ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಶುಭ ಘಳಿಗೆಯಲ್ಲಿ ಅಶೋಕ್ ಕಡಬ ನಿರ್ದೇಶನದ `ನಿಂಬಿಯಾ ಬನದ ಮ್ಯಾಗ’ ಚಿತ್ರದ ಫಸ್ಟ್ ಲುಕ್ ಟೀಸಲ್ ಬಿಡುಗೆಗೊಂಡಿದೆ. ಅದರಲ್ಲಿ ತೆರೆದುಕೊಂಡ ಸುಂದರ ದೃಷ್ಯಾವಳಿ, ಸಂವೇದನಾಶೀಲ ಕಥೆಯ ಸುಳಿವು ಕಂಡೇ ಪ್ರೇಕ್ಷಕರನೇಕರು ಥ್ರಿಲ್ ಆಗಿದ್ದಾರೆ ಜನಪ್ರಿಯ ಧಾಟಿಯ ಸಿನಿಮಾಗಳ ರಾಟೆಯ ನಡುವೆ, ಆಗಾಗ ಪ್ರೇಕ್ಷಕರು ತಂಗಾಳಿ ತೀಡಿದಂಥಾ ಕಥೆಯನ್ನು ಕನವರಿಸುತ್ತಾರೆ. ಕುಟುಂಬ ಸಮೇತರಾಗಿ ಕೂತು ನಡುವ ಸಂಭ್ರಮವನ್ನು ಎದುರು ನೋಡುತ್ತಾರೆ. ಅದೆಲ್ಲವೂ ನಿಂಬಿಯಾ ಬನಾದ ಮ್ಯಾಗ ಚಿತ್ರದ ಮೂಲಕ ಸಿಗುವ ಭರವಸೆಯೊಂದು ಇದೀಗ ಮೂಡಿಕೊಂಡಿದೆ.
ಇದನ್ನೂ ಓದಿ: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ರನ್ನು ಅನರ್ಹಗೊಳಿಸಿದ ಕರ್ನಾಟಕ ಹೈಕೋರ್ಟ್
ವರನಟ ಡಾ ರಾಜ್ ಕುಮಾರ್ ಅವರ ಮೊಮ್ಮಗ ಶಣ್ಮುಖ ಗೋವಿಂದರಾಜ್ ಈ ಸಿನಿಮಾ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಖಾಸಗೀ ವಲಯದಲ್ಲಿ ಒಂದಷ್ಟು ಕಾಲ ಕಾರ್ಯ ನಿರ್ವಹಿಸುತ್ತಾ, ಅದರ ನಡುವೆಯೇ ನಟನಾಗಬೆಂಕೆಂಬ ಹಂಬಲ ಹೊಂದಿದ್ದವರು ಶಣ್ಮುಖ. ಕಡೆಗೂ ಸೂಕ್ಷ್ಮ ಕಥಾ ಹಂದರದೊಂದಿಗೆ ನಿರ್ದೇಶಕ ಅಶೋಕ್ ಕಡಬ ಶಣ್ಮುಖರ ಕನಸನ್ನು ನನಸು ಮಾಡಿದ್ದಾರೆ. ಈ ಫಸ್ಟ್ ಲುಕ್ ಚದುರಿಕೊಂಡಿರುವ ದೃಷ್ಯಾವಳಿ, ಸಂಭಾಷಣೆಗಳು ಈ ಸಿನಿಮಾ ಮೇಲೆ ಒಂದಷ್ಟು ನಿರೀಕ್ಷೆ ಮೂಡಿಸಿರೋದು ನಿಜ. ಫಸ್ಟ್ ಲುಕ್ ಟೀಸರ್ ಮೂಲಕವೇ ಈ ಸಿನಿಮಾವನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ತಂದು ನಿಲ್ಲಿಸುವಲ್ಲಿ ಅಶೋಕ್ ಕಡಬ ಗೆದ್ದಿದ್ದಾರೆ. ಕಥಾ ನಾಯಕ ಇಪ್ಪತೈದು ವರ್ಷದ ನಂತರ ಮಲೆನಾಡಿನ ಗರ್ಭದಲ್ಲಿರುವ ಬೆಂಗಾಡಿಗೆ ಯಾಕೆ ಬರುತ್ತಾನೆ? ಆ ನಂತರ ಯಾವ ಥರದ ಕಥನ ಬಿಚ್ಚಿಕೊಳ್ಳುತ್ತದೆ ಎಂಬ ಪ್ರಶ್ಮೂಡಿಕೊಂಡಿಎ. ಈ ದಿಕ್ಕಿನಲ್ಲಿ ಪ್ರೇಕ್ಷಕರ ಮನಸಲ್ಲಿಯೇ ಸಂಭಾವ್ಯ ಕಥೆ ಕಾವುಗಟ್ಟಲಾರಂಭಿಸಿದೆ. ಅಷ್ಟರ ಮಟ್ಟಿಗೆ ಈ ಫಸ್ಟ್ ಲುಕ್ ಟೀಸರ್ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ: ಬಿಡದಿ ನಿತ್ಯಾನಂದ ಸ್ಬಾಮಿ ವಿರುದ್ಧ ಪ್ರಕರಣದ ಕುರಿತಂತೆ ರಾಜ್ಯ ಪೊಲೀಸರಿಗೆ ಸ್ಟಷ್ಟನೆ ಕೇಳಿದ ಇಂಟರ್ ಪೊಲ್
ಈಗಾಗಲೇ ಅಣ್ಣಾವ್ರ ಕುಟುಂಬದ ಬಹುತೇಕರು ಈ ಫಸ್ಟ್ ಲುಕ್ ಟೀಸರ್ ಅನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇನ್ನು ಪ್ರೇಕ್ಷಕರ ವಲಯದಿಂದಲೂ ದೊಡ್ಡ ಸಿನಿಮಾಗಳಿಗೆ ಬರುವಂಥಾದ್ದೇ ಪ್ರತಿಕ್ರಿಯೆಗಳು ಬರುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಫಸ್ಟ್ ಲುಕ್ ಟೀಸರ್ ಲಕ್ಷ ವೀಕ್ಷಣೆಯ ಗಡಿ ದಾಟಿಕೊಂಡಿದೆ. ಎಮ್.ಜಿ.ಪಿ.ಎಕ್ಸ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ವಿ. ಮಾದೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ರಾಮಕೃಷ್ಣ, ಉಮೇಶ್, ಶಶಿಧರ ಕೋಟೆ ಮೊದಲಾದ ಘಟಾನುಘಟಿ ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ. ಹಿರಿಯ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪಂಕಜ್ ಕೂಡಾ ಇಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟಿ ಭವ್ಯಾ ಬಹು ಕಾಲದ ನಂತರ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರವೂ ಕೂಡಾ ಕಾಡುವಂತಿದೆಯಂತೆ. ಇನ್ನುಳಿದಂತೆ ಸ್ಟಾರ್ ನಟರೋರ್ವರು ಈ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಆ ನಟ ಯಾರೆಂಬುದೂ ಸೇರಿದಂತೆ ಇನ್ನೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಮುಂದಿನ ದಿನಗಳಲ್ಲಿ ಜಾಹೀರಾಗಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.