Pathaan : ʼಬಾಹುಬಲಿ 2ʼ ದಾಖಲೆ ಬ್ರೇಕ್‌ ಮಾಡಿದ ಕಿಂಗ್‌ ಖಾನ್‌ ʼಪಠಾಣ್‌ʼ..! 

2017 ರಲ್ಲಿ ರಾಜಮೌಳಿ ನಿರ್ದೇಶಿಸಿದ್ದ ಬಾಹುಬಲಿ 2 ಸಿನಿಮಾ ಭಾರತೀಯ ಸಿನಿಮಾರಂಗದಲ್ಲೇ ದೊಡ್ಡ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಈ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿ ಧಾಖಲೆ ಸೃಷ್ಟಿಸಿತ್ತು. ಅನುಷ್ಕಾ, ಪ್ರಭಾಸ್, ರಾಣಾ ನಟನೆಯ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ಈ ಚಿತ್ರವು ವಿಶ್ವದಾದ್ಯಂತ ವಿಮರ್ಶಕರ ಮೆಚ್ಚುಗೆಗೂ ಸಹ ಪಾತ್ರವಾಗಿತ್ತು. 

Written by - Krishna N K | Last Updated : Mar 5, 2023, 05:37 PM IST
  • 2017 ರಲ್ಲಿ ರಾಜಮೌಳಿ ನಿರ್ದೇಶಿಸಿದ್ದ ಬಾಹುಬಲಿ 2 ಸಿನಿಮಾ ಭಾರತೀಯ ಸಿನಿಮಾರಂಗದಲ್ಲೇ ದೊಡ್ಡ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.
  • ರಾಜಮೌಳಿ 1792 ದಿನಗಳ ನಂತರ ಆರ್‌ಆರ್‌ಆರ್‌ ಸಿನಿಮಾದ ಮೂಲಕ ತಮ್ಮದೇ ಸಿನಿಮಾದ ದಾಖಲೆ ಮುರಿದರು.
  • ಇದೀಗ ಶಾರುಖ್ ಖಾನ್ ನಟನೆಯ ಪಠಾಣ್‌ ಚಿತ್ರ ಬಾಹುಬಲಿ 2 ಹಿಂದಿ ದಾಖಲೆಯನ್ನು ಮುರಿದಿದೆ.
Pathaan : ʼಬಾಹುಬಲಿ 2ʼ ದಾಖಲೆ ಬ್ರೇಕ್‌ ಮಾಡಿದ ಕಿಂಗ್‌ ಖಾನ್‌ ʼಪಠಾಣ್‌ʼ..!  title=

Pathaan box office : 2017 ರಲ್ಲಿ ರಾಜಮೌಳಿ ನಿರ್ದೇಶಿಸಿದ್ದ ಬಾಹುಬಲಿ 2 ಸಿನಿಮಾ ಭಾರತೀಯ ಸಿನಿಮಾರಂಗದಲ್ಲೇ ದೊಡ್ಡ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಈ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿ ಧಾಖಲೆ ಸೃಷ್ಟಿಸಿತ್ತು. ಅನುಷ್ಕಾ, ಪ್ರಭಾಸ್, ರಾಣಾ ನಟನೆಯ ಈ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ಈ ಚಿತ್ರವು ವಿಶ್ವದಾದ್ಯಂತ ವಿಮರ್ಶಕರ ಮೆಚ್ಚುಗೆಗೂ ಸಹ ಪಾತ್ರವಾಗಿತ್ತು. 

ಬಿಡುಗಡೆಯಾದ ದಿನದಿಂದಲೇ ಈ ಸಿನಿಮಾ ಸಾಲು ಸಾಲು ದಾಖಲೆಗಳನ್ನು ನಿರ್ಮಿಸಿತ್ತು. ಅಲ್ಲದೆ, ತೆಲುಗು ಚಿತ್ರರಂಗದಲ್ಲೇ ಬಾಹುಬಾಲಿ 2 ಬಾಕ್ಸ್‌ ಆಫೀಸ್‌ನಲ್ಲಿ ಯಾರು ಮುರಿಯಲಾರದಂತಹ ದಾಖಲೆ ಸೃಷ್ಟಿಸಿತ್ತು. ನಂತರ ರಾಜಮೌಳಿ 1792 ದಿನಗಳ ನಂತರ ಆರ್‌ಆರ್‌ಆರ್‌ ಸಿನಿಮಾದ ಮೂಲಕ ತಮ್ಮದೇ ಸಿನಿಮಾದ ದಾಖಲೆ ಮುರಿದರು. ಕನ್ನಡ ಚಲನಚಿತ್ರೋದ್ಯಮದ ವಿಷಯಕ್ಕೆ ಬಂದರೆ, ಕೆಜಿಎಫ್ 2 ಚಲನಚಿತ್ರವು ಬಹಬಲಿ 2 ದಾಖಲೆಗಳನ್ನು ಮುರಿದಿದೆ. 

ಇದನ್ನೂ ಓದಿ: Nora Fatehi : ಬಿಟೌನ್‌ ಬೆಡಗಿ ನೋರಾ ಗ್ಲಾಮರ್‌ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ..!

ತಮಿಳಿನಲ್ಲಿ ಕಮಲ್‌ ಹಾಸನ್‌ ವಿಕ್ರಮ್‌ ಸಿನಿಮಾ ಈ ದಾಖಲೆಯನ್ನು ಮುರಿಯಿತು. ಇದೀಗ ಶಾರುಖ್ ಖಾನ್ ನಟನೆಯ ಪಠಾಣ್‌ ಚಿತ್ರ ಬಾಹುಬಲಿ 2 ಹಿಂದಿ ದಾಖಲೆಯನ್ನು ಮುರಿದಿದೆ. ಬಾಹುಬಲಿ2 ದಾಖಲೆ ಮುರಿಯಲು ಕಿಂಗ್‌ ಖಾನ್‌ ಸಿನಿಮಾಗೆ ಬರಬೇಕಾಯಿತು ಅನಿಸುತ್ತದೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಇಲ್ಲಿಯವರೆಗೆ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಬಹುವಾಲಿ 2 ದಾಖಲೆಗಳನ್ನು ಮುರಿಯಲು ಸಾಧ್ಯವಾಗಿಲ್ಲ. ರಾಜಮೌಳಿಯ ಆರ್‌ಆರ್‌ಆರ್‌ ಮಲಯಾಳಂ ಭಾಷಾಂತರಕ್ಕೂ ಬಹುಬಾಲಿ 2 ದಾಖಲೆಗಳನ್ನು ಮುರಿಯಲು ಸಾಧ್ಯವಾಗಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News