Bollywood : ಗುಟ್ಟಾಗಿ ಎಂಗೇಜ್​ಮೆಂಟ್ ಮಾಡಿಕೊಂಡ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ! ಮದುವೆ ಡೇಟ್‌ ಕೂಡ ಫಿಕ್ಸ್‌?

Parineeti Chopra-Raghav Chadha: ಪರಿಣತಿ ಚೋಪ್ರಾ ಹಾಗೂ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಡ್ಡಾ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದು ಬಾಲಿವುಡ್ ನಟಿ ಹಾಗೂ ಸಂಸದ ಸದ್ಯದಲ್ಲೇ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. 

Written by - Zee Kannada News Desk | Last Updated : Apr 21, 2023, 01:28 PM IST
  • ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಎಂಗೇಜ್​ಮೆಂಟ್
  • ನಟಿ ಹಾಗೂ ಸಂಸದ ಸದ್ಯದಲ್ಲೇ ವಿವಾಹ
  • ಏರ್‌ಪೋರ್ಟ್‌ ಹಾಗೂ ಡಿನ್ನರ್‌ ಪಾರ್ಟಿಯಲ್ಲಿ ಪರಿಣಿತಿ ಹಾಗೂ ರಾಘವ್
Bollywood : ಗುಟ್ಟಾಗಿ ಎಂಗೇಜ್​ಮೆಂಟ್ ಮಾಡಿಕೊಂಡ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ! ಮದುವೆ ಡೇಟ್‌ ಕೂಡ ಫಿಕ್ಸ್‌? title=

ಮುಂಬೈ: ಪರಿಣಿತಿ ಚೋಪ್ರಾ ಹಾಗೂ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಡ್ಡಾ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದು ಬಾಲಿವುಡ್ ನಟಿ ಹಾಗೂ ಸಂಸದ ಸದ್ಯದಲ್ಲೇ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. 

ಬಿ-ಟೌನ್‌ನ ಖ್ಯಾತ ನಟಿ ಸಿನಿಮಾದಿಂದ ಯಶಸ್ಸು ಕಡಿಮೆಗಳಿಸಿದರೂ  ಇವರ  ವೈಯಕ್ತಿ ಜೀವನ ಆಗಾಗ ಚರ್ಚೆಯಲ್ಲಿರುತ್ತದೆ. ಈ ಹಿಂದೆ ನಟಿ ಹಾಗೂ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಏರ್‌ಪೋರ್ಟ್‌ ಹಾಗೂ ಡಿನ್ನರ್‌ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನಿಂದ  ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: Divya Shridhar - Arnaav: "ನನ್ನ ಮಗುವಿನ ಮುಖ ತೋರಿಸು" - ಬಿಕ್ಕಿ ಬಿಕ್ಕಿ ಅತ್ತ ನಟಿ ದಿವ್ಯಾ ಪತಿ

ಇದೀಗ ಗುಟ್ಟಾಗಿ ಎಂಗೇಜ್​ಮೆಂಟ್ ಮಾಡಿಕೊಂಡಿರುವುದು ಬಾರಿ ಅಚ್ಚರಿ ಮೂಡಿಸಿದೆ. ಸದ್ಯ ಮದುವೆ ಡೇಟ್‌ ಕೂಡ ಫಿಕ್ಸ್‌ ಆಗಿದೆ ಎನ್ನಲಾಗುತ್ತಿದೆ. ಮಾಧ್ಯಮ ವರದಿ ಪ್ರಕಾರ ರಾಘವ್ ಚಡ್ಡಾ ಅವರು  ಸಾಂಪ್ರದಾಯಿಕ ರೋಕಾ ಕಾರ್ಯಕ್ರಮದಲ್ಲಿ  ನಟಿಗೆ  ಉಂಗುರ ತೊಡಿಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ ಇವರ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಇನ್ನಷ್ಟೇ ಅನೌನ್ಸ್ ಮಾಡಬೇಕಿದೆ. 

ಇದನ್ನೂ ಓದಿ: Samantha - Varun Dhawan: ಸಮಂತಾ - ವರುಣ್ ಧವನ್ ಲಂಡನ್ ಟ್ರಿಪ್ ಬಲು ಜೋರು!

ಇಬ್ಬರೂ ತಮ್ಮ  ಕೆಲಸದಲ್ಲಿ  ಬ್ಯುಸಿ ಇರುವ ಕಾರಣ ಅಕ್ಟೋಬರ್‌ನಲ್ಲಿ ಮದುವೆಯಾಗಲಿದ್ದಾರೆ. ಇಬ್ಬರೂ ಯುಕೆಯಲ್ಲಿ ಎಕನಾಮಿಕ್ಸ್  ವಿಷಯದಲ್ಲಿ ಪದವಿ ಪಡೆದಿದ್ದಾರೆ ಎನ್ನಲಾಗುತ್ತಿದೆ ಹೀಗಾಗಿ ಇಬ್ಬರ ಆಸಕ್ತಿಯೂ ಒಂದೇ ಆಗಿದೆ. ಇತ್ತಿಚೇಗೆ  ಬಾಲಿವುಡ್ ನಲ್ಲಿ ಹೆಚ್ಚು ವಿವಾಹ ಆಗುತ್ತಿರುವುದು ಕಾಣಬಹುದು.  ಮದುವೆಯ ಸಾಲುಗಳಲ್ಲಿ ಪರಿಣಿತಿ ಸೇರಲಿದ್ದಾರೆಂಬುವುದೇ ಖುಷಿಯ ವಿಚಾರ. 

ಪರಿಣಿತಿ ಅವರ ಸಹೋದರಿ ಪ್ರಿಯಾಂಕಾ ಚೋಪ್ರಾ ಅವರು  ಸದ್ಯದಲ್ಲೇ  ಭಾರತಕ್ಕೆ ಬಂದು ಜಿಯೋ ಮಮಿ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾಗವಹಿಸಿ ಬಳಿಕ ಸಹೋದರಿ ಮದುವೆಯಲ್ಲಿ ಪಾಲ್ಗೊಳ್ಳದ್ದಾರೆ. 

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News