ಭಾರತೀಯರನ್ನು ಭಯೋತ್ಪಾದಕರೆಂದು ಬಿಂಬಿಸಿದ ಕ್ವಾಂಟಿಕೊ ಶೋ,ಪ್ರಿಯಾಂಕಾ ಚೋಪ್ರಾ ಕ್ಷಮೆ

     

Updated: Jun 10, 2018 , 12:46 PM IST
ಭಾರತೀಯರನ್ನು ಭಯೋತ್ಪಾದಕರೆಂದು ಬಿಂಬಿಸಿದ ಕ್ವಾಂಟಿಕೊ ಶೋ,ಪ್ರಿಯಾಂಕಾ ಚೋಪ್ರಾ ಕ್ಷಮೆ

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರ ಇತ್ತೀಚೆಗಿನ ಅಮೇರಿಕನ್ ಟೆಲಿವಿಷನ್ ಸರಣಿ ಕ್ವಾಂಟಿಕೊದಲ್ಲಿ ಭಾರತೀಯರನ್ನು ಭಯೋತ್ಪಾದಕರಂತೆ  ಬಿಂಬಿಸಿರುವ ಈ ವಿವಾದಾತ್ಮಕ ಸಂಚಿಕೆಗಯ ಕುರಿತಾಗಿ ಕ್ಷಮೆ ಕೋರಿದ್ದಾರೆ. 

ಈ ಕುರಿತಾಗಿ ತಮ್ಮ ಟ್ವೀಟ್ ಮೂಲಕ ಕ್ಷಮೆ ಕೋರಿರುವ ಅವರು " ಇತ್ತಿಚೆಗಿನ ಕ್ವಾಂಟಿಕೋ ಸರಣಿಯ ವಿಚಾರವಾಗಿ ಹಲವರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಇದಕ್ಕೆ ನಾನು ದುಃಖಿತಲಾಗಿರುವುದಲ್ಲದೆ ಅದಕ್ಕೆ ನಾನು ಕ್ಷಮೆ ಕೋರುತ್ತೇನೆ.ಅದು ನನ್ನ ಉದ್ದೇಶವಾಗಿರಲಿಲ್ಲ.ನಾನು  ಹೆಮ್ಮೆಯ ಭಾರತೀಯಳು ಮತ್ತು ಅದು ಎಂದಿಗೂ ಕೂಡ ಬದಲಾಗುವುದಿಲ್ಲ."ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಜೂನ್ 1 ರಂದು ಪ್ರಸಾರವಾದ ಈ ಕಂತಿನಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ  ಅಭಿಮಾನಿಗಳು ಈ ವಿವಾದಾತ್ಮಕ ಕಥಾವಸ್ತುವನ್ನು ಒಪ್ಪಿಕೊಂಡಿರುವ ಕುರಿತಾಗಿ ಪ್ರಶ್ನಿಸಿದ್ದಾರೆ ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಚೋಪ್ರಾ ಈಗ ಕ್ಷಮೆಯಾಚಿಸಿದ್ದಾರೆ.