Drug Smuggler ರಾಹಿಲ್ ವಿಶ್ರಾಮ್ ಬಂಧನ, Bollywoodನ ಖ್ಯಾತನಾಮರ ಜೊತೆಗೆ ಡೈರೆಕ್ಟ್ ಲಿಂಕ್

ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಆಂಗಲ್ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮೂರು ಕಳ್ಳಸಾಗಣೆ ಗ್ಯಾಂಗ್‌ಗಳನ್ನು ಬಹಿರಂಗಪಡಿಸಿದೆ. ಇದರೊಂದಿಗೆ ಕಳ್ಳಸಾಗಣೆದಾರ ರಾಹಿಲ್ ವಿಶ್ರಾಮ್ ನನ್ನು ಕೂಡ ಬಂಧಿಸಲಾಗಿದೆ.

Last Updated : Sep 18, 2020, 11:52 AM IST
  • NCB ಅಧಿಕಾರಿಗಳಿಂದ ಮೂರು ಡ್ರಗ್ಸ್ ಕಳ್ಳಸಾಗಾಣಿಕೆ ಗ್ಯಾಂಗ್ ಬಹಿರಂಗ.
  • ರಿಯಾ ಚಕ್ರವರ್ತಿ ಹಾಗೂ ಅನುಜ್ ಕೆಸ್ವಾನಿ ಜೊತೆಗೆ ನೇರ ಸಂಪರ್ಕ ಹೊಂದಿದ ರಾಹಿಲ್ ವಿಶ್ರಾಮ್ ಬಂಧನ.
  • ಬಾಲಿವುಡ್ ನ ಹಲವು ಖ್ಯಾತನಾಮರ ಜೊತೆಗೆ ನೇರ ಸಂಪರ್ಕ ಹೊಂದಿದ ಆರೋಪ.
Drug Smuggler ರಾಹಿಲ್ ವಿಶ್ರಾಮ್ ಬಂಧನ, Bollywoodನ ಖ್ಯಾತನಾಮರ ಜೊತೆಗೆ ಡೈರೆಕ್ಟ್ ಲಿಂಕ್  title=

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಆಂಗಲ್ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮೂರು ಕಳ್ಳಸಾಗಣೆ ಗ್ಯಾಂಗ್‌ಗಳನ್ನು ಬಹಿರಂಗಪಡಿಸಿದೆ. ಇದರೊಂದಿಗೆ ಕಳ್ಳಸಾಗಣೆದಾರ ರಾಹಿಲ್ ವಿಶ್ರಾಮ್ ನನ್ನು ಕೂಡ ಬಂಧಿಸಲಾಗಿದೆ. ಆತನ ಬಳಿಯಿಂದ 1 ಕೆ.ಜಿ ಹೈ ಕ್ವಾಲಿಟಿ ಮಾದಕ ಪದಾರ್ಥ ಹಾಗೂ 4 ಲಕ್ಷ ರೂ.ಕ್ಯಾಶ್ ವಶಕ್ಕೆ ಪಡೆಯಲಾಗಿದೆ. ಈತ ಶೋವಿಕ್ ಹಾಗೂ ಕೈಜಾನ್ ಇಬ್ರಾಹಿಂನೊಂದಿಗೂ ಕೂಡ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ

Also Read- Sara Ali Khan ನಿಂದ ಹಲವು ಬಾರಿ ಡ್ರಗ್ಸ್ ಪಡೆದಿದ್ದಾಳಂತೆ ರಿಯಾ ಚಕ್ರವರ್ತಿ

ಮೂಲಗಳು ನೀಡಿರುವ ಮಾಹಿತ  ಪ್ರಕಾರ, ರಾಹಿಲ್ ವಿಶ್ರಾಂ ರಿಯಾ ಚಕ್ರವರ್ತಿ (Rhea Chakraborty) ಮತ್ತು ಅನುಜ್ ಕೇಸ್ವಾನಿ ಅವರೊಂದಿಗೆ ನೇರ ಸಂಬಂಧವನ್ನು ಹೊಂದಿದ್ದ ಮತ್ತು ಡ್ರಗ್ಸ್ ತೆಗೆದುಕೊಳ್ಳುವ ಅನೇಕ ದೊಡ್ಡ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ರಾಹುಲ್ ವಿಶ್ರಾಮ್ ನನ್ನು ಸುಶಾಂತ್ ಸಿಂಗ್ ರಾಜ್ಪುತ್ ಪ್ರಕರಣದ ನೇರ ಸಂಪರ್ಕ ಎಂದೇ ಹೇಳಲಾಗುತ್ತಿದೆ. ಅವನಿಂದ 'ಮನಲಾ ಕ್ರೀಮ್' ಹೆಸರಿನ ಒಂದು ಕಿಲೋ ದುಬಾರಿ ಡ್ರಗ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಎನ್‌ಸಿಬಿ ಮತ್ತೊಬ್ಬ ಡ್ರಗ್ ಪ್ಯಾಡ್ಲರ್ ತಲ್ವಾರ್ ನನ್ನು ಕೂಡ ಬಂಧಿಸಿದೆ.  ಡ್ರಗ್ಸ್ ಪ್ರಕರಣದಲ್ಲಿ ಇವರುಗಳು ಪ್ರಮುಖ ಮಾಹಿತಿ ಬಹಿರಂಗಪಡಿಸುವ ನಿರೀಕ್ಷೆ ಇದೆ.

Also Read- Sara Ali Khanಗೆ ಡ್ರಗ್ಸ್ ತಲುಪಿಸಿದವನ ಹೇಳಿಕೆಯ ಬಳಿಕ ಡ್ರಗ್ಸ್ ಪೆಡ್ಲರ್ KG ಬಂಧನ

ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಇಂದು NCB ಅಧಿಕಾರಿಗಳು ಶ್ರುತಿ ಮೋದಿ ಹಾಗೂ ಜಯಾ ಸಾಹಾ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಡ್ರಗ್ಸ್ ಪ್ರಕರಣದಲ್ಲಿ ಮತ್ತೆ ಹಲವರನ್ನು ಬಂಧಿಸುವ ಸಾಧ್ಯತೆ ಕೂಡ ಇದೆ. ಶ್ರುತಿ ಮೋದಿ ಸುಶಾಂತ್ ಸಿಂಗ್ ರಾಜ್ಪುತ್ ಅವರ ಮಾಜಿ ಮ್ಯಾನೇಜರ್ ಆಗಿದ್ದಾರೆ. ED ತನಿಖೆಯ ವೇಳೆಯೂ ಕೂಡ ಶ್ರುತಿ ಮೋದಿ ಹಾಗೂ ಜಯಾ ಸಹಾ ಅವರ ಹೆಸರು ಕೇಳಿಬಂದಿತ್ತು. ED ತನಿಖೆಯಲ್ಲಿ ರಿಯಾ ಚಕ್ರವರ್ತಿ ಹಾಗೂ ಜಯಾ ಸಹಾ ಅವರ ಡ್ರಗ್ಸ್ ಗೆ ಸಂಬಂಧಿಸಿದ ಚಾಟ್ ಕೂಡ ಪತ್ತೆಯಾಗಿದ್ದವು.

Also Read- Sushant Singh Rajput ತನ್ನ ವೃತ್ತಿ ಜೀವನದಲ್ಲಿ ಮಾಡಿದ ಒಟ್ಟು ಗಳಿಕೆ ಎಷ್ಟು ಗೊತ್ತಾ?

Trending News