Rakul Preet Singh: ಹೈದರಾಬಾದ್‌ನ ರೆಸ್ಟೊರೆಂಟ್‌ನ ಒಡತಿಯಾದ ʻಗಿಲ್ಲಿʼ ನಟಿ: ಬೆಂಗಳೂರಿನಲ್ಲಿಯೂ ಇದೆ ಬಿಸಿನೆಸ್‌...!

Rakul Preet Restaurant: ಭಾರತ ಸಿನಿರಂಗದ ಬಹುಬೇಡಿಕೆಯ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ನಟನೆ ಜೊತೆಗೆ ಇದೀಗ ಹೋಟೆಲ್‌ ಉದ್ಯಮಕ್ಕೆ ಕಾಲಿಟ್ಟು, ಹೈದರಾಬಾದ್‌ನಲ್ಲಿರುವ ರೆಸ್ಟೊರೆಂಟ್‌ ಒಂದರ ಒಡತಿಯಾಗಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 13, 2024, 10:52 AM IST
  • ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ರಕುಲ್ ಪ್ರೀತ್ ಸಿಂಗ್, ಇದೀಗ ಉದ್ಯಮಕ್ಕೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
  • ರಕುಲ್ ಪ್ರೀತ್ ಸಿಂಗ್ ಹೈದರಾಬಾದ್‌ನಲ್ಲಿ ರೆಸ್ಟೋರೆಂಟ್‌ವೊಂದನ್ನು ಆರಂಭಿಸುತ್ತಿದ್ದು, ಅದಕ್ಕೆ 'ಆರಂಭಂ' ಅಂತ ಹೆಸರಿಟ್ಟಿದ್ದಾರೆ.
  • ಬಾಲಿವುಡ್‌ ನಟಿ ರಕುಲ್ ಪ್ರೀತ್ ಸಿಂಗ್ ರೆಸ್ಟೋರೆಂಟ್ ಉದ್ಯಮ ಮಾತ್ರವಲ್ಲದೇ ಈ ಹಿಂದೆ ಜಿಮ್ ಉದ್ಯಮಕ್ಕೂ ಕೂಡ ಕಾಲಿಟ್ಟಿದ್ದರು.
Rakul Preet Singh: ಹೈದರಾಬಾದ್‌ನ ರೆಸ್ಟೊರೆಂಟ್‌ನ ಒಡತಿಯಾದ ʻಗಿಲ್ಲಿʼ ನಟಿ: ಬೆಂಗಳೂರಿನಲ್ಲಿಯೂ ಇದೆ ಬಿಸಿನೆಸ್‌...! title=

Rakul New Restaurant In Hyderabad: ಸೌತ್‌ ಚಿತ್ರರಂಗದ ಬಹುಬೇಡಿಕೆಯ ನಟಿ ರಕುಲ್ ಪ್ರೀತ್ ಸಿಂಗ್ ಹೈದರಾಬಾದ್‌ನಲ್ಲಿರುವ ರೆಸ್ಟೊರೆಂಟ್‌ನ ಒಡತಿಯಾಗಿದ್ದಾರೆ. ನಟಿ ರಕುಲ್ ಪ್ರೀತ್ ಅಭಿನಯದ ಜೊತೆಗೆ ಬ್ಯುಸಿನೆಸ್‌ನಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಆದರಿಂದ  ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ. ಇದೀಗ  ಉದ್ಯಮಕ್ಕೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. 

ನಟಿ ರಕುಲ್ ಪ್ರೀತ್ ಸಿಂಗ್ ಕೆಲವು ತಿಂಗಳ ಹಿಂದೆಯಷ್ಟೇ ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ವಿವಾಹವಾಗಿದ್ದು, ಸದ್ಯ ಹೈದರಾಬಾದ್‌ನಲ್ಲಿ ಹೊಟೇಲ್ ಉದ್ಯಮಕ್ಕೆ ಹೆಜ್ಜೆಹಾಕಿದ್ದಾರೆ. ಈ ನಟಿ ಹೈದರಾಬಾದ್‌ನಲ್ಲಿ ರೆಸ್ಟೋರೆಂಟ್‌ವೊಂದನ್ನು  ಆರಂಭಿಸುತ್ತಿದ್ದು, ಅದಕ್ಕೆ 'ಆರಂಭಂ' ಅಂತ ಹೆಸರಿಟ್ಟಿದ್ದಾರೆ. ಈ ರೆಸ್ಟೋರೆಂಟ್ ಅನ್ನು ಏಪ್ರಿಲ್ 16 ರಂದು ಗ್ರ್ಯಾಂಡ್‌ ಒಪನಿಂಗ್ ಮಾಡಲಿದ್ದಾರೆ.

ಇದನ್ನೂ ಓದಿ: Rachitha Ram: 40 ವಯಸ್ಸು ದಾಟಿದ ಮಹಿಳೆಯ ಪಾತ್ರದಲ್ಲಿ ಡಿಂಪಲ್ ಕ್ವೀನ್: ಕಲ್ಟ್ ರೋಲ್‌ ಒಪ್ಪಿಕೊಂಡಿದ್ದೇಕೆ ನಟಿ!

ರಕುಲ್ ಪ್ರೀತ್‌ನ 'ಆರಂಭಂ' ರೆಸ್ಟೋರೆಂಟ್‌ನಲ್ಲಿ ಮಿಲೆಟ್‌ ಆಧಾರಿತ ತಿನಿಸುಗಳನ್ನು ಗ್ರಾಹಕರಿಗೆ ಸೇವೆ ನೀಡಲಾಗುತ್ತದೆ. ಈ ನಟಿ ಆರೋಗ್ಯಕರ ಆಹಾರದ ಕಾನ್ಸೆಪ್ಟ್ ರೆಸ್ಟೋರೆಂಟ್‌ನ ಫುಡ್ ಮೆನ್ಯೂವನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ನಟಿ ರಾಕುಲ್‌ ರೆಸ್ಟೋರೆಂಟ್‌ಗೆ ಬಂದವರಿಗೆ ದೇಹ ಮತ್ತು ಆತ್ಮಕ್ಕೆ ಸಂತೋಷ ನೀಡುವ ಆಹಾರವನ್ನು ನೀಡುವುದು ಉದ್ದೇಶವನ್ನಿ ಇಟ್ಟುಕೊಂಡಿದ್ದಾರೆ.

ಬಾಲಿವುಡ್‌ ನಟಿ ರಕುಲ್ ಪ್ರೀತ್ ಸಿಂಗ್ ರೆಸ್ಟೋರೆಂಟ್ ಉದ್ಯಮ ಮಾತ್ರವಲ್ಲದೇ ಈ ಹಿಂದೆ ಜಿಮ್ ಉದ್ಯಮಕ್ಕೂ ಕೂಡ ಕಾಲಿಟ್ಟಿದ್ದರು. ಈ ನಟಿ ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಜಿಮ್ ಅನ್ನು ತೆರೆದಿದ್ದಾರೆ ಎನ್ನಲಾಗಿದೆ. ಈ ರೀತಿ ಫಿಟ್ನೆಸ್ ಹಾಗೂ ಆರೋಗ್ಯ ಕ್ಷೇತ್ರದ ಉದ್ಯಮದ ಕಡೆ ರಕುಲ್ ಪ್ರೀತ್ ಸಿಂಗ್ ಗಮನ ಹರಿಸಿದ್ದಾರೆ. ಇದೀಗ ಈ ನಟಿ ಹೋಟೆಲ್‌ ಉದ್ಯಮಕ್ಕೆ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News