ಮಗಳ ಮುಖ ತೋರಿಸಲ್ಲ ಅಂದ್ರೆ ಫೋಟೋ ಶೂಟ್‌ ಯಾಕೆ..! ಪಿಂಕಿ ಟ್ರೋಲ್‌

ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಕುರಿತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ದೇಸಿ ಗರ್ಲ್‌ ತನ್ನ ಮಗಳ ಮುಖವನ್ನು ಮರೆಮಾಚಿದ್ದರಿಂದ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ.

Written by - Krishna N K | Last Updated : Jan 20, 2023, 03:16 PM IST
  • ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ.
  • ಫೋಟೋದಲ್ಲಿ ಪಿಂಕಿ ಮಗಳು ಮಾಲ್ಟಿ ಮೇರಿ ಮುಖವನ್ನು ಮರೆಮಾಚಲಾಗಿದೆ.
  • ಫೋಟೋ ನೋಡಿದ ನೆಟಿಜನ್ಸ್‌ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದಾರೆ.
ಮಗಳ ಮುಖ ತೋರಿಸಲ್ಲ ಅಂದ್ರೆ ಫೋಟೋ ಶೂಟ್‌ ಯಾಕೆ..! ಪಿಂಕಿ ಟ್ರೋಲ್‌ title=

Priyanka Chopra daughter : ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಕುರಿತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ದೇಸಿ ಗರ್ಲ್‌ ತನ್ನ ಮಗಳ ಮುಖವನ್ನು ಮರೆಮಾಚಿದ್ದರಿಂದ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ.

ಮಗಳ ಜೊತೆ ಗ್ರ್ಯಾಂಡ್‌ ಫೋಟೋ ಶೂಟ್‌ ಮಾಡಿಸಿರುವ ಪ್ರಿಯಾಂಕಾ ತನ್ನ ಮಗಳ ಮುಖವನ್ನು ಮರೆಮಾಚಿದ್ದಾರೆ. ಪಿಂಕಿ ಫೋಟೋಸ್‌ ನೋಡಿದ ನೆಟಿಜನ್‌ಗಳು, ಈ ಫೋಟೋಶೂಟ್ ಅಗತ್ಯವಿರಲಿಲ್ಲ ಇದು ಹಾಸ್ಯಾಸ್ಪದ ಎಂದು ಟೀಕೆ ಮಾಡಿದ್ದಾರೆ. ಅಲ್ಲದೆ, ಮಗಳು ಮಾಲ್ತಿ ಜೊತೆಗೆ ತನ್ನ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡುವ ಪ್ರಿಯಾಂಕಾಗೆ ಅವರ ಅಭಿಮಾನಿಗಳು ಸಾಕಷ್ಟು ಪ್ರೀತಿಯ ಮಾತುಗಳನ್ನು ಹೇಳಿದ್ದಾರೆ.

ಇದನ್ನೂ ಓದಿ: Rishab Shetty : ರಿಷಬ್‌ ಶೆಟ್ಟಿ ಪಂಜುರ್ಲಿ ದೈವದ ಹರಕೆ ತೀರಿಸಿದ ಕ್ಷಣ.! ಮೈನವಿರೇಳಿಸುವ ವಿಡಿಯೋ ನೋಡಿ

ಆದರೆ ಮಗಳ ಮುಖವನ್ನು ಮರೆಮಾಚುವುದಾದ್ರೆ ಒಬ್ಬರೆ ಫೋಟೋಶೂಟ್ ಮಾಡಿಸಿಕೊಳ್ಳಬೇಕಿತ್ತು. ಇಲ್ಲವೇ ಈ ಫೋಟೋಶೂಟ್‌ ಅವಶ್ಯಕತೆ ಇರಲಿಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸೆಲೆಬ್ರಿಟಿಗಳು, ವಿಶೇಷವಾಗಿ ಬಾಲಿವುಡ್‌ನಲ್ಲಿ ತಮ್ಮ ಮಕ್ಕಳ ಚಿತ್ರಗಳನ್ನು ಹಂಚಿಕೊಳ್ಳುವ ಪ್ರವೃತ್ತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಅವರ ಮುಖವನ್ನು ತೋರಿಸುತ್ತಿಲ್ಲ. ಇದೀಗ ಪ್ರಿಯಾಂಕಾ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.

 
 
 
 

 
 
 
 
 
 
 
 
 
 
 

A post shared by Priyanka (@priyankachopra)

ಪಿಂಕಿ ಫೋಟೋಸ್‌ಗೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡಿದ್ದಾರೆ. ʼಈ ಫೋಟೋ ತುಂಬಾ ವಿಚಿತ್ರವಾಗಿದೆ ಎಂದು ನೆಟ್ಟಿರೊಬ್ಬರು ಹೇಳಿದ್ದಾರೆ. ಅಲ್ಲದೆ, ʼಮಗುವನ್ನು ಸಾರ್ವಜನಿಕವಾಗಿ ತೋರಿಸಲು ಬಯಸದಿದ್ದರೆ ಸೋಷಿಯಲ್‌ ಮೀಡಿಯಾಗಳಿಂದ ದೂರವಿಡಿʼ ಅಂತ ಸಲಹೆ ನೀಡಿದ್ದಾರೆ. ಇನ್ನು ಪ್ರಿಯಾಂಕಾ ಪ್ಯಾನ್ಸ್‌ ಸೂಪರ್‌, ಕ್ಯೂಟ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಅಲ್ಲದೆ, ಹಾರ್ಟ್‌ ಇಮೋಜಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರಿಗೆ ಬಿಗ್‌ ಟ್ವೀಸ್ಟ್‌ ನೀಡಿದ ʼಮುದ್ದುಮಣಿಗಳುʼ : ʼಮುದ್ದುಲಕ್ಷ್ಮಿʼ ಶಾರ್ವರಿ ರೀ ಎಂಟ್ರೀ..!

ಪ್ರಿಯಾಂಕಾ ಚೋಪ್ರಾ ಅವರು ಬಾಡಿಗೆ ತಾಯ್ತನ ಹೊಂದಿದ್ದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಅಲ್ಲದೆ, ತಮ್ಮ ನಿರ್ಧಾರದ ಕಾರಣವನ್ನು ಬಹಿರಂಗಪಡಿಸಿದರು. ಪ್ರಿಯಾಂಕಾ 2018 ರಲ್ಲಿ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಕಳೆದ ವರ್ಷವಷ್ಟೇ ಅವರು ಮಾಲ್ಟಿಯ ಪೋಷಕರಾಗುವುದಾಗಿ ಘೋಷಿಸಿದರು. ಈ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್‌ ನೀಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News