Pushpa 2: ಬಿಡುಗಡೆಗೂ ಮುನ್ನವೇ 'ಪುಷ್ಪ 2' ಭರ್ಜರಿ ಕಲೆಕ್ಷನ್‌, RRR - ಬಾಹುಬಲಿ 2 ರೆಕಾರ್ಡ್‌ ಪುಡಿಪುಡಿ!

Allu Arjun Pushpa 2: ಸೌತ್ ಸಿನಿಮಾದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ 'ಪುಷ್ಪ 2' ಬಗ್ಗೆ ದೊಡ್ಡ ಅಪ್ಡೇಟ್ ಹೊರಬರುತ್ತಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಭರ್ಜರಿ ಗಳಿಕೆ ಕಂಡಿದೆ ಎಂದು ವರದಿಯಾಗಿದೆ.  

Written by - Chetana Devarmani | Last Updated : May 3, 2023, 11:41 PM IST
  • ಸೌತ್ ಸಿನಿಮಾದ ಸೂಪರ್ ಸ್ಟಾರ್ ಅಲ್ಲು ಅರ್ಜುನ್
  • ಬಿಡುಗಡೆಗೂ ಮುನ್ನವೇ 'ಪುಷ್ಪ 2' ಭರ್ಜರಿ ಕಲೆಕ್ಷನ್‌
  • RRR - ಬಾಹುಬಲಿ 2 ರೆಕಾರ್ಡ್‌ ಪುಡಿಪುಡಿ!
Pushpa 2: ಬಿಡುಗಡೆಗೂ ಮುನ್ನವೇ 'ಪುಷ್ಪ 2' ಭರ್ಜರಿ ಕಲೆಕ್ಷನ್‌, RRR - ಬಾಹುಬಲಿ 2 ರೆಕಾರ್ಡ್‌ ಪುಡಿಪುಡಿ!  title=

Allu Arjun Pushpa 2 Audio Rights: ಸೌತ್ ಚಿತ್ರರಂಗದ ಹಿರಿಯ ನಟರ ಹೆಸರು ಹೇಳಿದರೆ ಅದರಲ್ಲಿ ಅಲ್ಲು ಅರ್ಜುನ್ ಹೆಸರು ಸೇರುವುದು ಖಚಿತ. ಅಲ್ಲು ಅರ್ಜನ್ ಅವರ ಮುಂಬರುವ ಚಿತ್ರ 'ಪುಷ್ಪ 2' ಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಆಗಾಗ ಈ ಚಿತ್ರದ ಬಗ್ಗೆ ಒಂದಲ್ಲ ಒಂದು ಅಪ್ಡೇಟ್ ನಿರಂತರವಾಗಿ ಹೊರಬರುತ್ತಲೇ ಇರುತ್ತದೆ.

ಅಲ್ಲು ಅರ್ಜುನ್ ಅವರ 'ಪುಷ್ಪ 2 - ದಿ ರೂಲ್' ಈಗಾಗಲೇ ಆಡಿಯೋ ರೈಟ್ಸ್ ಮೂಲಕ ಭರ್ಜರಿಯಾಗಿ ಗಳಿಸಿದೆ ಎಂಬ ಸುದ್ದಿ ಇದೆ. ಇಷ್ಟೇ ಅಲ್ಲ, ಈ ಸಂದರ್ಭದಲ್ಲಿ 'ಪುಷ್ಪ 2' ಸಿನಿಮಾ 'ಆರ್‌ಆರ್‌ಆರ್' ಮತ್ತು 'ಬಾಹುಬಲಿ 2' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆಯಂತೆ.

'ಪುಷ್ಪ 2' ಚಿತ್ರದ ಆಡಿಯೋ ರೈಟ್ಸ್ ತುಂಬಾ ದುಬಾರಿ: 

ಇತ್ತೀಚೆಗಷ್ಟೇ ನಿರ್ದೇಶಕ ಸುಕುಮಾರ್ ನಿರ್ದೇಶನದ 'ಪುಷ್ಪ 2' ಚಿತ್ರದ ಆಡಿಯೋ ರೈಟ್ಸ್ ಭಾರೀ ಬೆಲೆಗೆ ಮಾರಾಟವಾಗಿದೆ ಎಂಬ ಸುದ್ದಿ ಹೊರಬೀಳುತ್ತಿದೆ. ವರದಿಯ ಪ್ರಕಾರ, 'ಪುಷ್ಪ 2' ಚಿತ್ರದ ಆಡಿಯೋ ಹಕ್ಕುಗಳು 65 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ. ಈ ಮೂಲಕ 'ಪುಷ್ಪ 2' ಇಷ್ಟೊಂದು ಮೊತ್ತ ಆಡಿಯೋ ರೈಟ್ಸ್‌ ಮಾರಾಟವಾದ ಸೌತ್ ಚಿತ್ರರಂಗದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ನಾಗ ಚೈತನ್ಯ ಮತ್ತು ಕೃತಿ ಶೆಟ್ಟಿ ನಟನೆಯ ʼಕಸ್ಟಡಿʼ ಟ್ರೈಲರ್‌ ಮೇ5 ರಂದು ರಿಲೀಸ್‌..!

ವರದಿಯ ಪ್ರಕಾರ, ಸೌತ್ ಸಿನಿಮಾದ ಹಿರಿಯ ಚಲನಚಿತ್ರ ನಿರ್ದೇಶಕ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ಚಿತ್ರಗಳಾದ 'ಬಾಹುಬಲಿ 2' ಮತ್ತು 'ಆರ್‌ಆರ್‌ಆರ್' ಆಡಿಯೋ ಹಕ್ಕುಗಳು ಸುಮಾರು 10 ಕೋಟಿಗಳಿಂದ 25 ಕೋಟಿಗೆ ಮಾರಾಟವಾಗಿವೆ. ಹೀಗಿರುವಾಗ 'ಪುಷ್ಪ 2' ಬಿಡುಗಡೆಗೂ ಮುನ್ನವೇ ತನ್ನ ಮ್ಯಾಜಿಕ್ ತೋರಿಸುತ್ತಿದ್ದು, ಬಿಡುಗಡೆಯ ನಂತರವೂ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಂಚಲನ ಸೃಷ್ಟಿಸುವ ನಿರೀಕ್ಷೆಯಿದೆ. 

ಸಿನಿಪ್ರಿಯರ ಮನಗೆದ್ದ 'ಪುಷ್ಪ 2' ಟೀಸರ್ : 

ಕಳೆದ ತಿಂಗಳ ಆರಂಭದಲ್ಲಿ ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂದರ್ಭದಲ್ಲಿ 'ಪುಷ್ಪ 2' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಟೀಸರ್ ಕೊನೆಯಲ್ಲಿ, ಅಭಿಮಾನಿಗಳು ತಮ್ಮ ನಾಯಕ ಪುಷ್ಪ ಅಂದರೆ ಅಲ್ಲು ಅರ್ಜುನ್ ಅವರ ನೋಟವನ್ನು ನೋಡಿ ಬೆರಗಾದರು. ಅದೇ ದಿನ 'ಪುಷ್ಪಾ-ದಿ ರೂಲ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಹೊರಬಿದ್ದಿದ್ದು, ಇದರಲ್ಲಿ ಅಲ್ಲು ಅರ್ಜುನ್ ವಿಭಿನ್ನ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. 

ಇದನ್ನೂ ಓದಿ: ಇವು OTT ಯ ಅತ್ಯಂತ ಬೋಲ್ಡ್ ವೆಬ್ ಸೀರೀಸ್, ತಪ್ಪಾಗಿಯೂ ಮಕ್ಕಳ ಮುಂದೆ ಸ್ಟ್ರೀಮ್ ಮಾಡಬೇಡಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News