ʼದಿಲ್‌ ಪಸಂದ್‌ʼ ಆಗಿ ರಾಮ ರಾಮ ಅಂತ ಮೈಬಳುಕಿಸಿದ ರೂಪಸಿ ನಿಶ್ವಿಕಾ..!

ʼಗುರು ಶಿಷ್ಯರʼ ಬಳಿಕ ನಿಶ್ವಿಕಾ ನಾಯ್ಡು ಕನ್ನಡಿಗರ ʼದಿಲ್‌ ಪಂಸದ್‌ʼ ಮಾಡಲು ಸಿದ್ದರಾಗಿದ್ದಾರೆ. ಡಾರ್ಲಿಂಗ್‌ ಕೃಷ್ಣ ಅವರಿಗೆ ಜೊತೆಯಾಗಿ ತೆರೆ ಮೇಲೆ ಮೋಡಿ ಮಾಡಲು ನಿಶ್ವಿಕಾ ರೆಡಿಯಾಗಿದ್ದಾರೆ. ಇನ್ನು ಇತ್ತೀಚಿಗೆ ಬಿಡುಗಡೆಯಾದ ಸಿನಿಮಾದ ʼರಾಮ ರಾಮʼ ಹಾಡು ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿದೆ. ಸದ್ಯ ಅದೇ ಹಾಡಿಗೆ ಡಾನ್ಸ್‌ ಮಾಡಿರುವ ವಿಡಿಯೋ ಒಂದನ್ನು ನಿಶ್ವಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫ್ಯಾನ್ಸ್‌ಗಳಿಗೂ ಸಹ ಹೆಜ್ಜೆ ಹಾಕುವಂತೆ ಹೇಳಿದ್ದಾರೆ.

Written by - Krishna N K | Last Updated : Oct 18, 2022, 03:44 PM IST
  • ʼಗುರು ಶಿಷ್ಯರʼ ಬಳಿಕ ನಿಶ್ವಿಕಾ ನಾಯ್ಡು ಕನ್ನಡಿಗರ ʼದಿಲ್‌ ಪಂಸದ್‌ʼ ಮಾಡಲು ಸಿದ್ದರಾಗಿದ್ದಾರೆ
  • ಡಾರ್ಲಿಂಗ್‌ ಕೃಷ್ಣ ಅವರಿಗೆ ಜೊತೆಯಾಗಿ ತೆರೆ ಮೇಲೆ ಮೋಡಿ ಮಾಡಲು ನಿಶ್ವಿಕಾ ರೆಡಿಯಾಗಿದ್ದಾರೆ
  • ರಾಮ ರಾಮ ಹಾಡಿಗೆ ರೀಲ್ಸ್‌ ಮಾಡಿರುವ ನಿಶ್ವಿಕಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ʼದಿಲ್‌ ಪಸಂದ್‌ʼ ಆಗಿ ರಾಮ ರಾಮ ಅಂತ ಮೈಬಳುಕಿಸಿದ ರೂಪಸಿ ನಿಶ್ವಿಕಾ..! title=

ಬೆಂಗಳೂರು : ʼಗುರು ಶಿಷ್ಯರʼ ಬಳಿಕ ನಿಶ್ವಿಕಾ ನಾಯ್ಡು ಕನ್ನಡಿಗರ ʼದಿಲ್‌ ಪಂಸದ್‌ʼ ಮಾಡಲು ಸಿದ್ದರಾಗಿದ್ದಾರೆ. ಡಾರ್ಲಿಂಗ್‌ ಕೃಷ್ಣ ಅವರಿಗೆ ಜೊತೆಯಾಗಿ ತೆರೆ ಮೇಲೆ ಮೋಡಿ ಮಾಡಲು ನಿಶ್ವಿಕಾ ರೆಡಿಯಾಗಿದ್ದಾರೆ. ಇನ್ನು ಇತ್ತೀಚಿಗೆ ಬಿಡುಗಡೆಯಾದ ಸಿನಿಮಾದ ʼರಾಮ ರಾಮʼ ಹಾಡು ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿದೆ. ಸದ್ಯ ಅದೇ ಹಾಡಿಗೆ ಡಾನ್ಸ್‌ ಮಾಡಿರುವ ವಿಡಿಯೋ ಒಂದನ್ನು ನಿಶ್ವಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫ್ಯಾನ್ಸ್‌ಗಳಿಗೂ ಸಹ ಹೆಜ್ಜೆ ಹಾಕುವಂತೆ ಹೇಳಿದ್ದಾರೆ.

ಈಗಾಗಲೇ ದಿಪ್‌ ಪಂಸದ್‌ ಟೀಸರ್‌ ಬಿಡುಗಡೆಯಾಗಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಚಿತ್ರ ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ಖ್ಯಾತ ಗಾಯಕಿ ಮಂಗ್ಲಿ ಹಾಡಿರುವ ಸಂಗೀತ ಮಾಂತ್ರಿಕ ಅರ್ಜುನ್‌ ಜನ್ಯ ಅವರ ʼರಾಮ ರಾಮʼ ಹಾಡು ಯ್ಯೂಟೂಬ್‌ನಲ್ಲಿ ಟ್ರೆಂಡ್‌ ಕ್ರಿಯೆಟ್‌ ಮಾಡುತ್ತಿದೆ. ಅಲ್ಲದೆ, ರಾಮ ರಾಮ ಹಾಡಿಗೆ ರೀಲ್ಸ್‌ ಮಾಡಿರುವ ನಿಶ್ವಿಕಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ : ಎಂಪಿ ಅಂದ್ರೆ ಅಧಿಕಾರಿಗಳಿಗೆ ಲೆಕ್ಕಾ ಇಲ್ಲ : ಕಿಡಿಕಾರಿದ ಸಂಸದೆ ಸುಮಲತಾ

 
 
 
 

 
 
 
 
 
 
 
 
 
 
 

A post shared by Nishvika N (@nishvika_)

ʼದಿಲ್‌ ಪಂಸದ್‌ʼ ಚಿತ್ರದ ನಾಲ್ಕು ಸುಮಧುರ ಹಾಡುಗಳಿಗೆ ಮ್ಯೂಸಿಕ್ ‌ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಸಿನಿಮಾದಲ್ಲಿ ನಟ ಡಾರ್ಲಿಂಗ್‌ ಕೃಷ್ಣಗೆ ಜೊತೆಯಾಗಿ ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News