ಹೊಸ ವರ್ಷಕ್ಕೆ ಪವರ್‌ ಸ್ಟಾರ್‌ ಸಿನಿಮಾ ಗಿಫ್ಟ್‌ : ಪವನ್‌ ಕಲ್ಯಾಣ್‌ ʼಖುಷಿʼ ನೋಡಿ ನ್ಯೂ ಇಯರ್‌ ಮಾಡಿ

ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಖುಷಿ ಸುದ್ದಿ. ಇತಿಹಾಸ ಹಾಗೂ ದಾಖಲೆಗಲೆಗಳ ಸರಮಾಲೆ ಸೃಷ್ಟಿಸಿದ್ದ ಖುಷಿ ಸಿನಿಮಾ ರೀ ರೀಲಿಸ್‌ ಆಗುತ್ತಿದೆ. ಅದು ನ್ಯೂ ಇಯರ್‌ಗೆ ಅನ್ನೋದು ತುಂಬಾ ಸ್ಪೇಷಲ್‌. ಇದರಿಂದ ಖುಷ್‌ ಖುಷಿಯಾಗಿ ಹೊಸ ವರ್ಷವನ್ನು ರೋಮ್ಯಾಂಟಿಕ್‌ ಸಿನಿಮಾ ನೋಡುವ ಮೂಲಕ ಬರಮಾಡಿಕೊಳ್ಳಬಹುದಾಗಿದೆ.

Written by - Krishna N K | Last Updated : Dec 19, 2022, 05:55 PM IST
  • ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಖುಷಿ ಸುದ್ದಿ
  • ದಾಖಲೆಗಲೆಗಳ ಸರಮಾಲೆ ಸೃಷ್ಟಿಸಿದ್ದ ಖುಷಿ ಸಿನಿಮಾ ರೀ ರೀಲಿಸ್‌
  • ಪವನ್‌ ಕಲ್ಯಾಣ್‌ ʼಖುಷಿʼ ನೋಡಿ ನ್ಯೂ ಇಯರ್‌ ಮಾಡಿ
ಹೊಸ ವರ್ಷಕ್ಕೆ ಪವರ್‌ ಸ್ಟಾರ್‌ ಸಿನಿಮಾ ಗಿಫ್ಟ್‌ : ಪವನ್‌ ಕಲ್ಯಾಣ್‌ ʼಖುಷಿʼ ನೋಡಿ ನ್ಯೂ ಇಯರ್‌ ಮಾಡಿ title=

Pawan Kalyan Kushi Re Release : ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಖುಷಿ ಸುದ್ದಿ. ಇತಿಹಾಸ ಹಾಗೂ ದಾಖಲೆಗಲೆಗಳ ಸರಮಾಲೆ ಸೃಷ್ಟಿಸಿದ್ದ ಖುಷಿ ಸಿನಿಮಾ ರೀ ರೀಲಿಸ್‌ ಆಗುತ್ತಿದೆ. ಅದು ನ್ಯೂ ಇಯರ್‌ಗೆ ಅನ್ನೋದು ತುಂಬಾ ಸ್ಪೇಷಲ್‌. ಇದರಿಂದ ಖುಷ್‌ ಖುಷಿಯಾಗಿ ಹೊಸ ವರ್ಷವನ್ನು ರೋಮ್ಯಾಂಟಿಕ್‌ ಸಿನಿಮಾ ನೋಡುವ ಮೂಲಕ ಬರಮಾಡಿಕೊಳ್ಳಬಹುದಾಗಿದೆ.

ಹೌದು.. ಖುಷಿ ಸಿನಿಮಾದ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅದೋಂದು ಪ್ರೇಮ ಕಾವ್ಯ ಅಂದ್ರೆ ತಪ್ಪಾಗಲ್ಲ. ತಮಿಳಿನ ನಿರ್ದೇಶಕ ಎಸ್.ಜೆ.ಸೂರ್ಯ ಮೊದಲು ಈ ಸಿನಿಮಾವನ್ನು ಇಳಯದಳಪತಿ ವಿಜಯ್ ಜೊತೆ ಕಾಲಿವುಡ್‌ನಲ್ಲಿ ಮಾಡಿದ್ರು ಆದ್ರೆ ಅದು ಅಷ್ಟು ಹಿಟ್‌ ಆಗಲಿಲ್ಲ. ನಂತರ ಸೂರ್ಯ ಅವರು ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆ ಮಾಡಿದಾಗ ಸೂಪರ್‌ ಹಿಟ್‌ ಆಗಿತ್ತು. ತೆಲುಗು ಪ್ರೇಕ್ಷಕರಲ್ಲದೆ ಕನ್ನಡ ಸಿರಿರಸಿಕರಿಗೂ ಚಿತ್ರ ಇಷ್ಟವಾಗಿತ್ತು. ಅಲ್ಲದೆ ಅಂದಿನ ಸಿನಿಮಾಗಳ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿತ್ತು.

ಇದನ್ನೂ ಓದಿ: ಶಾರುಖ್‌ ತನ್ನ 22ರ ಹರೆಯದ ಮಗಳ ಜೊತೆ ʼಪಠಾಣ್‌ʼ ಸಿನಿಮಾ ನೋಡ್ಲಿ..!

ಈ ಹಿಂದೆ ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಜಲ್ಸಾ, ತಮ್ಮುಡು ಚಿತ್ರಗಳು ತೆರೆಕಂಡು ಸೂಪರ್‌ ಹಿಟ್‌ ಆಗಿದ್ದವರು. ಅವುಗಳಿಗೆ ಒಳ್ಳೆಯ ರೆಸ್ಪಾನ್ಸ್ ಕೂಡಾ ಸಿಕ್ಕಿತ್ತು. ಇದೀಗ ಖುಷಿ ಸಿನಿಮಾ ಡಿಸೆಂಬರ್ 31ಕ್ಕೆ ಹೊಸ ವರ್ಷಕ್ಕೆ ಸ್ಪೆಷಲ್ ಆಗಿ ರಿಲೀಸ್ ಆಗುತ್ತಿದ್ದು, ಬಿಗ್‌ ಸ್ಕ್ರೀನ್‌ ಮೇಲೆ ಪವರ್‌ ನೋಡಲು ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಬೇಸರ ಅಂದ್ರೆ ಒಂದೇ ಒಂದು ಈ ಸಿನಿಮಾ ಪ್ರದರ್ಶನವಾಗಲಿದೆ.

ಈ ಕುರಿತು ಮೆಗಾ ಸೂರ್ಯ ಪ್ರೊಡಕ್ಷನ್, ಎಸ್.ಜೆ.ಸೂರ್ಯ ಖುಷಿಯ ಮರು ಬಿಡುಗಡೆಯ ಪೋಸ್ಟ್ ಗಳನ್ನು ಹಾಕಿ ಮಾಹಿ ಹಂಚಿಕೊಂಡಿದ್ದಾರೆ. ಎಷ್ಟೇ ತಲೆಮಾರುಗಳು ಬದಲಾದರೂ ಲವ್ ಸ್ಟೋರಿ ಸಿನಿಮಾ ಖುಷಿ ಮಹತ್ವ ಬದಲಾಗಿಲ್ಲ. 'ಖುಷಿ' ಚಿತ್ರದ ಮ್ಯಾಜಿಕ್ ಅಂತಹದ್ದು. ಒಟ್ಟಾರೆಯಾಗಿ ಡಿಸೆಂಬರ್ 31 ರಂದು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೋಡಿ ಖುಷಿ ಪಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News