ಬೆಂಗಳೂರು : ಕೆಜಿಎಫ್, ಕಾಂತಾರ, RRR ಪುಷ್ಟ, ಚಿತ್ರಗಳ ನಂತ್ರ ಭಾರತೀಯ ಚಿತ್ರರಂಗವೇ ದಕ್ಷಿಣದ ಚಿತ್ರಗಳ ಕ್ವಾಲಿಟಿಗೆ ಮತ್ತು ಕ್ಲಾರಿಟಿಗೆ ಫಿದಾ ಆಗಿದೆ. ಬಾಲಿವುಡ್ ಮಂದಿಯೂ ಸೌತ್ ಸಿನಿಮಾಗಳನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಗೆ ಹಾರಿರೋ ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರಗಳ ಹೊಗಳುವ ಭರದಲ್ಲಿ ಸೌತ್ ಸಿನಿಮಾಗಳನ್ನು ತೆಗಳಿ, ಹತ್ತಿದ ಏಣಿಯನ್ನು ಒದೆಯೋ ಕೆಲಸ ಮಾಡಿದ್ದಾರೆ.ಅಷ್ಟಕ್ಕೂ ರಶ್ಮಿಕಾ ಸೌತ್ ಸಿನಿಮಾಗಳ ಬಗ್ಗೆ ಆಡಿದ ಮಾತೇನು ಮುಂದೆ ಓದಿ.
ವಿವಾದ ಅನ್ನೋದು ರಶ್ಮಿಕಾ ಮಂದಣ್ಣ ಬೆನ್ನಿಗೆ ಬಿದ್ದ ಬೇತಾಳದಂತಾಗಿದೆ. ರಶ್ಮಿಕಾ ಏನೇ ಮಾತನಾಡಿದ್ರೂ, ಅಲ್ಲಿ ಒಂದು ಕಾಂಟ್ರವರ್ಸಿ ಇದ್ದೇ ಇರುತ್ತದೆ. ಅದರಿಂದಲೇ ಈ ಲೇಡಿ ಸೂಪರ್ ಸ್ಟಾರ್ ಸಿನಿಮಾಗಳ ಸುದ್ದಿಗಳಿಗಿಂತ
ಹೆಚ್ಚಾಗಿ ಟ್ರೋಲ್ ಮತ್ತು ವಿವಾದಗಳಲ್ಲೇ ರಶ್ಮಿಕಾ ಸಮಾಚಾರ ಸೌಂಡ್ ಮಾಡ್ತಿರುತ್ತದೆ. ಇಷ್ಟು ದಿನ ಕನ್ನಡ ಮತ್ತು ಕನ್ನಡ ಸಿನಿಮಾಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿ ನೆಟ್ಟಿಗರ ತರಾಟೆಯ ಪೆಟ್ಟು ತಿನ್ನುತ್ತಿದ್ದರು ರಶ್ಮಿಕಾ. ಈ ಸಲ ಆದರೆ ಸೌತ್ ಸಿನಿಮಾಗಳ ಬಗ್ಗೆ ಆಡಿರುವ ಹಗುರವಾದ ಮಾತಿನಿಂದಾಗಿ ಪೊಗರು ಹುಡುಗಿಯ ವಿರುದ್ದ ಅಕ್ರೋಶ ಹೆಚ್ಚುವಂತೆ ಮಾಡಿದೆ.
ಇದನ್ನೂ ಓದಿ : Bigg Boss ಶೋ ಕಿಚ್ಚನ ಜಾಗದಲ್ಲಿ ಬೇರೇ ಯಾರನ್ನೂ ಊಹೆ ಕೂಡ ಮಾಡಲು ಸಾಧ್ಯವಿಲ್ಲ.. ಯಾಕೆ ಅಂತೀರಾ?
ರಶ್ಮಿಕಾ ಮಂದಣ್ಣ. ಈ ಹೆಸರು ಬೆಳ್ಳಿತೆರೆ ಮೇಲೆ ಎಷ್ಟು ಫೇಮಸ್ ಆಗಿದೆಯೋ ವಿವಾದದ ಭೂಮಿಯಲ್ಲಿ ಅದಕ್ಕಿಂತ ಒಂದು ಕೈ ಹೆಚ್ಚು ಸದ್ದು ಮಾಡಿದೆ. ಯಾವ ಮಟ್ಟಕ್ಕೆ ಅಂದ್ರೆ ರಶ್ಮಿಕಾ ಹೆಸರು ಹೇಳಿದ್ರೆ ಸಾಕು ಬರೀ ಕಿರಿಕ್ ಮಾಡೋದೆ ಇವರ ಕೆಲಸ ಅಂತ ಹೇಳ್ತಾರೆ. ಯಾಕಂದ್ರೆ ರಶ್ಮಿಕಾ ವಾರಕ್ಕೊಂದರಂತೆ ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ತಾನೆ ಇರ್ತಾರೆ. ಸಿನಿಮಾಗಳು ಅಂದ್ರೆ ದಕ್ಷಿಣ ಭಾರತದ ಮೂವಿಯ ಹಾಗೆಯೇ ಇರಬೇಕು ಅನ್ನೋ ಅಭಿಪ್ರಾಯ ಬಣ್ಣದ ಜಗತ್ತಲ್ಲಿದೆ. ಅಂತಹ ಕಂಟೆಂಟ್ ಜೊತೆ ಸ್ಟಾರ್ಸ್ ಕಾಸ್ಟ್ ಸಿನಿಮಾಗಳು ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮೂಡಿ ಬರುತ್ತಿವೆ. ಹೀಗಾಗಿ ಬಾಲಿವುಡ್ನ ಸಲ್ಲು, ಶಾರುಖ್, ಅಮೀರ್, ಅಕ್ಷಯ್, ಆಲಿಯಾ ಭಟ್, ಜಾಕ್ವೆಲೀನ್, ದೀಪಿಕಾ, ಐಶ್ವರ್ಯ ರೈ ಸಂಜಯ್ ದತ್, ರವೀನ ಟಂಡಾನ ಹೀಗೆ ದೊಡ್ಡ ದೊಡ್ಡ ಸ್ಟಾರ್ಸ್ ಸೌತ್ ಸಿನಿಮಾಗಳಲ್ಲಿ ನಟಿಸೋಕೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ರಶ್ಮಿಕಾ ಮಾತ್ರ ಬಾಲಿವುಡ್ ವ್ಯಾಮೋಹದಲ್ಲಿ ಮುಳುಗಿದ್ದಾರೆ. ಹೀಗಾಗಿ ಸೌತ್ ಸಿನಿಮಾರಂಗದ ಹಾಡುಗಳಿಗಿಂತ ಬಾಲಿವುಡ್ ಸಾಂಗ್ಸ್ ಬೆಸ್ಟ್ ಅಂತ ಹೇಳಿಕೆ ಕೊಟ್ಟು ಮತ್ತೆ ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.
ಇದನ್ನೂ ಓದಿ : ಒಂದೇ ಹೋಟೆಲ್‌ನಲ್ಲಿ ರಶ್ಮಿಕಾ - ವಿಜಯ್ ನ್ಯೂ ಇಯರ್ ಸೆಲಿಬ್ರೆಷನ್!?
ರಶ್ಮಿಕಾ ಮಂದಣ್ಣಗೆ ಇದ್ದದ್ದು ತಾನು ಬಾಲಿವುಡ್ನಲ್ಲಿ ಮಿಂಚಿ ಮೆರದಾಡಬೇಕು ಅನ್ನೋ ಆಸೆ. ಇದನ್ನ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಹಲವು ಭಾರಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಆ ಗುರಿಯಲ್ಲೇ ಸಾಗಿರೋ ಲಿಲ್ಲಿ ಬಾಲಿವುಡ್ನಲ್ಲಿ ಈಗ ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾಗಳನ್ನ ಮಾಡುತ್ತಿದ್ದಾರೆ. ಈ ನಡುವೆ ರೊಮ್ಯಾಂಟಿಕ್ ಹಾಡುಗಳನ್ನು ಕಟ್ಟಿಕೊಡುವಲ್ಲಿ ಬಾಲಿವುಡ್ ಚಿತ್ರರಂಗ ಬೆಸ್ಟ್. ಸೌತ್‌ನ ಸಾಂಗ್‌ಗಳಲ್ಲಿ ಮಾಸ್ ಮತ್ತು ಮಸಾಲಾ ಹೆಚ್ಚಾಗಿರುತ್ತೆ ಎಂದು ಹೇಳಿದ್ದಾರೆ. ಇದೇ ಹೇಳಿಕೆ ಸೌತ್ ಸಿನಿ ಪ್ರೇಕ್ಷಕರಿಗೆ ಅಸಮಾಧಾನಕ್ಕೂ ಕಾರಣ ಆಗಿದ್ದು, ಸ್ಯಾಂಡಲ್ವುಡ್ನಲ್ಲಿ ಕಿರಿಕ್ ಮಾಡ್ಕೊಂಡು ಟಾಲಿವುಡ್ನಲ್ಲೂ ಈಗ ಮುಖ ಕೆಡಸಿಕೊಳ್ಳುತ್ತಿದ್ದಾರೆ. ಜೊತೆಗೆ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.