BBK 9: ಬಿಗ್ ಬಾಸ್ ಮನೆಯಲ್ಲಿ ಓಪನ್ ನಾಮಿನೇಷನ್! ಸಾನ್ಯಾ ನೇರ ನಾಮಿನೇಟ್ ಆಗಿದ್ಯಾಕೆ?

BBK 9 nomination : ಬಿಗ್ ಬಾಸ್‌ ಮನೆಯಲ್ಲಿ ನಾಲ್ಕನೇ ವಾರ ಆರಂಭವಾಗಿದೆ. ಈ ವಾರದ ನಾಮಿನೇಷನ್‌ ಪ್ರಕ್ರಿಯೆ ನಿನ್ನೆ ನಡೆದಿದ್ದು, ಸಖತ್‌ ಮಜವಾಗಿತ್ತು. 

Written by - Chetana Devarmani | Last Updated : Oct 18, 2022, 10:55 AM IST
  • ಬಿಗ್ ಬಾಸ್ ಮನೆಯಲ್ಲಿ ಓಪನ್ ನಾಮಿನೇಷನ್!
  • ಸಾನ್ಯಾ ನೇರ ನಾಮಿನೇಟ್ ಆಗಿದ್ಯಾಕೆ?
  • ಡಿಫರೆಂಟ್‌ ಆಗಿತ್ತು ಓಪನ್‌ ನಾಮಿನೇಷನ್‌ ಪ್ರಕ್ರಿಯೆ
BBK 9: ಬಿಗ್ ಬಾಸ್ ಮನೆಯಲ್ಲಿ ಓಪನ್ ನಾಮಿನೇಷನ್! ಸಾನ್ಯಾ ನೇರ ನಾಮಿನೇಟ್ ಆಗಿದ್ಯಾಕೆ? title=
ಸಾನ್ಯಾ

Bigg Boss Kannada 9 nomination : ಬಿಗ್ ಬಾಸ್‌ ಮನೆಯಲ್ಲಿ ನಾಲ್ಕನೇ ವಾರ ಆರಂಭವಾಗಿದೆ. ಈ ವಾರದ ನಾಮಿನೇಷನ್‌ ಪ್ರಕ್ರಿಯೆ ನಿನ್ನೆ ನಡೆದಿದ್ದು, ಸಖತ್‌ ಮಜವಾಗಿತ್ತು. ಪ್ರತಿ ಬಾರಿ ಕನ್ಫೆಷನ್‌ ರೂಮ್‌ಗೆ ಕರೆದು ನಾಮಿನೇಟ್‌ ಮಾಡಲು ಇಚ್ಛಿಸುವ ಇಬ್ಬರ ಹೆಸರನ್ನು ಸೂಕ್ತ ಕಾರಣಗಳೊಂದಿಗೆ ತಿಳಿಸುವಂತೆ ಬಿಗ್‌ ಬಾಸ್ ಹೇಳುತ್ತಿದ್ದರು.‌ ಆದರೆ ಈ ವಾರ ಸ್ವಲ್ಪ ಡಿಫರೆಂಟ್‌ ಆಗಿ ಓಪನ್‌ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಈ ಓಪನ್‌ ನಾಮಿನೇಷನ್‌ ನಡೆಯುವಾಗ ಅರುಣ್ ಸಾಗರ್ ತಮ್ಮದೇ ದಾಟಿಯಲ್ಲಿ ಎಂಟರಟೈನ್ ಮಾಡಿದ್ದು ನೋಡುಗರ ಗಮನ ಸೆಳೆದಿದೆ. 

ಇದನ್ನೂ ಓದಿ : ‘ಬಿಗ್ ಬಾಸ್’ ಅನುಪಮಾ ಪರ ಇದೆ; ಫಿಕ್ಸಿಂಗ್ ಆರೋಪ ಮಾಡಿದ ಆರ್ಯವರ್ಧನ್ ಗೆ ‘ಕಿಚ್ಚ’ನ ಕ್ಲಾಸ್!

ಓಪನ್ ನಾಮಿನೇಷನ್​ ನಲ್ಲಿ ಅತಿ ಹೆಚ್ಚು ಆರ್ಯವರ್ಧನ್ ಅವರ ಹೆಸರೇ ಕೇಳಿ ಬಂದಿತು. ಹಲವರು ಕಿಚ್ಚನ ಪಂಚಾಯ್ತಿ ವೇಳೆ ಆರ್ಯವರ್ಧನ್ ಮಾತನಾಡಿದ ರೀತಿಯೇ ಈ ನಾಮಿನೇಷನ್‌ಗೆ ಕಾರಣ ಎಂದು ತಿಳಿಸಿದರು. ಇನ್ನೂ ಮಯೂರಿ ಹಾಗೂ ನೇಹಾ ಹೆಸರನ್ನು ಕೂಡ ಹೆಚ್ಚು ಜನ ತೆಗೆದುಕೊಂಡರು. ಹೀಗೆ ಓಪನ್‌ ನಾಮಿನೇಷನ್‌ನಲ್ಲಿ ಒಟ್ಟು 6 ಜನರು ನಾಮಿನೇಟ್‌ ಆಗಿದ್ದಾರೆ. ಬಳಿಕ ಈ ವಾರದ ಕ್ಯಾಪ್ಟನ್ ದೀಪಿಕಾ ದಾಸ್ ನೇರವಾಗಿ ಒಬ್ಬರನ್ನು ನಾಮಿನೇಟ್‌ ಮಾಡಿದರು. ಅಲ್ಲದೇ ದರ್ಶ್‌ ಮನೆಯಿಂದ ಹೊರ ಹೋಗುವಾಗ ರೂಪೇಶ್‌ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರಿಂದ ಒಟ್ಟಾರೆ 8 ಜನರು ಈ ವಾರ ನಾಮಿನೇಟ್ ಆಗಿದ್ದಾರೆ. 

 

 

ಓಪನ್ ನಾಮಿನೇಷನ್​ ನಲ್ಲಿ ಅತಿ ಹೆಚ್ಚು ಎಂಜಾಯ್ ಮಾಡುತ್ತ, ಮನೆಯವರನ್ನು ನಗೆಗಡಲಲ್ಲಿ ತೇಲಿಸಿದ್ದು ಅರುಣ್ ಸಾಗರ್. ಅರುಣ್ ಸಾಗರ್ ಮನೆಯಲ್ಲಿರೋ ವಸ್ತುಗಳನ್ನ ಇಟ್ಟುಕೊಂಡೇ, ನಾಮಿನೇಟ್ ಆಗುವ ಸದಸ್ಯರಿಗೆ ಕೊಟ್ಟರು. ಇನ್ನೂ ಓಪನ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಾನ್ಯಾ ಅವರ ಹೆಸರನ್ನ ಯಾರೂ ಹೇಳಿರಲಿಲ್ಲ. ಆದರೆ ಈ ವಾರ ಮನೆಯ ಕ್ಯಾಪ್ಟನ್‌ ಆಗಿರುವ ದೀಪಿಕಾ ದಾಸ್‌ ತಮ್ಮ ವಿಶೇಷ ಅಧಿಕಾರದಿಂದ ಸಾನ್ಯಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಸಾನ್ಯಾ ಚೆನ್ನಾಗಿಯೇ ಆಟವನ್ನು ಆಡುತ್ತಿದ್ದಾರೆ. ಆದರೆ ಮತ್ತಷ್ಟು ಚೆನ್ನಾಗಿ ಆಡಬೇಕಿದೆ. ಅವರಲ್ಲಿರೋ ಆ ಪ್ರತಿಭೆ ಇನ್ನೂ ಹೊರಬರಬೇಕು ಎಂದು ಕಾರಣ ನೀಡುತ್ತ ದೀಪಿಕಾ ಸಾನ್ಯಾ ಅವರನ್ನು ನಾಮಿನೇಟ್ ಮಾಡಿದರು. 

ಒಟ್ಟಾರೆ ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಆರ್ಯವರ್ಧನ್, ಕಾವ್ಯಶ್ರೀ, ಮಯೂರಿ, ನೇಹಾ ಗೌಡ, ಪ್ರಶಾಂತ್‌ ಸಂಬರ್ಗಿ, ದಿವ್ಯಾ, ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್ ನಾಮಿನೇಟ್‌ ಆಗಿದ್ದಾರೆ.

ಇದನ್ನೂ ಓದಿ : Bigg Boss : ಆ ಬಿಗ್‌ಬಾಸ್‌ ಸ್ಪರ್ಧಿ ನನ್ನ ಖಾಸಗಿ ಭಾಗದ ಸೈಜ್‌ ಕೇಳಿದ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News