‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಹೀಗಂದ್ರು ರಾಧಿಕಾ ಪಂಡಿತ್

Radhika Pandit:ಆಕೆ ಮೊಗ್ಗಿನ ಮನಸ್ಸಿನ ಚೆಲುವೆ. ಇದೀಗ ಆಕೆಯದ್ದೇ ಟಾಕ್‌  ಜೋರಾಗಿದೆ. ಮೊಗ್ಗಿನ ಮನಸ್ಸಿನ ಸುಂದರಿ ಅದು ನಮ್ಮ ಪ್ರೀತಿ ರಾಧಿಕಾ ಪಂಡಿತ್‌ ಅನ್ನೋದು ಎಲ್ಲಾರಿಗೂ ಗೊತ್ತಾಗಿಬಿಡುತ್ತೆ. ಇದೀಗ ರಾಧಿಕಾ ಪಂಡಿತ್‌  ಕೊಟ್ಟಿರೋ ಒಂದು ವಿಡಿಯೋ ಸಂದೇಶದ ಬಗ್ಗೆ ಎಲ್ಲಾರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾಕೆ ಅನ್ನೋದನ್ನ ನೀವೇ ನೋಡಿ.

Written by - YASHODHA POOJARI | Edited by - Chetana Devarmani | Last Updated : Mar 24, 2022, 02:02 PM IST
  • ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನ
  • ಅಭಿಯಾನದ ಬಗ್ಗೆ ಹೀಗಂದ್ರು ರಾಧಿಕಾ ಪಂಡಿತ್
  • ಮೊಗ್ಗಿನ ಮನಸ್ಸಿನ ಚೆಲುವೆ ರಾಧಿಕಾ ಪಂಡಿತ್
‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಹೀಗಂದ್ರು ರಾಧಿಕಾ ಪಂಡಿತ್ title=
ರಾಧಿಕಾ ಪಂಡಿತ್‌

ರಾಧಿಕಾ ಪಂಡಿತ್‌ (Radhika Pandit) ಅಂದ್ರೆ ಸಾಕು ಇವತ್ತಿಗೂ ಹುಚ್ಚೆದ್ದು ಕುಣಿಯೋ ಅಭಿಮಾನಿಗಳಿದ್ದಾರೆ. ತಮ್ಮ ಅದ್ಭುತ ನಟನೆ ಮತ್ತು ಸರಳ ವ್ಯಕ್ತಿತ್ವದಿಂದಲೇ ಕರುನಾಡನಲ್ಲಿ ಮನೆ ಮಾತಾಗಿರುವ ರಾಧಿಕಾ ಪಂಡಿತ್‌ ಬಗ್ಗೆ ಇದೀಗ ಅಭಿಮಾನಿಗಳು ಮತ್ತೆ ಚರ್ಚೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Natabhayankara: "ನಟ ಭಯಂಕರ" ನಿಗೆ "ಮದಗಜ"ನ ಸಾಥ್.!

ರಾಧಿಕಾ ಪಂಡಿತ್‌ ಮಾಡಿರೋ ಒಳ್ಳೆ ಕೆಲಸದ ಬಗ್ಗೆ ಅಭಿಮಾನಿಗಳು ಶಹಬ್ಬಾಸ್‌ ಅನ್ನುತ್ತಿದ್ದಾರೆ.  ಸ್ಟಾರ್‌ಗಳು ಇದ್ದರೆ ರಾಧಿಕಾ ಪಂಡಿತ್‌ ಥರಾ ಇರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. 

ಮೊಗ್ಗಿನ ಮನಸ್ಸಿನ (Moggina Manasu) ಚೆಲುವೆ ರಾಧಿಕಾ ಪಂಡಿತ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಬರೆದುಕೊಂಡಿದ್ದಾರೆ. ಇದರೊಂದಿಗೆ ತಾವು ಮಾತನಾಡಿರುವ ವಿಡಿಯೋ ಸಂದೇಶವನ್ನು ಕೂಡ ಹಂಚಿಕೊಂಡಿದ್ದಾರೆ. 

ಬದುಕಿನ ಅತ್ಯಂತ ಮಹತ್ವಪೂರ್ಣ ಉಡುಗೊರೆಗಳಲ್ಲಿ ಎದೆಹಾಲು (Breast Milk) ಮುಖ್ಯವಾದದ್ದು. ಎದೆಹಾಲಿನಲ್ಲಿ ಇರುವ ಅಂಶಗಳನ್ನು ಯಾವುದಕ್ಕೂ ಹೋಲಿಸಲು ಆಗುವುದಿಲ್ಲ. ಎಳೆ ಮಕ್ಕಳಿಗೆ ಇದು ಬಹಳ ಮುಖ್ಯ. ಅದರಲ್ಲಿ ಸಿಗುವ ಪೋಷಕಾಂಶಗಳು ಅಥವಾ ರೋಗ ನಿರೋಧಕ ಗುಣವನ್ನು ಮತ್ಯಾವುದೂ ನೀಡುವುದು ಸಾಧ್ಯವಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ತಾಯಂದಿರಲ್ಲಿ ಅಗತ್ಯವಾಗಿದ್ದಷ್ಟು ಹಾಲು ಉತ್ಪಾದನೆಯಾದೇ ಇರಬಹುದು. ಅಂತಹ ತಾಯಂದಿರ ಮಕ್ಕಳಿಗೆ ಸಹಾಯವಾಗುವ ದೃಷ್ಟಿಯಿಂದ ‘ಎದೆಹಾಲು ಬ್ಯಾಂಕ್’ಗಳನ್ನು ಸ್ಥಾಪಿಸಲಾಗಿದೆ. ಯಾರು ಸಶಕ್ತರೋ ಅವರು ಎದೆಹಾಲನ್ನು ದಾನ ಮಾಡಬಹುದು. ನಿಮ್ಮ ಜಿಲ್ಲೆಗಳಲ್ಲಿರುವ ಮಿಲ್ಕ್ ಬ್ಯಾಂಕ್​ಗಳಲ್ಲಿ (Milk Bank) ದಾನ ಮಾಡಬಹುದು. ಇದು ಅಗತ್ಯವಿರುವವರಿಗೆ ಸಹಾಯವಾಗಲಿದೆ ಎಂದು ಸಂದೇಶ ನೀಡಿದ್ದಾರೆ ರಾಧಿಕಾ ಪಂಡಿತ್. ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ಎಂದು ನಟಿ ಕೋರಿಕೊಂಡಿದ್ದಾರೆ.

ಇದನ್ನೂ ಓದಿ: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಚ್ಚುಗತ್ತಿ ಹೀರೋ.. ಯುವಕರಿಗೆ ಮಾದರಿ ರಾಜವರ್ಧನ್ ನಡೆ!

ಇವರ ಮಾತಿಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ ಎಂಬ ಉದ್ದೇಶದಿಂದ ಮಾರ್ಚ್ 27ರಂದು ಬೆಂಗಳೂರಿನಲ್ಲಿ ಒಂದು ವಾಕ್‌ಥಾನ್ ಕೂಡ ಆಯೋಜಿಸಲಾಗಿದೆ. ರಾಧಿಕಾ ಪಂಡಿತ್ ಹಂಚಿಕೊಂಡಿರುವ ಸಂದೇಶಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News