ಶಾರುಖ್‌ ತನ್ನ 22ರ ಹರೆಯದ ಮಗಳ ಜೊತೆ ʼಪಠಾಣ್‌ʼ ಸಿನಿಮಾ ನೋಡ್ಲಿ..!

ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ʼಪಠಾಣ್‌ʼ ಸಿನಿಮಾ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿಕೆಯ ನಂತರ ಮಧ್ಯ ಪ್ರದೇಶ ರಾಜ್ಯ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ಅವರು ʼಪಠಾನ್ʼ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲದೆ, ಶಾರುಖ್‌ ಖಾನ್‌ ತನ್ನ ಮಗಳಾದ ಸುಹಾನಾ ಖಾನ್‌ ಜೊತೆ ಕುಳಿತು ಪಠಾಣ್‌ ಸಿನಿಮಾ ನೋಡಲಿ ಅಂತ ಛಾಲೆಂಜ್‌ ಹಾಕಿದ್ದಾರೆ.

Written by - Krishna N K | Last Updated : Dec 19, 2022, 05:05 PM IST
  • ಶಾರುಖ್‌ ಖಾನ್‌ ದೀಪಿಕಾ ಪಡುಕೋಣೆ ನಟನೆಯ ʼಪಠಾಣ್‌ʼ ಸಿನಿಮಾ ವಿವಾದ ಮುಗಿಯುವಂತೆ ಕಾಣುತ್ತಿಲ್ಲ.
  • ಮಧ್ಯ ಪ್ರದೇಶ ರಾಜ್ಯ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ʼಪಠಾನ್ʼ ವಿರುದ್ಧ ಧ್ವನಿ ಎತ್ತಿದ್ದಾರೆ.
  • ಶಾರುಖ್‌ ತನ್ನ 22ರ ಹರೆಯದ ಮಗಳ ಜೊತೆ ʼಪಠಾಣ್‌ʼ ಸಿನಿಮಾ ನೋಡ್ಲಿ ಅಂತ ಸವಾಲ್‌ ಹಾಕಿದ್ದಾರೆ.
ಶಾರುಖ್‌ ತನ್ನ 22ರ ಹರೆಯದ ಮಗಳ ಜೊತೆ ʼಪಠಾಣ್‌ʼ ಸಿನಿಮಾ ನೋಡ್ಲಿ..! title=

Pathaan : ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ʼಪಠಾಣ್‌ʼ ಸಿನಿಮಾ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿಕೆಯ ನಂತರ ಮಧ್ಯ ಪ್ರದೇಶ ರಾಜ್ಯ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ಅವರು ʼಪಠಾನ್ʼ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲದೆ, ಶಾರುಖ್‌ ಖಾನ್‌ ತನ್ನ ಮಗಳಾದ ಸುಹಾನಾ ಖಾನ್‌ ಜೊತೆ ಕುಳಿತು ಪಠಾಣ್‌ ಸಿನಿಮಾ ನೋಡಲಿ ಅಂತ ಛಾಲೆಂಜ್‌ ಹಾಕಿದ್ದಾರೆ.

ಲೈವ್ ಹಿಂದೂಸ್ತಾನ್ ಸುದ್ದಿಯ ಪ್ರಕಾರ, ಗಿರೀಶ್ ಗೌತಮ್ ಅವರು, ಶಾರುಖ್ ಅವರು ತಮ್ಮ ಮಗಳೊಂದಿಗೆ ಈ ಚಿತ್ರವನ್ನು ನೋಡಬೇಕು, ಸಿನಿಮಾ ನೋಡುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಬೇಕು. ಅದನ್ನು ಜಗತ್ತಿಗೆ ತಿಳಿಸಬೇಕು ಎಂದು ಸವಾಲ್‌ ಹಾಕಿದ್ದಾರೆ. ಅಲ್ಲದೆ, ನಾನು ಪ್ರವಾದಿಯ ಮೇಲೆ ಇದೇ ರೀತಿಯ ಸಿನಿಮಾ ಮಾಡಿ ಪ್ರದರ್ಶನ ಮಾಡ್ತೇನೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: Watch: ಬ್ರಾಲೆಸ್ ಡ್ರೆಸ್ ಧರಿಸಿ ಮುಜುಗರ ಅನುಭವಿಸಿದ ಪ್ರಿಯಾಂಕಾ ಚೋಪ್ರಾ

ಇನ್ನು ಬೇಷರಾಮ್ ರಂಗ್ ಹಾಡಿನ ಕೆಲವು ದೃಶ್ಯಗಳನ್ನು ಸರಿಪಡಿಸದಿದ್ದರೆ, ಮಧ್ಯಪ್ರದೇಶದಲ್ಲಿ ಚಲನಚಿತ್ರದ ಪ್ರದರ್ಶನದ ಬಗ್ಗೆ ರಾಜ್ಯ ಸರ್ಕಾರ ಏನು ಮಾಡಬೇಕೆಂದು ಪರಿಗಣಿಸುತ್ತದೆ. ಎಸ್‌ಆರ್‌ಕೆ ಮತ್ತು ದೀಪಿಕಾ ಅವರ ʼಹಸಿರುʼ ಮತ್ತು ʼಕೇಸರಿʼ ಬಣ್ಣದ ಡ್ರೇಸ್‌ ಹಾಗು ಹಾಡಿನ ಸಾಹಿತ್ಯ ಮತ್ತು ಚಿತ್ರದ ಶೀರ್ಷಿಕೆಯನ್ನು ಸರಿಪಡಿಸುವ ಅಗತ್ಯ ಇದೆ ಎಂದು ಸಂಸದ ಗೃಹ ಸಚಿವ ಮಿಶ್ರಾ ಹೇಳಿದ್ದಾರೆ.

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಗಳು ಸುಹಾನಾ ಖಾನ್ ಶೀಘ್ರದಲ್ಲೇ ಜೋಯಾ ಅಖ್ತರ್ ಅವರ 'ದಿ ಆರ್ಚೀಸ್' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದರ ಬೆನ್ನೆಲೆ ಪಠಾಣ್‌ ಸಿನಿಮಾದ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ, ʼಪಠಾಣ್‌ʼ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜನವರಿ 25, 2022 ರಂದು ಥಿಯೇಟರ್‌ಗಳಲ್ಲಿ ಬರಲು ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News