ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಸೊಸೆ, ರಾಮ್ ಚರಣ್ ಪತ್ನಿ ಉಪಾಸನಾ ಗರ್ಭ ಧರಿಸಿರುವುದೇ ಗೊತ್ತೆ ಇದೆ. 8 ತಿಂಗಳ ಗರ್ಭಿಣಿಯಾಗಿರುವ ರಾಮ್ ಚರಣ್ ಪತ್ನಿ ಉಪಾಸನಾ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದಕ್ಕೂ ಮೊದಲು ಕಳೆದ ಮಗು ಬೇಡ ಎಂದ್ದರು.
ಮದುವೆಯಾಗಿ 10 ವರ್ಷಗಳದರೂ ದಂಪತಿಗಳು ಮಗು ಹೊಂದಲು ತಯಾರಿರಲಿಲ್ಲ. ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗಿನ ಕಾರ್ಯಕ್ರಮವೊಂದರಲ್ಲಿ ಉಪಾಸನಾ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂತಾನೋತ್ಪತ್ತಿ ಮತ್ತು ಜೀವನದ ಬಗ್ಗೆ ಮಾತಾನಾಡುವಾಗ ಜನಸಂಖ್ಯೆ ನಿಯಂತ್ರಣದ ಕಾರಣದಿಂದ ತನಗೆ ಮಗು ಬೇಡ ಎಂದು ಉಪಾಸನಾ ಹೇಳಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.
ಇದನ್ನೂ ಓದಿ: Bad Manners Movie: ಬ್ಯಾಡ್‌ಮ್ಯಾನರ್ಸ್ ಸಿನಿಮಾದ ಯಂಗ್ ರೆಬೆಲ್ ಸ್ಟಾರ್ ಪೊಲೀಸ್ ಲುಕ್ ಗೆ ಫ್ಯಾನ್ಸ್ ಫುಲ್ ಖುಷ್...!
ಸದ್ಗುರುಗಳ ಕಾರ್ಯಕ್ರಮವೊಂದರಲ್ಲಿ ಉಪಾಸನಾ, 'ನಾನು ನನ್ನ ಜೀವನದಲ್ಲಿ ತುಂಬಾ ಸಂತೋಷವಾಗಿದ್ದೇನೆ ಮತ್ತು ನನ್ನ ಕುಟುಂಬವನ್ನು ನಾನು ತುಂಬಾ ಪ್ರೀತಿಸುತ್ತೇನೆ' ಎಂದು ಹೇಳಿದ್ದರು.
ಇದನ್ನು ಆಲಿಸಿದ ಸದ್ಗುರು ಅದು ತಪ್ಪು ಕಲ್ಪನೆ , ಜನಸಂಖ್ಯೆ ನಿಯಂತ್ರಣ ಬೇರೆ ದಾಂಪತ್ಯ ಜೀವನ ಬೇರೆ ಎಂದು, ರಾಮ್ ಚರಣ್ ದಂಪತಿಗಳಿಗೆ ನೀವು ಮಗುವನ್ನು ಹೊಂದದಿದ್ದರೆ ನಾನು ನಿಮಗೆ ಪ್ರಶಸ್ತಿಯನ್ನು ನೀಡುತ್ತೇನೆ ಎಂದು ಹೇಳಿದ್ರು. ನಾನು ಹಿಂದೆ ಈ ರೀತಿ ಅನೇಕ ಮಹಿಳೆಯರಿಗೆ ಪ್ರಶಸ್ತಿಯನ್ನು ಘೋಷಿಸಿದ್ದೇನೆ. ಇದು ನೀವು ಮಾಡಬಹುದಾದ ಅತ್ಯಂತ ದೊಡ್ಡ ಸೇವೆಯಾಗಿದೆ ಎಂದಿದ್ದರು.
ಇದನ್ನೂ ಓದಿ: National Crush: ಬಿಕಿನಿ ಧರಿಸಿದ 'ನ್ಯಾಷನಲ್ ಕ್ರಶ್ ಮೃಣಾಲ್ ನೆಟ್ಟಿಗರಿಂದ ಫುಲ್ ಟ್ರೋಲ್!
ಮತ್ತೊಂದು ಸಂದರ್ಶನದಲ್ಲಿ ಉಪಾಸನಾ, 'ನನಗೆ ತಾಯಿಯಾಗಲು ಭಯವಾಗಿದೆ. ಆದರೆ ನನ್ನ ಸ್ನೇಹಿತರು ನನಗೆ ಉತ್ತಮ ಉದಾಹರಣೆಯಾಗಿದ್ದಾರೆ. ಮತ್ತು ಈಗ ನಾನು ನನ್ನದೇ ಆದ ಕೆಲ ಸಂಶೋಧನೆಯನ್ನು ಮಾಡಿದ್ದೇನೆ ಎಂದು ಹೇಳಿದ್ರು.
ಅಷ್ಟೇ ಅಲ್ಲದೇ ರಾಮ್ ಚರಣ್, ಉಪಾಸನಾ ದಂಪತಿ ಇಲ್ಲಿವರೆಗೆ ಮಗುವನ್ನು ಹೊಂದದಿರಲು ಇಬ್ಬರ ವೃತ್ತಿಯೂ ಕಾರಣವಾಗಿತ್ತು. ಯಾವಾಗ ಆರ್ಥಿಕವಾಗಿ ಸದೃಢರಾಗುತ್ತೇವೋ, ಆಗ ಮಗುವನ್ನು ಪ್ಲಾನ್ ಮಾಡೋಣ ಎಂದು ಇಬ್ಬರೂ ಭಾವಿಸಿದ್ದರಂತೆ. ಈಗ ಮಗುವನ್ನು ಸ್ವಾಗತಿಸಲು ಇಡೀ ಕುಟುಂಬವೇ ಸಜ್ಜಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.