ಬೆಂಗಳೂರು: ಇತ್ತೀಚೀನ ದಿನಗಳಲ್ಲಿ ರಕ್ಷಿತ್ ಶೆಟ್ಟಿ, ರಿಶಬ್ ಶೆಟ್ಟಿ ಸಿನಿಮಾ ಎಂದರೆ ಜನರಿಗೆ ಅಚ್ಚುಮೆಚ್ಚು ಅದೆನೋ ಗೊತ್ತಿಲ್ಲ.. ಶೆಟ್ಟಿ ನಟರ ಗ್ಯಾಂಗ್ ಕನ್ನಡ ಸಿನಿಮಾ ರಂಗದಲ್ಲಿ ಟ್ರೇಂಡ್ ಕ್ರಿಯೆಟ್ ಮಾಡಿದ್ದಾರೆ.
ಹೌದು, ಕಡಲ ತೀರದ ಊರಾಗಿರುವ ಮಂಗಳೂರು ಎಂದರೆ ಸೊಬಗಿನ ಊರು ಆಗಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಈ ಸೊಬಗಿನ ಊರಿನಿಂದ ಅನೇಕ ಕಲಾವಿದರನ್ನು ಕನ್ನಡ ಸಿನಿಮಾ ರಂಗಕ್ಕೆ ಉಡುಗೊರೆಯಾಗಿ ನೀಡಿದೆ.
ಇದನ್ನೂ ಓದಿ: Alia Bhatt: ಕನ್ಪೂಸ್ ಆಗ್ಬೇಡಿ ಇದು ಐಶ್ವರ್ಯಾ ರೈ ಅಲ್ಲ.. ಆಲಿಯಾ ಭಟ್ ! ಏನಿದು ಅಸಲಿ ಕಥೆ..
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟರಾಗಿರುವ ರಿಷಬ್, ರಕ್ಷಿತ್ ಮತ್ತು ರಾಜ್ ಬಿ ಶೆಟ್ಟಿ ಕರಾವಳಿಯ ಅಪ್ಪಟ ಪ್ರತಿಭೆಗಳು. ಇವರ ಸಾಲಿನಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ, ಶೈನ್ ಶೆಟ್ಟಿ ಇದೀಗ ರೋಪೇಶ್ ಶೆಟ್ಟಿ ಸೇರಿಕೊಂಡಿದ್ದಾರೆ. ಈ ಮೂವರಿಗೂ ಯಾವುದೇ ಸಿನಿಮಾ ಬ್ಯಾಗ್ರೌಂಡ್ ಇಲ್ಲ. ಆದರೂ ಕೂಡ ತಮ್ಮ ಪ್ರತಿಭೆಯಿಂದಲೇ ಇಂದು ಉನ್ನತ ಸ್ಥಾನಕ್ಕೆ ಬಂದಿದ್ದಾರೆ.
ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ರಿಷಭ್ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಕಾಂತಾರ ರಾಜ , ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: The Kerala Movie: ದಿ ಕೇರಳ ಸಿನಿಮಾ ಇಷ್ಟವಾದರೇ ಅದುವೇ ನಮಗೆ ದೊಡ್ಡ ಬಹುಮಾನ - ನಿರ್ದೇಶಕ ಸುದೀಪ್ತೋ ಸೇನ್
ಇವರ ಪ್ರತಿ ಸಿನಿಮಾದಲ್ಲೂ ಒಂದೂ ವಿಶೇಷತೆ ಇದ್ದೆ ಇರುತ್ತದೆ. ರಕ್ಷಿತ್ ಶೆಟ್ಟಿ ಅಭಿನಯದ ರಿಕ್ಕಿ , ಕಿರಿಕ್ ಪಾರ್ಟಿ , ಮಂಗಳೂರು ಕೇರಳ ಗಡಿಯಾಗಿರುವ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಕುರಿತು ಇವರು ನಿರ್ದೇಶಿಸಿದ ಚಿತ್ರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ವಿಮರ್ಶಕರಿಂದ ವ್ಯಾಪಕ ಮನ್ನಣೆ ಪಡೆಯಿತು. ಬೆಲ್ ಬಾಟಮ್ ನಿರ್ದೇಶಿಸಿದ್ದಾರೆ. ಇದೀಗ ಕಾಂತಾರಾ ಸಿನಿಮಾ ಮೂಲಕ ರಿಷಬ್ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ...
ಮತ್ತೊರ್ವ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿ 2017ರಲ್ಲಿ ತೆರೆಕಂಡ `ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಕಥಾಸಂಗಮ, ಮಾಯಾಬಜಾರ್ , ಗರುಡ ಗಮನ ವೃಷಭ ವಾಹನ ಸಿನಿಮಾ, ನಿರ್ದೇಶಿಸಿ ಮನ ಗೆದ್ದರು.
ಇವರ ಸಾಲಿಗೆ ಸೇರುವ ರಕ್ಷಿತ್ ಶೆಟ್ಟಿ 2010ರಲ್ಲಿ ತೆರೆಕಂಡ `ನಮ್ ಏರಿಯಾದಲ್ಲೊಂದು ದಿನ' ಚಿತ್ರದ ಮೂಲಕ ಸಿನಿಪ್ರವೇಶ ಮಾಡಿದರು. ಬಳಿಕ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ. ನಂತರ ಇವರು `ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ಅದುವರೆಗೆ ಕೇವಲ ಎಂಡು ಚಿತ್ರಗಳಲ್ಲಿ ನಟಿಸಿದ್ದರೂ ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ರಕ್ಷಿತ್ ಕನ್ನಡದ ಭರವಸೆಯ ನಟ ಮತ್ತು ನಿರ್ದೇಶಕರಾಗಿ ಹೊರಹೊಮ್ಮಿದ್ದರು. ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ, `ಹಂಬಲ್ ಪೊಲಿಟಿಶನ್ ನೊಗರಾಜ್', 777 ಚಾರ್ಲಿ ಚಿತ್ರಗಳಲ್ಲಿ ನಿರ್ಮಿಸಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.
ಇನ್ನುಳಿದಂತೆ ರಿಯಾಲಿಟಿ ಶೋ ಮೂಲಕ ಮನೆಮತಾದ ಶೆಟ್ಟಿ ಹವಾ...
ಕನ್ನಡ ಚಿತ್ರರಂಗದ ಪ್ರಸಿದ್ಧ ಗಾಯಕ, ಸಂಗೀತ ನಿರ್ದೇಶಕ ಮತ್ತು ಗೀತರಚನಾಕಾರರಾಗಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ, 2017-18ರಲ್ಲಿ ನಡೆದಿದ್ದ ಬಿಗ್ ಬಾಸ್ ಸೀಸನ್ 5ರಲ್ಲಿ ಚಂದನ್ ಶೆಟ್ಟಿ ವಿಜೇತರಾಗಿದ್ದರು. 3 ಪೆಗ್ ಸಾಂಗ್ ಮೂಲಕ ಖ್ಯಾತಿ ಹೊಂದಿದ್ದ ಇವರು, ಬಿಗ್ ಬಾಸ್ ಮನೆ ಸೇರಿ ಮತ್ತಷ್ಟು ಫೇಮಸ್ ಆದರು.
ಇದನ್ನೂ ಓದಿ: Actor Prem: ಪತಿಯ ಕನಸಿಗಾಗಿ ತಾಳಿ ಅಡ ಇಟ್ಟ ನಟ ಪ್ರೇಮ್ ಪತ್ನಿ!
ಇವರ ಸಾಲಿನಲ್ಲಿ ಶೈನ್ ಶೆಟ್ಟಿ ಮೂಲತಃ ಕುಂದಾಪುರದವರಾದ `ಲಕ್ಷ್ಮೀ ಬಾರಮ್ಮ' ಸೀರಿಯಲ್ ನಲ್ಲಿ ಚಂದು ಪಾತ್ರ ಮಾಡಿ ಮನಗೆದ್ದರು. ಬಳಿಕ ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದ್ದ ಶೈನ್ ಶೆಟ್ಟಿ ಗೆಲುವು ತಮ್ಮದಾಗಿಸಿಕೊಂಡರು.
ಮತ್ತೊರ್ವ ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕಿ, ಗಾಯಕ ಮತ್ತು ಮಾಡೆಲ್ ಆಗಿರುವ ರೂಪೇಶ್ ಶೆಟ್ಟಿ, ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿಗ್ ಬಾಸ್ ಕನ್ನಡ ಸೀಸನ್ 9ಗೆ ಎಂಟ್ರಿಕೊಟ್ಟ ರೂಪೇಶ್ ಶೆಟ್ಟಿ, ಬಿಗ್ ಬಾಸ್ ವಿನ್ನರ್ ಆಗಿ ಹೊರ ಹೊಮ್ಮಿದ್ದರು. ಸದ್ಯ ರೂಪೇಶ್ ತಮಿಳಿನ ಅತ್ಯಂತ ಪ್ರಸಿದ್ಧಿ ಹೊಂದಿರುವ ಕೊಲವೆರಿ ಡಿ ಎಂಬ ಹಾಡನ್ನು ಪುನರ್ ನಿರ್ದೇಶಿಸಿ ಹಾಡಿದ್ದಾರೆ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.