Rajamouli Experience Earthquake in Japan: ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರ ಮಗ ಕಾರ್ತಿಕೇಯ ಮತ್ತು ನಿರ್ಮಾಪಕ ಶೋಬು ಯಾರ್ಲಗಡ್ಡ ತಮ್ಮ 'ಆರ್‌ಆರ್‌ಆರ್' ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ಜಪಾನ್‌ನಲ್ಲಿದ್ದಾರೆ. ಈ ಸಮಯದಲ್ಲಿ ಅವರು ಅಭಿಮಾನಿಗಳನ್ನು ಸಹ ಭೇಟಿಯಾಗಿದ್ದಾರೆ. ಆದರೆ ಅವರ ಜಪಾನ್ ಭೇಟಿಯ ಸಮಯದಲ್ಲಿ ಮೂವರಿಗೂ ಭಯಾನಕ ಅನುಭವ ಎದುರಾಗಿತ್ತು. ಇದು ರಾಜಮೌಳಿ ಫ್ಯಾನ್ಸ್ ಆತಂಕಕ್ಕೂ ಕಾರಣವಾಗಿದೆ.
ಈ ಭಯಾನಕ ಅನುಭವದ ಬಗ್ಗೆ ಎಸ್ ಎಸ್ ರಾಜಮೌಳಿ ಪುತ್ರ ಕಾರ್ತಿಕೇಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಜಮೌಳಿ ಮತ್ತು ಅವರ ಮಗ ಕಾರ್ತಿಕೇಯ ಅವರು ಮಾರ್ಚ್ 21 ರ ಗುರುವಾರ ಜಪಾನ್‌ನಲ್ಲಿದ್ದಾಗಲೇ ಪ್ರಬಲ ಭೂಕಂಪ ಸಂಭವಿಸಿದೆ. ಈ ಬಗ್ಗೆ ಅವರು ತಮ್ಮ ಭಯಾನಕ ಅನುಭವವನ್ನು ಶೇರ್ ಮಾಡಿದ್ದಾರೆ. ಜಪಾನ್‌ನಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘ಬೃಂದಾವನ’ ನಟಿ ʻಪುಷ್ಪಾʼ ಯಾರು ಗೊತ್ತಾ.. ನಿಜವಾದ ವಯಸ್ಸು ಎಷ್ಟು?
ಕಾರ್ತಿಕೇಯ ಅವರು ತಮ್ಮ ಸ್ಮಾರ್ಟ್ ವಾಚ್‌ನ ಚಿತ್ರವನ್ನು X (ಈ ಹಿಂದೆ Twitter) ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಭೂಕಂಪದ ತುರ್ತು ಎಚ್ಚರಿಕೆ ಸಂದೇಶವು ಗೋಚರಿಸುತ್ತದೆ. ಈ ಚಿತ್ರವನ್ನು ಹಂಚಿಕೊಂಡ ಕಾರ್ತಿಕೇಯ, "ಜಪಾನ್‌ನಲ್ಲಿ ಭೀಕರ ಭೂಕಂಪನವನ್ನು ಅನುಭವಿಸಿದ್ದೇವೆ!!! 28 ನೇ ಮಹಡಿಯಲ್ಲಿದ್ದೆವು ಮತ್ತು ನಿಧಾನವಾಗಿ ಭೂಮಿ ಅಲುಗಾಡಲಾರಂಭಿಸಿತು. ಇದು ಭೂಕಂಪ ಎಂದು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿತು. ನಾವು ಭಯಭೀತರಾದೆವು. ಆದರೆ ಸುತ್ತಮುತ್ತಲಿನ ಎಲ್ಲಾ ಜಪಾನಿಯರು ನಾರ್ಮಲ್ ಆಗಿದ್ದರು'' ಎಂದು ಕಾರ್ತಿಕೇಯ ತಮ್ಮ ಪೋಸ್ಟ್‌ನಲ್ಲಿ
ರಾಜಮೌಳಿ ಮತ್ತು ಶೋಬು ಅವರನ್ನು ಟ್ಯಾಗ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಎಸ್ ಎಸ್ ಕಾರ್ತಿಕೇಯ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಕೂಡ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮೂವರೂ ಸುರಕ್ಷಿತರಾಗಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಕೆಲ ಅಭಿಮಾನಿಗಳು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಕೆಲವು ಅಭಿಮಾನಿಗಳು ಶೀಘ್ರದಲ್ಲೇ ಹಿಂತಿರುಗುವಂತೆ ಕೇಳಿಕೊಂಡಿದ್ದಾರೆ ಮತ್ತು ಕೆಲವರು ಜಾಗರೂಕರಾಗಿರಿ ಎಂದು ಸಲಹೆ ನೀಡಿದ್ದಾರೆ, ಏಕೆಂದರೆ ಜಪಾನ್‌ನಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ.
ಇದನ್ನೂ ಓದಿ: Allu Arjun : ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದ ಅಲ್ಲು ಅರ್ಜುನ್..!
ಎಸ್‌ಎಸ್ ರಾಜಮೌಳಿ ಜಪಾನ್‌ನಲ್ಲಿ ಸಾಕಷ್ಟು ಪ್ರೀತಿಯನ್ನು ಪಡೆದಿದ್ದಾರೆ. ಅವರ 'ಆರ್‌ಆರ್‌ಆರ್' ಚಿತ್ರ ಜಪಾನ್‌ನಲ್ಲಿಯೂ ದೊಡ್ಡ ಹಿಟ್ ಆಗಿತ್ತು. ಹೀಗಿರುವಾಗ ಚಿತ್ರದ ವಿಶೇಷ ಪ್ರದರ್ಶನಕ್ಕಾಗಿ ರಾಜಮೌಳಿ, ಕಾರ್ತಿಕೇಯ ಮತ್ತು ಶೋಬು ಜಪಾನ್‌ನಲ್ಲಿದ್ದಾರೆ. ಮೂವರೂ ತಮ್ಮ ಜಪಾನ್ ಪ್ರವಾಸದ ಅಪ್‌ಡೇಟ್ ನ್ನು ತಮ್ಮ ಅಭಿಮಾನಿಗಳ ಜೊತೆ ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.