೆ. ಅವರ ಬಹು ನಿರೀಕ್ಷಿತ ಚಿತ್ರ 'ಹಡ್ಡಿ' ಈ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:  ಶೀಘ್ರದಲ್ಲೇ ಒಟಿಟಿಯಲ್ಲಿ ಅವತಾರ್ 2, ಎಂದಿನಿಂದ ಗೊತ್ತಾ?

‘ಹಡ್ಡಿ’ ಚಿತ್ರದಲ್ಲಿ ನವಾಜುದ್ದೀನ್‌ ಟ್ರಾನ್ಸ್‌ಜೆಂಡರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂದರ್ಶನವೊಂದರಲ್ಲಿ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ನಿಜ ಜೀವನದಲ್ಲಿ ಅವರು ಟ್ರಾನ್ಸ್‌ಜೆಂಡರ್‌ನಂತೆ ಮಾತನಾಡಲು ಪ್ರಾರಂಭಿಸಿದ್ದರೆಂದು ಹೇಳಿಕೊಂಡಿದ್ದಾರೆ. ಅವರ ಶೈಲಿಯು ಸಂಪೂರ್ಣವಾಗಿ ಬದಲಾಗಿದೆ. ಹಡ್ಡಿ ಚಿತ್ರದ ಚಿತ್ರೀಕರಣಕ್ಕೂ ಮುನ್ನ ನಾನು ಟ್ರಾನ್ಸ್‌ಜೆಂಡರ್ ಸಮುದಾಯದೊಂದಿಗೆ ಬೆರೆತಿದ್ದೆ. ಅವರು ಯಾವ ರೀತಿಯ ಜೀವನವನ್ನು ನಡೆಸುತ್ತಿದ್ದಾರೆಂದು ನನಗೆ ಅರ್ಥವಾಗುವಂತೆ ಬದುಕಿದೆ. ನಂತರ ಅವರು ತಮ್ಮನ್ನು ತಾವು ಮಹಿಳೆಯರಂತೆ ಇರಿಸಿಕೊಳ್ಳುತ್ತಾರೆ ಎಂದು ನನಗೆ ತಿಳಿಯಿತು. ಅವರು ಮಹಿಳೆಯಾಗಲು ಬಯಸುತ್ತಾರೆ ಮತ್ತು ಅದನ್ನು ತಮ್ಮ ಜೀವನವನ್ನು ಪೂರ್ಣಗೊಳಿಸುವ ವಿಷಯವೆಂದು ಪರಿಗಣಿಸುತ್ತಾರೆ. ನನ್ನ ಪಾತ್ರಕ್ಕಾಗಿ ನಾನು ಈ ವಿಷಯಗಳನ್ನು ನೋಡಿಕೊಂಡಿದ್ದೇನೆ. ನಾನು ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ನನಗೆ ಯಾವಾಗಲೂ ಅನಿಸುತ್ತದೆ. ಮಾನಸಿಕವಾಗಿಯೂ ದೈಹಿಕವಾಗಿಯೂ ದಣಿವುಂಟು ಮಾಡುತ್ತಿತ್ತು. ಅಯ್ಯೋ ದೇವರೇ, ಮನೆಗೆ ಹೋಗಿ ಮಲಗಬೇಕು ಅನ್ನಿಸುವಷ್ಟರ ಮಟ್ಟಿಗೆ ಶೂಟಿಂಗ್ ನಡೆಯುತ್ತಿತ್ತು ಎಂದಿದ್ದಾರೆ.

ನವಾಜುದ್ದೀನ್, 'ಅವರು ಕೇವಲ 3 ಗಂಟೆಗಳ ಕಾಲ ಮೇಕಪ್‌ನಲ್ಲಿ ಕಳೆಯುತ್ತಿದ್ದರಂತೆ. ಮೇಕಪ್ ಮಾಡಿದ ತಕ್ಷಣ ಅವರೇ ಬದಲಾವಣೆ ಅನುಭವಿಸುತ್ತಿದ್ದರಂತೆ. ನನ್ನ ನಡಿಗೆಯಲ್ಲಿ ಸಾಕಷ್ಟು ಮೃದುತ್ವವಿತ್ತು, ನಾನು ಮೃದುವಾದ ಒಳ ಉಡುಪುಗಳನ್ನು ಧರಿಸುತ್ತಿದ್ದೆ. ಚಿತ್ರದಲ್ಲಿ ನಾನು ಮಹಿಳೆಯರ ಹಾಗೆ ಸೀರೆ ಉಟ್ಟಿದ್ದೇನೆ. ನಾನು ಪೆಟ್ಟಿಕೋಟ್‌ಗಳಂತಹ ಒಳ ಉಡುಪುಗಳನ್ನು ಹೊಂದಿದ್ದೆ. ನಾನು ನನ್ನನ್ನು ಬದಲಾಯಿಸಿಕೊಳ್ಳಲು ಬಯಸಿದ್ದೆ ಮತ್ತು ಇನ್ನು ಮುಂದೆ ನವಾಜ್ ಆಗಲು ಬಯಸುವುದಿಲ್ಲ. ಆಲೋಚನೆಯೂ ಬದಲಾಗಬೇಕು ಎಂದಿದ್ದಾರೆ.

ಇದನ್ನೂ ಓದಿ: 8 ತಿಂಗಳ ಗರ್ಭಿಣಿಯಾಗಿರುವ ರಾಮ್ ಚರಣ್ ಪತ್ನಿಉಪಾಸನಾ, ಅಂದು ತನಗೆ ಮಗು ಬೇಡ ಎಂದಿದ್ಯಾಕೆ ?  

'ಹಡ್ಡಿ' ಜೊತೆಗೆ, ನವಾಜುದ್ದೀನ್ ಅವರ ಚಿತ್ರ ಟಿಕು ವೆಡ್ಸ್ ಶೇರು ಕೂಡ ಈ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ಹೊರತಾಗಿ ಕಿರುತೆರೆ ನಟಿ ಅವನೀತ್ ಕೌರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಈ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಬಹಿರಂಗವಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News